ಓ.. ʼಕಾಂತಾರʼದಲ್ಲಿ ಮೂಡಿತು ಪ್ರಜಾಕೀಯ ಚುನಾವಣಾ ಪ್ರಚಾರ..! ವಿಡಿಯೋ ನೋಡಿ
ದೇಶಾದ್ಯಂತ ಕಾಂತಾರ ಚಿತ್ರಮಂದಿರಗಳಲ್ಲಿ ಅಬ್ಬರಿಸಿ ಓಟಿಟಿಯಲ್ಲಿಯೂ ಸಹ ಉತ್ತಮ ವೀಕ್ಷಣೆ ಪಡೆದಿದೆ. ರಿಷಬ್ ಶೆಟ್ಟಿ ಸಿನಿಮಾಗೆ ಭಾರತೀಯ ಸಿನಿ ಪ್ರೇಕ್ಷಕ ಫಿದಾ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲದೆ, ಈ ಚಿತ್ರದಲ್ಲಿನ ಉತ್ತಮ ನಟನೆ ಮತ್ತು ನಿರ್ದೇಶನಕ್ಕಾಗಿ ರಿಷಬ್ ಶೆಟ್ಟಿಯವರಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಗೌರವ ಸಹ ಲಭಿಸಿದೆ. ಇದೀಗ ಕಾಂತಾರದ ಸಿನಿಮಾದ ದೃಶ್ಯ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
Prajakeeya Kantara video : ದೇಶಾದ್ಯಂತ ಕಾಂತಾರ ಚಿತ್ರಮಂದಿರಗಳಲ್ಲಿ ಅಬ್ಬರಿಸಿ ಓಟಿಟಿಯಲ್ಲಿಯೂ ಸಹ ಉತ್ತಮ ವೀಕ್ಷಣೆ ಪಡೆದಿದೆ. ರಿಷಬ್ ಶೆಟ್ಟಿ ಸಿನಿಮಾಗೆ ಭಾರತೀಯ ಸಿನಿ ಪ್ರೇಕ್ಷಕ ಫಿದಾ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲದೆ, ಈ ಚಿತ್ರದಲ್ಲಿನ ಉತ್ತಮ ನಟನೆ ಮತ್ತು ನಿರ್ದೇಶನಕ್ಕಾಗಿ ರಿಷಬ್ ಶೆಟ್ಟಿಯವರಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಗೌರವ ಸಹ ಲಭಿಸಿದೆ. ಇದೀಗ ಕಾಂತಾರದ ಸಿನಿಮಾದ ದೃಶ್ಯ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಹೌದು... ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಕಾವು ಹೆಚ್ಚುತ್ತಿದೆ. ಸ್ಪರ್ಧಿಗಳು, ಆಕಾಂಕ್ಷಿಗಳು ಈಗಾಗಲೇ ಮತ ಬೇಟೆ ಶುರು ಮಾಡಿದ್ದಾರೆ. ಈ ನಡುವೆ ಉಪೇಂದ್ರ ಅವರ ಪ್ರಜಾಕೀಯ ಪಕ್ಷ ಕೂಡ ಚುನಾವಣಾ ರಣಕಣದಲ್ಲಿ ಹೊರಾಡಲು ಸಿದ್ಧವಾಗಿದೆ. ಇದೀಗ ಪ್ರಜಾಕೀಯ ಬೆಂಬಲಿಗರು ಕಾಂತಾರ ಸಿನಿಮಾದ ದೃಶ್ಯವೊಂದನ್ನು ಇಟ್ಟುಕೊಂಡು ಚುನಾವಣಾ ಜಾಗೃತಿ ಮೂಡಿಸುವುದರ ಜೊತೆಗೆ ಪ್ರಜಾಕೀಯ ಪ್ರಚಾರ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಪವಿತ್ರಾ ಲೋಕೇಶ್ ಭಾವಿ ಪತಿ ನರೇಶ್ ಮನೆ ಮೇಲೆ ಅಪರಿಚಿತರಿಂದ ದಾಳಿ..!
ಕಾಂತಾರ ಸಿನಿಮಾದಲ್ಲಿ ಮೊದಲಿಗೆ ಬರುವ ಭೂತಕೋಲದ ದೃಶ್ಯದಲ್ಲಿ, ದೈವ ನರ್ತಕನಿಗೆ ತನ್ನ ಹಿರಿಯರು ನೀಡಿದ ಭೂಮಿಯನ್ನು ಹಿಂದಿರುಗಿಸಿ ನೀಡುವಂತೆ ಊರಿನ ಧಣಿ ಕೇಳುವ ದೃಶ್ಯವನ್ನು ಎಡಿಟ್ ಮಾಡಲಾಗಿದೆ. ಮೂಲ ಧ್ವನಿಯನ್ನು ಎಡಿಟ್ ಮಾಡಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಅದರಲ್ಲಿ, ಜನಪ್ರತಿನಿಧಿಗಳ ತೊರಿಸುವ ಆಸೆ ಆಕಾಂಕ್ಷೆಗಳಿಗೆ ಬಲಿಯಾಗಬೇಡಿ ಎಂದು ಹೇಳಲಾಗಿದೆ. ಅಲ್ಲದೆ, ಧಣಿಯ ಧ್ವನಿಯಲ್ಲಿ ʼಸೀರೆ, ಸಾರಾಯಿ, ಹಣವನ್ನು ಈ ಜನರಿಗೆ ಹಂಚುತ್ತೇನೆ. ಅವರ ಮತವನ್ನು ನನಗೆ ಹಾಕಿಸಿಕೊಡಬೇಕು’ ಎಂದು ದೈವದ ಬಳಿ ರಾಜಕೀಯ ನಾಯಕ ಬೇಡಿಕೆ ಇಡುವ ರೀತಿಯಲ್ಲಿ ಹಿನ್ನೆಲೆ ಧ್ವನಿ ನೀಡಲಾಗಿದೆ.
ಇನ್ನು ರಾಜಕೀಯ ನಾಯಕನ ಮಾತಿಗೆ ದೈವ ನರ್ತಕ, ಬಹಳ ಒಳ್ಳೆಯ ಪ್ರಾರ್ಥನೆ.. ಬಹಳ ಒಳ್ಳೆಯ ಪ್ರಾರ್ಥನೆ.. ಈ ಊರಿನವರ ಮತವನ್ನು ನಿಮಗೆ ಹಾಕಿಸಿಕೊಡುತ್ತೇನೆ. ಆದ್ರೆ ಇಲ್ಲಿಯವರೆಗೆ ಇವರು ಕಟ್ಟಿದ ತೆರಿಗೆ ಹಣವನ್ನು ಹಿಂದಿರುಗಿಸಿಕೊಡುವಿರಾ ರಾಜಕೀಯ ನಾಯಕರೇ? ಅಂತ ದೈವ ಮರುಪ್ರಶ್ನೆ ಕೇಳುತ್ತದೆ. ದೈವ ಹೇಳಿದ್ದಕ್ಕೆ ಆತ ಒಪ್ಪುವುದಿಲ್ಲ. ಅಲ್ಲದೆ, ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುತ್ತೇನೆ ಎಂದು ಹೇಳುತ್ತಾನೆ.
ಇದನ್ನೂ ಓದಿ: Sonu Sood: ಸೋನು ಸೂದ್ ಹೆಸರಿನ ಭಾರತದ ಅತಿದೊಡ್ಡ ಪ್ಲೇಟ್
ಅದಕ್ಕೆ ಉತ್ತರಿಸುವ ದೈವ, ಓ..... ʼಸೀರೆ, ಸಾರಾಯಿ ಹಂಚ್ತಿ.. ಆದ್ರೆ ಇದರ ತೀರ್ಮಾನವನ್ನು ಮತಗಟ್ಟಲೆಯಲ್ಲಿ ನಾನು ಮಾಡ್ತೇನೆ. ಈ ತೆರಿಗೆ ಹಣ ಊರಿನವರದ್ದು. ಅದರ ತೀರ್ಮಾನ ಇಂದಲ್ಲ. ಮುಂದೊಂದು ದಿನ ಪ್ರಜಾಕೀಯ ಬಂದಾಗ ಆಗುತ್ತದೆʼ ಎಂದು ಹೇಳುವ ಮೂಲಕ ಜಾಗೃತಿಯ ಜೊತೆ ಪ್ರಜಾಕೀಯ ಪ್ರಚಾರ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ಈ ವಿಡಿಯೋಗೆ ಕೇಳಿ ಬಂದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.