ಬೆಂಗಳೂರು : ಎಲ್ಲಾ ರಾಜಕೀಯ ಪಕ್ಷದ ನಾಯಕರು, ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುವವರು ಆದ್ರೆ ಯಾರೂ ಮಾಡಲ್ಲ. ನಿಜವಾದ ಪ್ರಣಾಳಿಕೆ ಅಂದ್ರೆ ಸಾರ್ವಜನಿಕರ ಎಲ್ಲಾ ಸಂಪತ್ತು ಮತ್ತು ತೆರಿಗೆ ಹಣದ ಸಂಪೂರ್ಣ ವಿವರಗಳನ್ನು ಪಾರದರ್ಶಕತೆಯಿಂದ ತೆರೆದಿಡಬಹುದಲ್ಲವೇ.. ? ಎಂದು ನಟ, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಅವರು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಎಲ್ಲಾ ರಾಜಕೀಯ ಪಕ್ಷದ ನಾಯಕರು, ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುವವರು, “ಸಾರ್ವಜನಿಕರ ಎಲ್ಲಾ ಸಂಪತ್ತು ಮತ್ತು ತೆರಿಗೆ ಹಣದ ಸಂಪೂರ್ಣ ಒಳ ಮತ್ತು ಹೋರ ಹರಿವಿನ ವಿವರ ಹಳ್ಳಿ, ವಾರ್ಡ್, ಜಿಲ್ಲೆ, ತಾಲೂಕು ಮಟ್ಟದಿಂದ ಸಾರ್ವಜನಿಕರಿಗೆ ಪಾರದರ್ಶಕತೆಯಿಂದ ತೆರೆದಿಡಬಹುದಲ್ಲವೇ..? ನಿಜವಾಗಿ ಬೇಕಾಗಿರುವ ಪ್ರಣಾಳಿಕೆ ! ಇದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Television Cricket League: ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4ರ ಜೆರ್ಸಿ ಬಿಡುಗಡೆ: ಹೇಗಿದೆ ನೋಡಿ ‘ಟ್ರೋಫಿ’


 


ಅಲ್ಲದೆ, ರಾಜಕೀಯ ಪಕ್ಷಗಳ ಅಭಿಮಾನಿಗಳಿಗೆ ಪ್ರಶ್ನೆ ಮಾಡಿರುವ ಬುದ್ದಿವಂತ ʼನಿಮ್ಮ ಪಕ್ಷದ ಮತ್ತು ನಾಯಕರ ಸಿದ್ಧಾಂತ ಯಾವ ರೀತಿಯಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಉಪಯೋಗವಾಗುತ್ತಿದೆ..? ನಿಮಗೆ ನಿಮ್ಮ ತೆರಿಗೆ ಹಣ, ನಿಮ್ಮ ದೇಶದ ನೆಲ, ಜಲ, ಅರಣ್ಯ, ಖನಿಜ ಇನ್ನೂ ಅನೇಕ ನೈಸರ್ಗಿಕ ಸಂಪತ್ತಿನ ಮೌಲ್ಯ ಎಷ್ಟಿದೆ ಮತ್ತು ಎಷ್ಟು ನಿಮ್ಮ ಉಪಯೋಗಕ್ಕೆ ಸಿಗುತ್ತಿದೆ ಎಂಬ ಮಾಹಿತಿ ಇದೆಯೇ..? ಎಂದು ಕೇಳಿದ್ದಾರೆ.


ಪ್ರಜಾಕೀಯ ಕುರಿತು ಪ್ರಶ್ನೆ ಎತ್ತಿರುವ ನೆಟ್ಟಿಗರಿಗೆ ಉಪೇಂದ್ರ ಅವರು ತಮ್ಮದೇ ಶೈಲಿಯಲ್ಲಿ ಉತ್ತರ ನೀಡುವ ಮೂಲಕ ಸ್ಪಷ್ಟತೆ ನೀಡುತ್ತಿದ್ದಾರೆ. ಅಲ್ಲದೆ, ನಿಜವಾದ ರಾಜಕೀಯ ಅಂದ್ರೆ ಏನು ಎಂದು ಜನರಿಗೆ ತಿಳಿ ಹೇಳಲು ಹೋರಟಿದ್ದಾರೆ. ಪಕ್ಷದ ಸಿದ್ದಾಂತವನ್ನೇ ನಂಬಿಕೊಂಡು ಕುಳಿತಿರುವ ಅಭಿಮಾನಿಗಳಿಗೆ ನಿಮ್ಮ ಪಕ್ಷದ ಸಿದ್ದಾಂತಗಳಿಂದ ನಿಮ್ಮ ಹಾಗೂ ನಿಮ್ಮ ಕುಟುಂಬಕ್ಕೆ ಏನು ಉಪಯೋಗವಾಗಿದೆ ಎಂದು ಕೇಳುವ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.