ಸಾಂಪ್ರದಾಯಕ ಉಡುಗೆಯಲ್ಲಿ ಉರ್ಫಿ ಜಾವೇದ್:ಸೋಷಿಯಲ್ ಮಿಡಿಯಾದಲ್ಲಿ ಫೋಟೋ ವೈರಲ್!
Urfi Javed: ಬಾಲಿವುಡ್ ನಟಿ ಉರ್ಫಿ ಜಾವೇದ್ ಇತ್ತೀಚೆಗೆ ಸಾಂಪ್ರದಾಯಕ ಉಡುಗೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ವ್ಯಕ್ತಪಡಿಸಿದರು. ಸದ್ಯ ಈ ಫೋಟೋಸ್ ಸೋಷಿಯ್ ಮಿಡಿಯಾದಲ್ಲಿ ವೈರಲ್ ಆಗಿದೆ.
Urfi In Traditional Dress: ಬಾಲಿವುಡ್ ನಟಿ ಉರ್ಫಿ ಜಾವೇದ್ ಸಾಮಾನ್ಯವಾಗಿ ಅರೆಬರೆ ಬಟ್ಟೆಗಳನ್ನೇ ಧರಿಸುತ್ತಾ, ಸಿಕ್ಕ ವಸ್ತುಗಳಿಂದಲೇ ಮೈ ಮುಚ್ಚಿಕೊಳ್ಳುತ್ತಾರೆ. ತುಂಡುಡುಗೆಯಲ್ಲಿ ಹೆಚ್ಚು ಕಾಣುವುದರ ಜೊತೆ, ಮೊಬೈಲ್, ಕೀ ಬೋರ್ಡ್, ಬೆಂಕಿಪೊಟ್ಣ ಹೀಗೆ ನಾನಾ ವಸ್ತುಗಳಲ್ಲೇ ಡ್ರೆಸ್ ಮಾಡಿಕೊಂಡು ಅನೇಕರ ಕಂಗೆಣ್ಣಿಗೂ ಗುರಿಯಾಗಿದ್ದಾರೆ. ಈ ನಟಿ ವಿಚಿತ್ರ ಕಾಸ್ಟ್ಯೂಮ್ ಧರಿಸುವ ಮೂಲಕವೇ ಫೇಮಸ್ ಆಗಿದ್ದಾರೆ.
ಇದೀಗ ಉರ್ಫಿ ಜಾವೇದ್ ಮೊದಲ ಬಾರಿಗೆ ಸಾಂಪ್ರದಾಯಕ ಉಡುಗೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಈಕೆ ಇತ್ತೀಚೆಗಷ್ಟೇ ಅಮೃತ್ಸರ್ನಲ್ಲಿರುವ ಗೋಲ್ಟನ್ ಟೆಂಪಲ್ ಗೆ ಭೇಟಿ ನೀಡಿದ್ದು, ಟೆಂಪಲ್ ಗೆ ಹೋದಾಗ ತಾವು ಸಲ್ವಾರ್ ಕಮೀಜ್ ಧರಿಸಿರುವ ಕುರಿತು ಹೇಳಿಕೊಂಡಿದ್ದಾರೆ.
ಸಂಕಷ್ಟದಲ್ಲಿ ಉರ್ಫಿ ಜಾವೇದ್.. ಕ್ರಿಮಿನಲ್ ಕೇಸ್ ದಾಖಲು.. ಮಾಡಿದ್ದೇನು ಗೊತ್ತಾ?
ಸಂಪ್ರದಾಯಿಕ ಉಡುಗೆಯಲ್ಲಿ ಉರ್ಫಿ ಗೋಲ್ಡನ್ ಟೆಂಪಲ್ ಗೆ ಬಂದಿದ್ದ ಫೋಟೋಸ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್ ವಿಭಾಗದಲ್ಲಿ ತಮ್ಮ ಅನಿಸಿಕೆಗಳನ್ನು ಹೊರಹಾಕಿದ್ದಾರೆ. ಕೆಲವರು ಈಕೆಯನ್ನು ಈ ರೀತಿ ಖುಷಿ ಪಟ್ಟರೆ, ಇನ್ನು ಕೆಲವರು ನೀನು ಮುಸ್ಲಿಂ ಅಥವಾ ಬೇರೆ ಜಾತಿನ ಅಂತೆಲ್ಲಾ ಬರೆದಿದ್ದಾರೆ.
ಕೆಲವು ದಿನಗಳ ಹಿಂದೆ, ಉರ್ಫಿ ಜಾವೇದ್ ಸಾರ್ವಜನಿಕವಾಗಿ ಅಶ್ಲೀಲತೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್, ಈ ಹಿಂದೆಯಷ್ಟೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಇನ್ನೊಂದು ಕಡೆ ಉರ್ಫಿ ಜಾವೇದ್ ಸಹ ಚಿತ್ರಾ ಕಿಶೋರ್ ವಾಘ್ ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.