Urmila Matondkar : ರಾಜಕೀಯ ಬಿಟ್ಟು `ಕಾಮಿಡಿ ಶೋ`ಗೆ ಎಂಟ್ರಿ ನೀಡಿದ್ರಾ ನಟಿ ಊರ್ಮಿಳಾ ಮಾತೋಂಡ್ಕರ್
ಈ ಬಾರಿ ಬಾಲಿವುಡ್ ನಟಿ, ಮಹಿಳಾ ರಾಜಕಾರಿಣಿ ಊರ್ಮಿಳಾ ಮಾತೋಂಡ್ಕರ್ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರದರ್ಶನದಲ್ಲಿ, ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಸಾಕಷ್ಟು ಮಾತನಾದಿದ್ದರೆ.
ನವದೆಹಲಿ : ಚಿಕ್ಕ ಪರದೆಯಲ್ಲಿ ಅತ್ಯಂತ ಇಷ್ಟವಾದ ಕಾರ್ಯಕ್ರಮಗಳಲ್ಲಿ ಒಂದಾದ 'ಜೀ ಕಾಮಿಡಿ ಶೋ' ಪ್ರತಿ ವಾರಾಂತ್ಯದಲ್ಲಿ ತೆರೆ ಕಾಣುತ್ತದೆ. ಈ ಬಾರಿ ಬಾಲಿವುಡ್ ನಟಿ, ಮಹಿಳಾ ರಾಜಕಾರಿಣಿ ಊರ್ಮಿಳಾ ಮಾತೋಂಡ್ಕರ್ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರದರ್ಶನದಲ್ಲಿ, ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಸಾಕಷ್ಟು ಮಾತನಾದಿದ್ದರೆ.
ಊರ್ಮಿಳಾ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ
ಕಾರ್ಯಕ್ರಮದ ಭಾಗವಾಗಿ ತನ್ನ ಅನುಭವದ ಬಗ್ಗೆ ಮಾತನಾಡುತ್ತಾ, ಊರ್ಮಿಳಾ(Urmila Matondkar) ಅವರು ಇತ್ತೀಚೆಗೆ, "ನಾನು ಈ ಕಾರ್ಯಕ್ರಮ ವನ್ನು ತುಂಬಾ ಆನಂದಿಸಿದೆ. ಹಾಸ್ಯನಟರು ಮಾಡಿದ ಎಲ್ಲಾ ಸ್ಕಿಟ್ ಗಳು ಅದ್ಭುತವಾಗಿದ್ದವು ಮತ್ತು ಅವರು ಮಾಡುವ ನಟನೆಯನ್ನು ನೋಡುವುದು ನಿಜಕ್ಕೂ ಖುಷಿಯಾಗುತ್ತದೆ. ಇದು ತುಂಬಾ ಖುಷಿಯ ಸಂಗತಿ, ಎಲ್ಲಾ ಪಾತ್ರಗಳನ್ನ ತುಂಬಾ ಚನ್ನಾಗಿ ಬರೆಯಲಾಗಿತ್ತು. ನಾನು ಅವರು ಮಾಡಿದ ಎಲ್ಲಾ ಪಾತ್ರಗಳನ್ನ ಇಷ್ಟಪಟ್ಟಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ನಟಿ ವಿಜಯಲಕ್ಷ್ಮಿ ತಾಯಿ ನಿಧನ
ಕಾಮಿಡಿ ಶೋಗೆ ಡಾನ್ಸ್ ಮೂಲಕ ಎಂಟ್ರಿ ನೀಡಿದ ಊರ್ಮಿಳಾ
ಊರ್ಮಿಳಾ ಈ ಶೋ ಬಗ್ಗೆ ಕೆಲವು ಆಸಕ್ತಿದಾಯಕ ಮತ್ತು ಮನೋರಂಜನೆಯ ಕಾಮೆಂಟ್‌ಗಳನ್ನು ನೀಡಿದ್ದಾರೆ. ಇಲ್ಲಿ ಈ ನಟಿ ತನ್ನ ವೃತ್ತಿ ಮತ್ತು ಜೀವನದಿಂದ ಕೆಲವು ಪ್ರಸಂಗಗಳನ್ನು ಹಂಚಿಕೊಂಡರು. ಇದರ ಹೊರತಾಗಿ, ಊರ್ಮಿಳಾ ಡ್ಯಾನ್ಸಿಂಗ್ ಸ್ಟೈಲ್ ಹೆಸರುವಾಸಿಯಾದ ನಟಿ. ಕಾಮಿಡಿ ಶೋ'ನ(Zee Comedy Show) 10 ಹಾಸ್ಯ ನಟರು' ಟೀಮ್ ಹಸೆಂಗೆ 'ಒಟ್ಟಾಗುತ್ತಾರೆ ಇವರ ಕೆಲಸ ವಿಶೇಷ ಅತಿಥಿಯನ್ನು ರಂಜಿಸುವುದಾಗಿದೆ.
ಹಾಸ್ಯ ಕಲಾವಿದರ ಹಾಸ್ಯಮಯ ಸ್ಕಿಟ್ ಗಳು ಹಾಗೂ 'ಲಾಫಿಂಗ್ ಬುದ್ಧ' ಫರಾ ಖಾನ್(Farah Khan) ಅವರ ಹಾಸ್ಯದ ಪ್ರತಿಕ್ರಿಯೆಗಳು ಮತ್ತು ಕಾಮೆಂಟ್‌ಗಳು ಎಲ್ಲರನ್ನು ನಗುವಂತೆ ಮಾಡಿದೆ. ಅಲ್ಲದೆ, 1999 ರ 'ಮಸ್ತ್' ಚಿತ್ರದ ಜನಪ್ರಿಯ ಹಾಡು 'ರುಕಿ ರುಕಿ ತಿ ಜಿಂದಗಿ' ಯಲ್ಲಿ ಊರ್ಮಿಳಾ ತನ್ನ ವಿಶೇಷ ನೃತ್ಯ ಪ್ರದರ್ಶನದ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು. 'ಜೀ ಕಾಮಿಡಿ ಶೋ' ಶನಿವಾರ ಮತ್ತು ಭಾನುವಾರ ಜೀ ಟಿವಿ ಹಿಂದಿಯಲ್ಲಿ ಪ್ರಸಾರವಾಗುತ್ತದೆ.
ಇದನ್ನೂ ಓದಿ : ಅನುಷ್ಕಾ ಶೆಟ್ಟಿ ಯಾವಾಗ ಮದುವೆಯಾಗುತ್ತಾರೆ ಗೊತ್ತಾ? ಭವಿಷ್ಯ ನುಡಿದ ಜ್ಯೋತಿಷಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.