Kriti Sanon: ಈ ಬಾಹುಬಲಿ ನಟನೊಂದಿಗೆ ಬಾಲಿವುಡ್ ನಟಿ ಕೃತಿ ಸನೊನ್ ಡೇಟಿಂಗ್?!

ಬಾಲಿವುಡ್ ನಟಿ ಕೃತಿ ಸನೊನ್ ಮತ್ತು ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಡೇಟಿಂಗ್ ಮಾಡುತ್ತಿದ್ದಾರೆಂಬ ಗಾಳಿಸುದ್ದಿಗಳು ಹರಿದಾಡುತ್ತಿವೆ.

Written by - Puttaraj K Alur | Last Updated : Sep 17, 2022, 02:15 PM IST
  • ಬಾಲಿವುಡ್ ನಟಿ ಕೃತಿ ಸನೊನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ಪ್ರಭಾಸ್?
  • ‘ಆದಿಪುರುಷ’ ಚಿತ್ರದಲ್ಲಿ ಪ್ರಭಾಸ್ ‘ರಾಮ’ ಮತ್ತು ಕೃತಿ ‘ಸೀತೆ’ ಪಾತ್ರದಲ್ಲಿ ನಟಿಸಿದ್ದಾರೆ
  • ಈ ಬಿಗ್ ಬಜೆಟ್ ಚಿತ್ರವು ಮುಂದಿನ ವರ್ಷ ಅಂದರೆ ಜನವರಿ 2023ರಲ್ಲಿ ಬಿಡುಗಡೆಯಾಗಲಿದೆ
Kriti Sanon: ಈ ಬಾಹುಬಲಿ ನಟನೊಂದಿಗೆ ಬಾಲಿವುಡ್ ನಟಿ ಕೃತಿ ಸನೊನ್ ಡೇಟಿಂಗ್?! title=
ಕೃತಿ ಸನೊನ್-ಪ್ರಭಾಸ್ ಡೇಟಿಂಗ್?

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟಿ ಕೃತಿ ಸನೊನ್ ಮತ್ತು ಸೂಪರ್ ಸ್ಟಾರ್ ಪ್ರಭಾಸ್ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿವೆ. ವಾಸ್ತವವಾಗಿ ಇದು ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್ 7’ ಶೋನಲ್ಲಿ ಪ್ರಭಾಸ್‌ಗೆ ಕೃತಿ ಮಾಡಿದ ಕರೆಯಿಂದ ಪ್ರಾರಂಭವಾಯಿತು. ಅಂದಿನಿಂದ ಕೃತಿ ಮತ್ತು ಪ್ರಭಾಸ್ ಸಂಬಂಧದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಈ ಹೊಸ ಹಾಟ್ ಜೋಡಿಯನ್ನು ತೆರೆಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ. ‘ಆದಿಪುರುಷ’ ಚಿತ್ರದಲ್ಲಿ ಕೃತಿ ಮತ್ತು ಪ್ರಭಾಸ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ವರದಿಯ ಪ್ರಕಾರ ‘ಆದಿಪುರುಷ’ ಸೆಟ್‌ನಲ್ಲಿ ಮೊದಲ ದಿನದಿಂದ ಕೃತಿ ಮತ್ತು ಪ್ರಭಾಸ್ ನಡುವೆ ಉತ್ತಮ ಬಾಂಧವ್ಯವಿತ್ತು. ಪ್ರಭಾಸ್ ತುಂಬಾ ನಾಚಿಕೆ ಸ್ವಭಾವದವರಾದರೂ ಕೃತಿಯೊಂದಿಗೆ ಮುಕ್ತವಾಗಿ ಮಾತನಾಡುವ ಕಾರಣದಿಂದ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಇಬ್ಬರೂ ಪರಸ್ಪರ ಸಂಭಾಷಣೆಯಲ್ಲಿ ಹೆಚ್ಚು ನಿರತರಾಗಿದ್ದಾರಂತೆ. ಈ ಕಾರಣಕ್ಕೆ ಕೃತಿ ಮತ್ತು ಪ್ರಭಾಸ್ ಸ್ನೇಹ ತುಂಬಾ ವಿಶೇಷವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Bigg Boss Kannada OTT Grand Finale: 9 ನೇ ಆವೃತ್ತಿಗೆ ಬಡ್ತಿ ಪಡೆದವರು ಯಾರು ಗೊತ್ತೇ?

ಕೃತಿ ಮತ್ತು ಪ್ರಭಾಸ್ ಡೇಟಿಂಗ್..?

ನಟಿ ಕೃತಿ ಸನೊನ್ ಮತ್ತು ಪ್ರಭಾಸ್ ಡೇಟಿಂಗ್ ಮಾಡುತ್ತಿದ್ದಾರೆಂಬ ಗಾಳಿಸುದ್ದಿಗಳು ಹರಿದಾಡುತ್ತಿವೆ. ಈ ಜೋಡಿ ತಮ್ಮ ಸಂಬಂಧವನ್ನು ಜಗತ್ತಿಗೆ ಬಹಿರಂಗಪಡಿಸಲು ಸದ್ಯ ಇಚ್ಛಿಸಿಲ್ಲವಂತೆ. ವರದಿಗಳ ಪ್ರಕಾರ ಪ್ರಭಾಸ್ ಮತ್ತು ಕೃತಿ ಸೆಟ್‌ಗಳಲ್ಲಿ ಪರಸ್ಪರ ಸಮಯ ಕಳೆಯಲು ಇಷ್ಟಪಡುತ್ತಾರಂತೆ. 1 ತಿಂಗಳ ಹಿಂದೆಯೇ ‘ಆದಿಪುರುಷ’ ಚಿತ್ರೀಕರಣ ಮುಗಿದರೂ ಇಬ್ಬರ ಬಾಂಧವ್ಯ ಹಾಗೆಯೇ ಉಳಿದಿದೆ. ಕೃತಿ ಮತ್ತು ಪ್ರಭಾಸ್ ಆಗಾಗ ಒಬ್ಬರಿಗೊಬ್ಬರು ಕರೆ ಮತ್ತು ಮೆಸೇಜ್ ಮಾಡುತ್ತಲೇ ಇರುತ್ತಾರೆ. ಇಬ್ಬರೂ ಸಂಬಂಧದ ಪರಸ್ಪರ ಬಲವಾದ ಭಾವನೆಗಳನ್ನು ಹೊಂದಿದ್ದಾರೆಂದು ಹೇಳಲಾಗುತ್ತದೆ. ಆದರೆ ಇದರ ಬಗ್ಗೆ ಈ ಜೋಡಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.  

ಮುಂದಿನ ವರ್ಷ ತೆರೆಮೇಲೆ ಜೋಡಿ

ಪ್ರಭಾಸ್ ಮತ್ತು ಕೃತಿ ಜೋಡಿಯನ್ನು ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ‘ಆದಿಪುರುಷ’ ಚಿತ್ರದಲ್ಲಿ ಪ್ರಭಾಸ್ ‘ರಾಮ’ ಮತ್ತು ಕೃತಿ ‘ಸೀತೆ’ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಗಲ್ಲಾಪೆಟ್ಟಿಗೆಯನ್ನು ಉಡೀಸ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಬಿಗ್ ಬಜೆಟ್ ಚಿತ್ರವು ಮುಂದಿನ ವರ್ಷ ಅಂದರೆ ಜನವರಿ 2023ರಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿKabza Teaser: 5 ಭಾಷೆಗಳಲ್ಲಿ ರಿಲೀಸ್‌ ಆಗಲಿದೆ ಕಬ್ಜ ಟೀಸರ್​! ರಾಣಾ, ಶಿವಣ್ಣ ಸ್ಪೆಷಲ್​ ಗೆಸ್ಟ್​

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News