Varthur Santhosh-Tanisha: ಬಿಗ್ ಬಾಸ್ ಇದೀಗ್ ಸ್ಕೂಲ್ ಆಗಿ ಪರಿವರ್ತನೆಯಾಗಿದೆ. ಕಚ್ಚಾಟ, ಮನಸ್ತಾಪಗಳಲ್ಲೇ ದಿನದೂಡಿದ್ದ ಸ್ಪರ್ಧಿಗಳು ಇದೀಗ ಮಕ್ಕಳಂತೆ ಯೂನಿಫಾರ್ಮ್ ಧರಿಸಿ ಬಾಲ್ಯದ ದಿನಗಳನ್ನು ಮತ್ತೆ ಅನುಭವಿಸಲು ಮುಂದಾಗಿದ್ದಾರೆ. ಈ ಟಾಸ್ಕ್ ಸಂದರ್ಭದಲ್ಲಿ ಸಖತ್ ತಮಾಷೆ ಸನ್ನಿವೇಶಗಳು ನಡೆಯುತ್ತಿದ್ದು, ವರ್ತೂರ್ ಸಂತೋಷ್ ಮತ್ತು ತನಿಷಾ ನಡುವೆ ಫನ್ನಿ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರೋಹಿತ್, ಹಾರ್ದಿಕ್ ಬದಲು ಈ ಕಿಲಾಡಿ ಬ್ಯಾಟ್ಸ್’ಮನ್’ಗೆ ಟಿ20 ವಿಶ್ವಕಪ್ ನಾಯಕತ್ವ!?


ವರ್ತೂರ್ ಸಂತೋಷ್ ಶಾಲೆ ವಿದ್ಯಾರ್ಥಿಯಾಗಿದ್ರೆ, ತನಿಷಾ ಸ್ಕೂಲ್ ಟೀಚರ್ ಆಗಿ ಈ ಟಾಸ್ಕ್’ನಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ಲೇಟ್ ಮೇಲೆ ಐ ಲವ್ ಯೂ ಎಂದು ಬರೆದ ವರ್ತೂರ್ ಸಂತೋಷ್, ಅದನ್ನು ತನಿಷಾಗೆ ನೀಡಿದ್ದಾರೆ. ಇದನ್ನು ಕಂಡ ತನಿಷಾ ನಾಚಿ ನೀರಾಗಿದ್ದಾರೆ.


ಸದ್ಯ ಈ ಸನ್ನಿವೇಶದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು.


ಅಂದಹಾಗೆ ಕಳೆದ ವಾರ ರಾಕ್ಷಸ ಗಂಧರ್ವರ ನಡುವಿನ ಕೋಲಾಹಲದಲ್ಲಿ ಇಡೀ ಮನೆಯಲ್ಲಿ ಅಶಾಂತಿ ನೆಲೆಸಿತ್ತು. ಕೆಲ ಸ್ಪರ್ಧಿಗಳಿಗೆ ದೈಹಿಕವಾಗಿಯೂ ನೋವಾಗಿತ್ತು. ಈ ಎಲ್ಲದರ ನಡುವೆ ಎಲ್ಲಾ ಸ್ಪರ್ಧಿಗಳಿಗೆ ತಿಳಿಹೇಳಿದ್ದ ಕಿಚ್ಚ ಸುದೀಪ್, ತಮ್ಮ ಮೆಚ್ಚುಗೆಯ ಚಪ್ಪಾಳೆಯನ್ನು ಕಾರ್ತಿಕ್ ಮಹೇಶ್ ಅವರಿಗೆ ನೀಡಿದ್ದರು.


ಇದನ್ನೂ ಓದಿ: ವಿನಯ್ ನಿಂದ ಅನುಭವಿಸಿದ ನೋವು ಅಷ್ಟಿಷ್ಟಲ್ಲ : ವಿನಯ್ ವಿರುದ್ದ ನೋವು ಹೊರ ಹಾಕಿದ ಕಿರು ತೆರೆ ನಟಿ


ಇನ್ನೊಂದೆಡೆ ಸ್ಪರ್ಧಿಗಳ ಮನದ ಮಾತಿಗೆ ಕಿವಿಯಾಗಹೊರಟ ಬಿಗ್ ಬಾಸ್, ಕಳೆದ ದಿನ ಕನ್ಫೆಶನ್ ರೂಂನಲ್ಲಿ ಮಾತುಕತೆ ನಡೆಸಿದ್ದರು. ಈ ಎಲ್ಲದರ ಮಧ್ಯೆ ಇಂದಿನಿಂದ ಸ್ಕೂಲ್ ಟಾಸ್ಕ್ ಶುರುವಾಗಿದೆ. ರಾಕ್ಷಸರಾಗಿದ್ದ ಸ್ಪರ್ಧಿಗಳು ಇದೀಗ ಮುಗ್ಧತೆಯ ಕಡೆಗೆ ವಾಲುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ