Urmila Matondkar: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಸಿನಿಮಾಗಳಿಂದ ದೂರ ಉಳಿದಿದ್ದರು. ಇದರ ಹೊರತಾಗಿಯೂ ಅವರು ಕೆಲವು ಕಾರಣಗಳಿಂದ ಸುದ್ದಿಯಲ್ಲಿದ್ದರು.  ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಆದರೆ ಈಗ ಊರ್ಮಿಳಾ ದಾಂಪತ್ಯದ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಪತಿ ಮೋಸಿನ್ ಅಖ್ತರ್ ಮೀರ್​ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ನಟಿ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಮಾಧ್ಯಮ ವರದಿಗಳ ಪ್ರಕಾರ, ಸಾಕಷ್ಟು ಚರ್ಚೆಯ ನಂತರ ವಿಚ್ಛೇದನ ಪಡೆಯಲು ಊರ್ಮಿಳಾ ನಿರ್ಧರಿಸಿದ್ದಾರೆ. ಆದರೆ, ಸದ್ಯಕ್ಕೆ ವಿಚ್ಛೇದನಕ್ಕೆ ಕಾರಣ ಬಹಿರಂಗವಾಗಿಲ್ಲ. ವಿಚ್ಛೇದನಕ್ಕೆ ಊರ್ಮಿಳಾ ಮತ್ತು ಮೋಸಿನ್ ಇಬ್ಬರೂ ಒಪ್ಪಿಕೊಂಡು ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.  


ಇದನ್ನೂ ಓದಿ: Lakshmi nivasa serial: ಲಕ್ಷ್ಮೀ ನಿವಾಸ ಸೈಕೋ ಕ್ಯಾರೆಕ್ಟರ್‌ ಜಯಂತ್ ನಿಜಕ್ಕೂ ಯಾರು ಗೊತ್ತೇ?! ಈತ ಬರೀ ನಟನಲ್ಲ!!


2016 ರಲ್ಲಿ ಊರ್ಮಿಳಾ ಮತ್ತು ಮೋಸಿನ್ ವಿವಾಹವಾದರು. ಈ ಸಂದರ್ಭದಲ್ಲಿ ಕೇವಲ ಕುಟುಂಬ ಸದಸ್ಯರು ಮತ್ತು ಕೆಲವು ಆತ್ಮೀಯ ಸ್ನೇಹಿತರು ಮಾತ್ರ ಹಾಜರಿದ್ದರು. ಮೋಸಿನ್‌ಗಿಂದ ಊರ್ಮಿಳಾ 10 ವರ್ಷ ದೊಡ್ಡವರಾಗಿದ್ದಾರೆ. ಇಬ್ಬರೂ ವಿಭಿನ್ನ ಧರ್ಮಕ್ಕೆ ಸೇರಿದವರು.  


ಮೋಸಿನ್ ಅಖ್ತರ್ ಮಿರ್ ವೃತ್ತಿಯಲ್ಲಿ ಮಾಡೆಲ್ ಮತ್ತು ಉದ್ಯಮಿ. ಊರ್ಮಿಳಾ ಅವರ ಮೊದಲ ಭೇಟಿ 2014 ರಲ್ಲಿ ನಡೆಯಿತು ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ ಇಬ್ಬರೂ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಸೊಸೆಯ ಮದುವೆಯಲ್ಲಿ ಭಾಗವಹಿಸಿದ್ದರು. ನಂತರ ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಇದಾದ ನಂತರವೇ ಇಬ್ಬರೂ ಪರಸ್ಪರ ಮದುವೆಯಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.


ಇದನ್ನೂ ಓದಿ: ಸ್ವರ್ಗವೇ ಧರೆಗಿಳಿದಂತಿದೆ ಶಾರುಖ್‌ ಖಾನ್‌ ಬಂಗಲೆ... 200 ಕೋಟಿ ಮೌಲ್ಯದ ʻಮನ್ನತ್ʼ ಇನ್‌ಸೈಡ್‌ ಫೋಟೋಗಳು ಇಲ್ಲಿವೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.