Upendra UI teaser : ಸ್ಯಾಂಡಲ್​ವುಡ್​ ಸೂಪರ್‌ ಸ್ಟಾರ್‌ ನಟ, ನಿರ್ದೇಶಕ ರಿಯಲ್​ ಸ್ಟಾರ್​ ನಟ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗಿದೆ.


COMMERCIAL BREAK
SCROLL TO CONTINUE READING

ಹೌದು.. ಈ ಸಮಯಕ್ಕಾಗಿ ಬಹಳಷ್ಟು ದಿನದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರಿಗೆ ಇದೀಗ ಚಿತ್ರತಂಡ ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡುವ ಮೂಲಕ ಉಪೇಂದ್ರ ಹುಟ್ಟು ಹಬ್ಬ ಮತ್ತು ಗಣೇಶ ಹಬ್ಬದ ಗಿಫ್ಟ್‌ ನೀಡಿದೆ. ಈ ಚಿತ್ರ ಟೈಟಲ್‌ನಿಂದಲೇ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಅಲ್ಲದೆ, ಬಹಳಷ್ಟು ದಿನಗಳ ಬಳಿಕ ಉಪ್ಪಿ ಡೈರಕ್ಟರ್​ ಕ್ಯಾಪ್​ ತೊಟ್ಟಿದ್ದಾರೆ.


49 ರಲ್ಲೂ 20ರ ಕಾಂತಿ..! ಮಲೈಕಾ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ..


ಇನ್ನು ಟೀಸರ್‌ ರಿಲೀಸ್‌ ವೇಳೆ ಅಭಿಮಾನಿಗಳು ವೇದಿಕೆ ಮೇಲೆ ಬಂದು ಟೀಸರ್‌ ಬಿಡುಗಡೆ ಮಾಡಬಾರದು ಅಂತ ಗಲಾಟೆ ತಗೆದರು. ಈ ವೇಳೆ ಫ್ಯಾನ್ಸ್‌ ಅಭಿಮಾನಿಗಳು ತಲೆ ಎತ್ತಿ ನೋಡುವಂತೆ ಟೀಸರ್‌ ರಿಲೀಸ್‌ ಮಾಡ್ತೀನಿ ಅಂದು ಇವಾಗ ಹೀಗೆ ಮಾಡಿದ್ರೆ ಹೇಗೆ ಅಂದ್ರು, ಆಗ ಉಪ್ಪಿ ಮತ್ತು ಶಿವಣ್ಣ ಸಮಾಧಾನ ಮಾಡಿದರು. ಅಲ್ಲದೆ ಕೇಕ್‌ ಕಟ್‌ ಮಾಡಿ ಅಭಿಮಾನಿಗಳಿಗೆ ತಿನ್ನಿಸಿದರು.


ಯುಐ ಪ್ಯಾನ್-ಇಂಡಿಯನ್ ಚಲನಚಿತ್ರವಾಗಿದ್ದು, ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿದ್ದಾರೆ. ಜಿ. ಮನೋಹರನ್ ಮತ್ತು ಕೆಪಿ ಶ್ರೀಕಾಂತ್ ಅವರು 'ಲಹರಿ ಫಿಲ್ಮ್ಸ್ LLP' ಮತ್ತು "ವೀನಸ್ ಎಂಟರ್‌ಟೈನರ್ಸ್" ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.