Urvashi Rautela: ನಟಿ ಊರ್ವಶಿ ರೌಟೇಲಾ ಶೀಘ್ರದಲ್ಲೇ ರಾಜಕೀಯ ಪಕ್ಷಕ್ಕೆ ಸೇರಬಹುದು ಮತ್ತು ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೂ ಸ್ಪರ್ಧಿಸಬಹುದು. ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಅವರೇ ಈ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಸಂದರ್ಶನವೊಂದರಲ್ಲಿ ನಟಿಗೆ ರಾಜಕೀಯದಲ್ಲಿ ಎಷ್ಟು ಆಸಕ್ತಿ ಇದೆ ಎಂದು ಕೇಳಿದಾಗ, ತನಗೆ ಈಗಾಗಲೇ ಚುನಾವಣಾ ಟಿಕೆಟ್ ನೀಡಲಾಗಿದೆ ಎಂದು ಬಹಿರಂಗಪಡಿಸಿದರು. ಈ ಬಗ್ಗೆ ಮಾತನಾಡಿದ ಅವರು"ನನಗೆ ಈಗಾಗಲೇ ಟಿಕೆಟ್ ಸಿಕ್ಕಿದೆ ಮತ್ತು ನಾನು ಅದರ ಭಾಗವಾಗಬೇಕೇ ಅಥವಾ ಬೇಡವೇ ಎಂದು ಈಗ ನಿರ್ಧರಿಸಬೇಕು. ನಾನು ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎಂಬುದನ್ನು ಅಭಿಮಾನಿಗಳು ಕಾಮೆಂಟ್ ಮೂಲಕ ತಿಳಿಸಬೇಕು" ಎಂದು ಊರ್ವಶಿ ಹೇಳಿದ್ದಾರೆ.


ಇದನ್ನೂ ಓದಿ-RCB ಗೆಲ್ಬೇಕು ಮರ್ಯಾದೆ ಪ್ರಶ್ನೆ..! ಕೊಹ್ಲಿ ಟೀಂಗೆ ಸ್ಯಾಂಡಲ್ ವುಡ್ ಸೆಲೆಬ್ರಿಟೀಸ್ ಬೆಂಬಲ


ಆದರೆ ಈ ವಿಚಾರವಾಗಿ ಅಭಿಮಾನಿಗಳು ಊರ್ವಶಿ ರೌಟೇಲಾ ಅವರನ್ನು ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಈ ಬಗ್ಗೆ ಕಾಮೆಂಟ್ ಮಾಡಿದ್ದು.. "'ಜ್ಞಾನ ಇರುವವರಿಗೆ, ದೇಶದ ಹಿತಾಸಕ್ತಿಯಲ್ಲಿ ಕೆಲಸ ಮಾಡುವವರಿಗೆ ನಾವು ಕೆಲಸ ಕೊಡುವುದಿಲ್ಲ. ದೇಶವನ್ನು ಹಾಳು ಮಾಡಲು ನಟ/ನಟಿಯರಿಗೆ ನಾವು ಅವಕಾಶ ನೀಡುತ್ತಿದ್ದೇವೆ.. ನಾವು ದೇಶವನ್ನು ರಂಜಿಸಬೇಕಾಗಿಲ್ಲ, ನಾವು ಅದನ್ನು ಅಭಿವೃದ್ಧಿಪಡಿಸಬೇಕಾಗಿದೆ" ಎಂದಿದ್ದಾರೆ.. 


ಇನ್ನು ಊರ್ವಶಿ ಸಿನಿಮಾದ ಬಗ್ಗೆ ಮಾತನಾಡುವುದಾದರೇ ನಟಿ ರವಿ ಕಿಶನ್ ಅವರೊಂದಿಗೆ JNU ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಏಪ್ರಿಲ್ 5, 2024 ರಂದು ಬಿಡುಗಡೆಯಾಗಲಿದೆ. ಸಿದ್ಧಾರ್ಥ್ ಬೋಡ್ಕೆ, ಪಿಯೂಷ್ ಮಿಶ್ರಾ, ರಶ್ಮಿ ದೇಸಾಯಿ, ಸೋನಾಲಿ ವಿಜಯ್ ರಾಜ್ ಅವರಂತಹ ಕಲಾವಿದರು ಚಿತ್ರದ ಭಾಗವಾಗಿದ್ದಾರೆ.. 


ಇದನ್ನೂ ಓದಿ-ಸೌತ್ ನಟಿ ಮಹಾಲಕ್ಷ್ಮೀ ಹಾಗೂ ಪತಿ ರವಿಂದರ್‌ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.