ವಿಶ್ವದ 5ನೇ ಅತಿ ದೊಡ್ಡ ವಜ್ರದ ಉಂಗುರ ತಮನ್ನಾ ಕೈಯಲ್ಲಿ..! ನಟಿಗೆ ರಾಮ್ ಚರಣ್ ಪತ್ನಿ ಗಿಫ್ಟ್
Tamannaah Bhatia dimond ring : ಮಿಲ್ಕಿ ಬ್ಯೂಟಿ ತಮನ್ನಾ ವಿಶ್ವದ ಐದನೇ ಅತಿ ದೊಡ್ಡ ವಜ್ರದ ಉಂಗುರವನ್ನು ಹೊಂದಿದ್ದಾರೆ. ಇದರ ಮೌಲ್ಯ ರೂ. 2 ಕೋಟಿ ರೂ. ಇನ್ನೊಂದು ವಿಶೇಷ ಅಂದ್ರೆ ಇಂತಹ ಬೆಲೆ ಬಾಳುವ ಉಂಗುರವನ್ನು ತಮನ್ನಾಗೆ ಗಿಫ್ಟ್ ನೀಡಲಾಗಿದೆ. ಯಾರು ಉಡುಗೂರೆಯಾಗಿ ಕೊಟ್ಟು ಅಂತೀರಾ.. ಜಸ್ಟ್ ಸುದ್ದಿ ಓದಿ..
Tamannaah dimond ring : ಇತ್ತೀಚಿಗೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರದದಿಂದ ಸುದ್ದಿಯಲ್ಲಿರುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಲಸ್ಟ್ ಸ್ಟೋರಿ 2 ಚಿತ್ರದಲ್ಲಿ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ವೈರಲ್ ಆಗಿದ್ದರು. ಇದೀಗ ಡೈಮಂಡ್ ರಿಂಗ್ ವಿಚಾರವಾಗಿ ಚರ್ಚೆಯಲ್ಲಿದ್ದಾರೆ.
ಹೌದು.. ದಕ್ಷಿಣ ಚಿತ್ರಗಳಲ್ಲಿ ಮತ್ತು ಬಾಲಿವುಡ್‌ನಲ್ಲಿ ನಿರತರಾಗಿರುವ ಸುಂದರಿ, ಇತ್ತೀಚೆಗೆ ಜೀ ಕರ್ದಾ ಮತ್ತು ಲಸ್ಟ್ ಸ್ಟೋರೀಸ್ 2 ಚಿತ್ರಗಳಲ್ಲಿ ನಟಿಸಿದರು. ಈ ಸಿನಿಮಾಗಳು ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಗಳಿಸಿತು. ಈ ಚಿತ್ರಕ್ಕಾಗಿ ತಮನ್ನಾ ಮೊದಲಬಾರಿಗೆ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಟೀಕೆಗೆ ಗುರಿಯಾಗಿದ್ದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ನಡೆದ ವಿಶ್ವ ಕುಂದಾಪುರ ಕನ್ನಡ ಹಬ್ಬ ಸಂಭ್ರಮಿಸಿದ ರಾಜ್ ಬಿ ಶೆಟ್ಟಿ & ರಿಶಬ್
ಅಲ್ಲದೆ, ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇಬ್ಬರು ಸಿನಿಮಾಗಳಲ್ಲಿ ರೊಮ್ಯಾನ್ಸ್ ಮಾಡಿ ಸಾಕಷ್ಟು ಚರ್ಚೆಗೆ ಕಾರಣರಾಗಿದ್ದರು. ಇದೀಗ ತಮನ್ನಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಿಲ್ಕ್ ಬ್ಯೂಟಿ ವಿಶ್ವದ ಐದನೇ ಅತಿ ದೊಡ್ಡ ವಜ್ರವನ್ನು ಧರಿಸಿ ಎಲ್ಲರಿಗೂ ಶಾಕ್ ನೀಡಿದ್ದಾಳೆ. ಆಕೆಗೆ ಇಷ್ಟು ದೊಡ್ಡ ವಜ್ರದ ಉಂಗುರ ಹೇಗೆ ಸಿಕ್ಕಿತು ಎಂದು ತಿಳಿದುಕೊಳ್ಳೋಣ.
Anika Surendran: ಬೋಲ್ಡ್ ಟ್ರೇಡಿಷನಲ್ ಲುಕ್ನಲ್ಲಿ ಮಿಂಚಿದ ಓ ನನ್ನ ಕಣ್ಣೆ... ಹಾಡಿನ ಬೆಡಗಿ ಅನಿಕಾ ಸುರೇಂದ್ರನ್
ಇತ್ತೀಚಿಗೆ ತಮನ್ನಾ ಈ ಉಂಗುರ ಧರಿಸಿ ಫೋಟೋವನ್ನು ಶೇರ್ ಮಾಡಿದ ನಂತರ ಈ ವಿಚಾರ ಬಯಲಿಗೆ ಬಂದಿದೆ. ಇತ್ತೀಚೆಗಷ್ಟೇ ತಮನ್ನಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಉಪಾಸನಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ತಮನ್ನಾ ರಜನಿಕಾಂತ್ ಜೊತೆ ಜೈಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದೆಡೆ ಚಿರಂಜೀವಿ ಭೋಲಾಶಂಕರ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.