Best Film Of The Year: ಖ್ಯಾತ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿಯವರ ದಿ ಕಾಶ್ಮೀರ್ ಫೈಲ್ಸ್ ಪ್ರಪಂಚದಾದ್ಯಂತ ಸದ್ದು ಮಾಡಿ ಯಶಸ್ವಿಗಳಿಸಿತ್ತು. ಒಂದರ ನಂತರ ಒಂದರಂತೆ ಪ್ರಶಂಸೆಗಳನ್ನು ಗಳಿಸುತ್ತಿದೆ. ಅದರ ಬೆನ್ನಲೇ ಇಡಿ ಚಿತ್ರತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ಬ್ಲಾಕ್ ಬಷ್ಟರ್ ಸಿನಿಮಾಗಳಲ್ಲಿ ಒಂದಾಗಿರುವ ದಿ ಕಾಶ್ಮೀರ್ ಫೈಲ್ಸ್ ಗಲ್ಲಾಪೆಟ್ಟಿಗೆಯಲ್ಲಿ ಬಾರಿ ಕಲೆಕ್ಷನ್ ಜೊತೆಗೆ ಪ್ರೇಕ್ಷಕರ ಮನಗೆದ್ದ ಸಿನಿಮಾವಾಗಿದೆ. 'ವರ್ಷದ ಅತ್ಯುತ್ತಮ ಚಲನಚಿತ್ರಗಳ ಪಟ್ಟಿಯಲ್ಲಿ ಅಂದರೆ ಐಕಾನಿಕ್ ಗೋಲ್ಡ್ ಅವಾರ್ಡ್ಸ್ ಗೆಲ್ಲುವ ಮೂಲಕ ಮತ್ತೊಂದು ಗರಿ ಒದಗಿದೆ.
ಇದನ್ನೂ ಓದಿ: weekend with Ramesh season 5: ಮಾ.25 ರಿಂದ ಆರಂಭಗೊಳ್ಳಲಿದೆ 'ವೀಕೆಂಡ್ ವಿತ್ ರಮೇಶ್ʼ ಸೀಸನ್ 5'
'ದಿ ವ್ಯಾಕ್ಸಿನ್ ವಾರ್' ನ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿ ಇದ್ದ ಕಾರಣ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆ ಯಾಚಿಸುತ್ತೇನೆಂದು ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
Thank you #IconicGoldAwards2023 for the honour. I apologise for not being able to attend as I am locked in for the post production of #TheVaccineWar. Thanks, again from everyone at @i_ambuddha. pic.twitter.com/4zbfd4n57M
— Vivek Ranjan Agnihotri (@vivekagnihotri) March 19, 2023
ಇದನ್ನೂ ಓದಿ: Urfi Javed : ʼನಮ್ಮ ಮಹಿಳೆಯರು ಸೋಮಾರಿ’ ಹೇಳಿಕೆಗೆ ತಿರುಗೇಟು ನೀಡಿದ ಉರ್ಫಿ!
ಇವರ ಮುಂಬರುವ ಚಿತ್ರ ದಿ ವ್ಯಾಕ್ಸಿನ್ ವಾರ್ 2023 ಆಗಸ್ಟ್ 15, ರಂದು 11 ಭಾಷೆಗಳಲ್ಲಿ ಬಿಡುಗಡೆ ಮಾಡಲಿರುವ ದಿ ವ್ಯಾಕ್ಸಿನ್ ವಾರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಚಿತ್ರೀಕರಿಸಿದ ಅತ್ಯಂತ ಭರವಸೆಯ ಚಿತ್ರಗಳಲ್ಲಿ ಒಂದಾಗಿದೆ ಎಂದು ಅಗ್ನಿಹೋತ್ರಿ ಭರವಸೆ ಕೊಟ್ಟಿದ್ದಾರೆ. ಚಲನಚಿತ್ರ ನಿರ್ಮಾಪಕರು ಐಕಾನಿಕ್ ಗೋಲ್ಡ್ ಅವಾರ್ಡ್ಸ್ 2023 ರ ಪೋಸ್ಟರ್ ಜೊತೆಗೆ ಪಲ್ಲವಿ ಜೋಶಿ ಪ್ರಶಸ್ತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.