ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ನಮ್ಮನ್ನ ಅಗಲಿ ಹಲವು ವರುಷಗಳೇ ಕಳೆದರೂ ಅವರ ನೆನಪು ,ಅವರ ಸಿನಿಮಾಗಳು ಎಂದೆಂದಿಗೂ ಅಮರ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಖತ್ ಸಿನಿಮಾಗಳನ್ನ ನೀಡಿ ಮನರಂಜಿಸಿದ ಧೀಮಂತ ನಟ ಅಂದ್ರೆ ಅದು ವಿಷ್ಣುವರ್ಧನ್ ಬಾಸ್. ವಿಷ್ಣು ದಾದಾನಿಗೆ ಒಂದು ಆಸೆ ಇತ್ತು. ಆ ಆಸೆಯನ್ನ ಕೊನೆಗೂ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ನೆರವೆರಿಸಿದ್ದಾರೆ. ಅದುವೇ ಮನೆ ನಿರ್ಮಾಣ.


COMMERCIAL BREAK
SCROLL TO CONTINUE READING

ಯೆಸ್.. ಡಾ.ವಿಷ್ಣುವರ್ಧನ್ ನಮ್ಮ ನಿಮ್ಮೆಲ್ಲರ ನೆಚ್ಚಿನ ವಿಷ್ಣು ದಾದಾ ಅವರು ಆಸೆ ಪಟ್ಟಂತೆಯೇ ಪತ್ನಿ ಭಾರತಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಮನೆ ಗೃಹಪ್ರವೇಶ ನಡೆದಿದೆ‌. ಸಾಹಸಸಿಂಹ ವಿಷ್ಣುವರ್ಧನ್ ಅವರ ಕನಸಿನ ಮನೆ ಇರುವುದು ಜಯನಗರದ ಟಿ ಬ್ಲಾಕ್ ನಲ್ಲಿ 90/90 ಚದರಡಿಯಲ್ಲಿ ಭವ್ಯವಾಗಿ ಈ ಮನೆ ನಿರ್ಮಾಣ ಮಾಡಲಾಗಿದೆ. ‘ವಲ್ಮೀಕ’ ಹೆಸರಿನಲ್ಲಿ, ಗೇಟ್ ಮೇಲೆ ಸಿಂಹದ ಮುಖದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇಂತಹ ಮನೆಗೆ  ವಿಷ್ಣು ಕುಟುಂಬ ಗೃಹ ಪ್ರವೇಶ ಮಾಡಿದ್ದು, ಸಿಎಂ‌ ಬಸವರಾಜ ಬೊಮ್ಮಾಯಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.


ಇದನ್ನೂ ಓದಿ- ಕುತೂಹಲ ಮೂಡಿಸಿದೆ‌ "ಇನಾಮ್ದಾರ್" ಚಿತ್ರದ ಟೀಸರ್


'ವಲ್ಮೀಕ' ಎಂದರೆ ಹಾವಿನ ಹುತ್ತ ಎಂದರ್ಥ. ನಾಗರಹಾವು ಚಿತ್ರದ ಯಶಸ್ಸಿನ‌ ನಂತರ ಇಲ್ಲೆ ಇದ್ದ ವಿಷ್ಣುವರ್ಧನ್ ಹಳೆಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದರು. 1976 ರಲ್ಲಿ ವಿಷ್ಣುವರ್ಧನ್ ಈ ಜಾಗ ಖರೀದಿ ಮಾಡಿದ್ದರಂತೆ. ಆದರೆ, ಇದು ನಮ್ಮ ಜಾಗ ಅಂತ ಅದರ ಮಾಲೀಕರು ಆಗ ಬಂದಿದ್ದರು. ವಿಷ್ಣುವರ್ಧನ್ ಇದನ್ನು ಇಷ್ಟ ಪಟ್ಟಿದ್ದಾರೆ ಅಂತ ಆ ಜಾಗದಲ್ಲಿ ಅರ್ಧ ಜಾಗ ಹಾಗೆಯೇ ಕೊಟ್ಟಿದ್ದರಂತೆ ಮಾಲೀಕರು. 


Disha Patani Viral Video: ದಿಶಾ ಪಾಟ್ನಿಯ ಇಂತಹ ಅವತಾರ ನೀವು ಈ ಹಿಂದೆ ಎಂದಿಗೂ ನೋಡಿರಲು ಸಾಧ್ಯವೇ ಇಲ್ಲ


6 ಬೆಡ್ ರೂಂನ ಈ ಮನೆ ಮುಂಭಾಗ‌ ಒಂದು ಕೃಷ್ಣನ ವಿಗ್ರಹವಿದೆ. ಅದನ್ನ ವಿಷ್ಣು ಅವ್ರೆ ಇಲ್ಲಿ‌ ಸ್ಥಾಪಿಸಿದ್ದರಂತೆ. ಅದನ್ನ ಹಾಗೆಯೆ ಇಟ್ಟು‌‌ ಕಲ್ಲಿನ ಮಂಟಪ ಮಾಡಿ ಮತ್ತೆ ಪ್ರತಿಷ್ಠಾಪನೆ ಮಾಡಲಾಗಿದೆ. ಕನ್ನಡ ನಟ, ಅಭಿಮಾನಿಗಳ ಪಾಲಿನ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಮನೆ ನವೀಕರಣ ಮಾಡಲಾಗಿದೆ. ಮನೆಯ ಗೃಹ ಪ್ರವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಪಾಲ್ಗೊಂಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.