Kundapura Festival: ಬೆಂಗಳೂರಿನಲ್ಲಿ ನಡೆದ ವಿಶ್ವ ಕುಂದಾಪುರ ಕನ್ನಡ ಹಬ್ಬ ಸಂಭ್ರಮಿಸಿದ ರಾಜ್​ ಬಿ ಶೆಟ್ಟಿ & ರಿಶಬ್‌

ಪ್ರತಿ ಆಶಾಡ ಅಮಾವಾಸೆ  ದಿನ ವಿಶ್ವ ಕುಂದಾಪುರ ದಿನಾ ಅಂತ ಆಚರಣೆ ಮಾಡ್ತಾ ಇದ್ರು. ಕಳೆದ 5 ವರ್ಷದಿಂದ ಕುಂದಾಪುರದವರೆಲ್ಲ ಸೇರಿ ಕುಂದಾಪುರ ಕನ್ನಡ ಪ್ರತಿಷ್ಠಾನದಿಂದ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.ಇಂದು ಮೊದಲಿಗೆ ಕುಂದಾಪುರದ ರಥವನ್ನು  ಶಾಸಕರಾದ ಗುರುರಾಜ್ ‌ಗಂಟಿಹೊಳೆ,ಕಿರಣ್ ಕೊಡ್ಗಿ ,ಕಂಬಳದ ಧುರೀಣರಾದ ಶಾಂತರಾಮ್ ಶೆಟ್ಟಿ ಬಾರ್ಕೂರ್  ಎಳೆದು ಸಂಸ್ಕ್ರತಿಯನ್ನ ಮರೆಸಿದ್ರು.. ಹಾಗೇ ಕಾರ್ಯಕ್ರಮದ ಉದ್ಘಾಟನೆ ಸಾಂಪ್ರದಾಯಿಕವಾಗಿದ್ದು  ಕಂಬಕ್ಕೆ ಕುಂದಾಪುರ ದಿನದ ಲೋಗೋವನ್ನು ಏರಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ದೀಪಕ್ ಶೆಟ್ಟಿ,  ರಾಘವೇಂದ್ರ ಕಾಂಚನ್, ಅಜಿತ್ ಶೆಟ್ಟಿ ಉಳ್ತೂರು ಉಪಸ್ಥಿತಿತರಿದ್ದರು. ಉದ್ಘಾಟನೆ ಬಳಿಕ ಯಕ್ಷಗಾನ,ಹಾಡು ನಾಟಕಗಳು ಜನಸಂಭ್ರಮವನ್ನು ಹೆಚ್ಚು ಮಾಡಿತು

Written by - Zee Kannada News Desk | Last Updated : Jul 24, 2023, 06:31 PM IST
Kundapura Festival: ಬೆಂಗಳೂರಿನಲ್ಲಿ ನಡೆದ ವಿಶ್ವ ಕುಂದಾಪುರ  ಕನ್ನಡ ಹಬ್ಬ ಸಂಭ್ರಮಿಸಿದ ರಾಜ್​ ಬಿ ಶೆಟ್ಟಿ & ರಿಶಬ್‌ title=

ಬೆಂಗಳೂರು: ಪ್ರತಿ ಆಶಾಡ ಅಮಾವಾಸೆ  ದಿನ ವಿಶ್ವ ಕುಂದಾಪುರ ದಿನಾ ಅಂತ ಆಚರಣೆ ಮಾಡ್ತಾ ಇದ್ರು. ಕಳೆದ 5 ವರ್ಷದಿಂದ ಕುಂದಾಪುರದವರೆಲ್ಲ ಸೇರಿ ಕುಂದಾಪುರ ಕನ್ನಡ ಪ್ರತಿಷ್ಠಾನದಿಂದ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.ಇಂದು ಮೊದಲಿಗೆ ಕುಂದಾಪುರದ ರಥವನ್ನು  ಶಾಸಕರಾದ ಗುರುರಾಜ್ ‌ಗಂಟಿಹೊಳೆ,ಕಿರಣ್ ಕೊಡ್ಗಿ ,ಕಂಬಳದ ಧುರೀಣರಾದ ಶಾಂತರಾಮ್ ಶೆಟ್ಟಿ ಬಾರ್ಕೂರ್  ಎಳೆದು ಸಂಸ್ಕ್ರತಿಯನ್ನ ಮರೆಸಿದ್ರು.. ಹಾಗೇ ಕಾರ್ಯಕ್ರಮದ ಉದ್ಘಾಟನೆ ಸಾಂಪ್ರದಾಯಿಕವಾಗಿದ್ದು  ಕಂಬಕ್ಕೆ ಕುಂದಾಪುರ ದಿನದ ಲೋಗೋವನ್ನು ಏರಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ದೀಪಕ್ ಶೆಟ್ಟಿ,  ರಾಘವೇಂದ್ರ ಕಾಂಚನ್, ಅಜಿತ್ ಶೆಟ್ಟಿ ಉಳ್ತೂರು ಉಪಸ್ಥಿತಿತರಿದ್ದರು. ಉದ್ಘಾಟನೆ ಬಳಿಕ ಯಕ್ಷಗಾನ,ಹಾಡು ನಾಟಕಗಳು ಜನಸಂಭ್ರಮವನ್ನು ಹೆಚ್ಚು ಮಾಡಿತು

ಇದನ್ನೂ ಓದಿ: Anika Surendran: ಬೋಲ್ಡ್‌ ಟ್ರೇಡಿಷನಲ್‌ ಲುಕ್ನಲ್ಲಿ ಮಿಂಚಿದ ಓ ನನ್ನ ಕಣ್ಣೆ... ಹಾಡಿನ ಬೆಡಗಿ ಅನಿಕಾ ಸುರೇಂದ್ರನ್

ನೃತ್ಯ,ಮಾತಿನ ಚಾವಡಿ,ಖಾದ್ಯ ವೈವಿದ್ಯ, ಟೀಮ್ ಕುಂದಾಪುರಿಯನ್ಸ್ ತಂಡದಿಂದ ಮಿಂಚುಳ- ಇದ್ ಕತ್ಲಿ-ಬೆಳಗಿನ ಕಥಿ ಎಂಬ ವಿಶೇಷ ನಾಟಕ‌ವನ್ನು ನೆರೆದವರಿಗೆ ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಮತ್ತು ಕನಸ್ಸಿನ ಕುಂದಾಪುರ ‌ಜನರಿಗೆ ಊಣ ಬಡಿಸಿದ್ರು.ಹಾಗೇ ಕರಾವಳಿಯ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಗ್ರಾಮೀಣ ಕ್ರೀಡಾಕೂಟವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ ಅವರು ತಾವೇ ಸ್ವತಃ ಹಣೆ ಬೊಂಡ ಓಟದಲ್ಲಿ ಭಾಗಿಯಾಗುದ್ರ ಮೂಲಕ ಬಾಲ್ಯವನ್ನು ನೆನೆಸಿಕೊಂಡರು. ವಯಸ್ಕರರಿಗಾಗಿ ಹಗ್ಗ ಜಗ್ಗಾಟ, ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆಗಳು, ಮಕ್ಕಳಿಗೆ ಹೂವಾಡಗಿತ್ತಿ, ಸೈಕಲ್ ಟೈರ್ ಓಟ, ಹಣೆಬೊಂಡ ಓಟ, ಗಿರ್ಗಿಟ್ಲೆ ಓಟ, ಚಿತ್ರಕಲೆ, ಮಹಿಳೆಯರಿಗೆ ಹಲಸಿನ ಕೊಟ್ಟೆ ಕಟ್ಟುವುದು ಇನ್ನಿತರ ಸ್ಪರ್ಧೆಗಳು ಹಬ್ಬದ ಬಯಲಿನ ಕಲರವವನ್ನು ಇಮ್ಮಡಿಗೊಳಿಸಿದೆ

ಇದನ್ನೂ ಓದಿ: ರೀಲಿಸ್‌ ಗೂ ಮುನ್ನವೇ ಗೂಗಲ್​ ಸರ್ಚ್ ಲೀಸ್ಟ್‌ ನಲ್ಲಿ ಅಬ್ಬರಿಸುತ್ತಿರೋ ರಾಜ್ ಬಿ ಶೆಟ್ಟಿ ನಟನೆಯ ʼಟೋಬಿʼ

ಕುಂದಾಪುರದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ  ಹಾಲುಬಾಯಿ, ಕೊಟ್ಟೆ ಕಡುಬು, ಗೋಲಿಬಜೆ, ಬನ್ಸ್,  ಸುಕ್ಕಿನ್ ಉಂಡೆ, ಎಳ್ ಬಾಯ್ರ್, ಹೆಸ್ರು ಬಾಯ್ರ್ ನಂತಹ ವಿವಿಧ ಪಾನಕಗಳು ವಿಶೇಷವಾಗಿತ್ತು.ಹಾಗೇ ಹಬ್ಬದ ವಿಶೇಷ ತರಕಾರಿ ಊಟ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬರಿಯಾನಿ, ಚಟ್ಲಿ ಸಾರು ಇನ್ನಿತರ  ಅಪರೂಪದ ಖಾದ್ಯಗಳು ಕುಂದಾಪ್ರ ಕನ್ನಡ ಹಬ್ಬವನ್ನು ಮತ್ತಷ್ಟು ರಂಗು ಮಾಡಿತು.

ಒಟ್ನಲ್ಲಿ ಕುಂದಾಪುರ ಪ್ರತಿಷ್ಟಾನ ಬೆಂಗಳೂರು ಪ್ರತಿ ವರ್ಷದಂತೆ ಈ ಭಾರಿಯು  ವಿಶ್ವ ಕುಂದಾಪುರ ಕನ್ನಡ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ಕನ್ನಡಿಗರಿಗೆ ಊರಿನ ಅನುಭವದಲ್ಲಿ ಮಿಂದು ಖುಷಿ ಪಟ್ಟರು. ಒಟ್ಟಿನಲ್ಲಿ  ಕುಂದಾಪುರ ಭಾಷೆ,ಸಂಸ್ಕ್ರತಿ ವೈಭವ ನೆರೆದವರನ್ನ ಸಂಸ್ಕ್ರತಿಯ ಕಡಲಲ್ಲಿ ಮಿಂದೇಳಿಸಿದಂತು ಸುಳ್ಳಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾ

Trending News