ಬೆಂಗಳೂರು : ನಟಿ ಊರ್ವಶಿ ರೌಟೇಲಾ ಬಾಲಿವುಡ್‌ ಸ್ಟಾರ್‌ ತಾರೆಗಳಲ್ಲಿ ಒಬ್ಬರು, ಯಾವಾಗಲೂ ತಮ್ಮ ಅದ್ಭುತ ನಟನೆ ಮತ್ತು ನೋಟದಿಂದ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಿರುತ್ತಾರೆ. ಕತ್ತಿಯ ಅಂಚಿನಂತಿರುವ ಕಣ್ಣೋಟದಿಂದಲೇ ಅಭಿಮಾನಿಗಳ ಮನಗೆದ್ದ ಸುಂದರಿ ಸದ್ಯ ಶಾರ್ಟ್‌ ಡ್ರೇಸ್‌ನಲ್ಲಿರುವ ಫೋಟೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರ ಬೆಲೆ ಎನಾದ್ರೂ ನೀವು ಕೇಳಿದ್ರೆ ಶಾಕ್‌ ಆಗೋದಂತು ಖಂಡಿತ.


COMMERCIAL BREAK
SCROLL TO CONTINUE READING

ಚಿತ್ರರಂಗ ಹಾಗೂ ಫ್ಯಾಷನ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವ ಬ್ಯೂಟಿ ಕ್ವೀನ್‌ ಊರ್ವಶಿ ರಾಂಪ್ ಮೇಲೆ ಕ್ಯಾಟ್‌ವಾಕ್‌ ಮಾಡೋದು ನೋಡುವುದೇ ಚಂದ. ಅದು ಆಗಿರಲಿ, ಸದ್ಯ ಊರ್ವಶಿ, ಶಾರ್ಟ್‌ ಡ್ರೆಸ್ ಧರಿಸಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಟಿಯ ಹಾಟ್‌ ಲುಕ್‌ ಎಲ್ಲರ ಗಮನ ಸೆಳೆದಿದೆ. ಅದರ ಜೊತೆಗೆ ಅದರ ಬೆಲೆಯೂ ಕೂಡ ಅಚ್ಚರಿ ಪಡುವಂತೆ ಮಾಡಿದೆ.


ಇದನ್ನೂ ಓದಿ: ಅಮಲೇರಿಸುವಂತಿದೆ ಅಮಲಾ ಪೌಲ್‌ ಮೈಮಾಟ : ಸಮುದ್ರ ತೀರದಲ್ಲಿ ʼಹೆಬ್ಬುಲಿʼ ನಟಿಯ ಹಾಟ್‌ ಅವತಾರ


ಸದ್ಯ ಊರ್ವಶಿಯ ಮಾದಕ ಕಣ್ಣೋಟ, ಮದನನ್ನೇ ಮೀರಿಸುವಂತಹ ಮೈಮಾಟ ಜೊತೆಗೆ ದುಬಾರಿ ಡ್ರೆಸ್‌ ಹಾಕಿಕೊಂಡು ಫೋಟೋಗೆ ಪೋಸ್‌ ಕೊಟ್ಟಿದ್ದು, ಊರ್ವಶಿ ನೀನು ನಿಜವಾಗ್ಲೂ ಸ್ವರ್ಗದಿಂದ ಧರೆಗಿಳಿದು ಬಂದವಳಾ ಎನ್ನುವಂತೆ ಮಾಡಿದೆ. ಇನ್ನು ಚಿಕ್ಕದಾಗಿದ್ರೂ ಸಖತ್‌ ಆಗಿರುವ ಮಿನಿ ಬೀಜ್ ಡ್ರೆಸ್, ರಫಲ್ಸ್ ಮತ್ತು ವಜ್ರಗಳಿಂದ ಅಲಂಕರಿಸಲ್ಪಟ್ಟಿದೆ. ಇದರ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ. 


ಇನ್ನು ಬಾಡಲಿವುಡ್‌ ಡಿವಾ, ಬಿಗ್‌ ಬಜೆಟ್ ತಮಿಳು ಚಲನಚಿತ್ರ 'ದಿ ಲೆಜೆಂಡ್' ನಲ್ಲಿ ಕಾಣಿಸಿಕೊಂಡಿದ್ದರು, ಸದ್ಯ 'ಇನ್‌ಸ್ಪೆಕ್ಟರ್ ಅವಿನಾಶ್' ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಅಭಿನಯಿಸುತ್ತಿದ್ದು, ನಟ ರಣದೀಪ್ ಹೂಡಾ ಅವರೊಂದಿಗೆ ನಟಿಸಲಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.