ವಿನಯ್ ನಿಂದ ಅನುಭವಿಸಿದ ನೋವು ಅಷ್ಟಿಷ್ಟಲ್ಲ : ವಿನಯ್ ವಿರುದ್ದ ನೋವು ಹೊರ ಹಾಕಿದ ಕಿರು ತೆರೆ ನಟಿ

BBK 10 Vinay Gowda : ವಿನಯ್ ಗೌಡ ಬಗ್ಗೆ ಕಿರುತೆರೆ ನಟಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.  ಸಾಮಾಜಿಕ ಮಾಧ್ಯಮದಲ್ಲಿಒ ವಿನಯ್ ವಿರುದ್ದ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.

Written by - Ranjitha R K | Last Updated : Dec 11, 2023, 10:29 AM IST
  • ಕನ್ನಡ ಬಿಗ್ ಬಾಸ್ ನ ಈ ಸೀಸನ್ ಮನೆಯಲ್ಲಿನ ಜಗಳ ಕದನದಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ.
  • ಸ್ಪರ್ಧಿಗಳು ತೋರುತ್ತಿರುವ ಅಗ್ರೆಶನ್ ಬಗ್ಗೆ ವೀಕ್ಷಕರ ಅಸಮಾಧಾನ
  • ವಿನಯ್ ಗೌಡ ಬಗ್ಗೆ ನಟಿ ಇಳಾ ವಿಟ್ಲ ಪೋಸ್ಟ್
ವಿನಯ್ ನಿಂದ ಅನುಭವಿಸಿದ ನೋವು ಅಷ್ಟಿಷ್ಟಲ್ಲ : ವಿನಯ್ ವಿರುದ್ದ ನೋವು ಹೊರ ಹಾಕಿದ ಕಿರು ತೆರೆ ನಟಿ  title=

BBK 10 Vinay Gowda : ಕನ್ನಡ ಬಿಗ್ ಬಾಸ್ ನ ಈ ಸೀಸನ್ ಮನೆಯಲ್ಲಿನ ಜಗಳ ಕದನದಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಅದರಲ್ಲಿಯೂ ಸ್ಪರ್ಧಿಗಳು ತೋರುತ್ತಿರುವ ಅಗ್ರೆಶನ್ ಬಗ್ಗೆ ವೀಕ್ಷಕರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಆಟವನ್ನು ಆಟದಂತೆ ನೋಡದೆ ತೀರಾ ಪರ್ಸನಲ್ ಆಗಿ ತೆಗೆದುಕೊಂಡು ಇನ್ನೊಬ್ಬರಿಗೆ ನೋವುಂಟು ಮಾಡುವ ಸ್ಪರ್ಧಿಗಳ ಮನಸ್ಥಿತಿ ಬಗ್ಗೆ ವೀಕ್ಷಕರಿಗೆ ಅಸಮಾಧಾನವಿದೆ. 

ವಿನಯ ವಿರುದ್ದ ಗಂಭೀರ ಆರೋಪ : 
ಕಳೆದ ವರಾದ ಟಾಸ್ಕ್ ನಲ್ಲಿ ಸ್ಪರ್ಧಿಗಳು ಆಟವಾಡಿದ ರೀತಿಗೆ ಇಡೀ ರಾಜ್ಯದ ಜನತೆ ಅಸಮಾಧಾನ ಹೊರ ಹಾಕಿದೆ. ಈ ಟಾಸ್ಕ್ ನಲ್ಲಿ ಸಂಗೀತಾ ಮತ್ತು ಪ್ರತಾಪ್ ಗಂಭೀರ ಗಾಯವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕೆ ಸಂಬಂಧಪಟ್ಟಂತೆ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಎಲ್ಲರ ತಪ್ಪನ್ನು ಎತ್ತಿ ತೋರಿಸಿದ್ದೂ ಆಗಿದೆ. ಎಲ್ಲರಿಗೆ ಬುದ್ದಿ ಹೇಳಿದ್ದೂ ಆಗಿದೆ. ಇದೆಲ್ಲದರ ಮಧ್ಯೆ, ವಿನಯ್ ಗೌಡ ಬಗ್ಗೆ ಕಿರುತೆರೆ ನಟಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. 2015ರಲ್ಲಿ 'ಸೂಪರ್ ಜೋಡಿ' ರಿಯಾಲಿಟಿ ಶೋನಲ್ಲಿ ವಿನಯ್ ದಂಪತಿ ಮತ್ತು ಇಳಾ ದಂಪತಿ ಕೂಡ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ವಿನಯ್ ನಡವಳಿಕೆ ಬಗ್ಗೆ ಇಳಾ ಮಾತನಾಡಿದ್ದಾರೆ. 

ಇದನ್ನೂ ಓದಿ : BBK 10: ದೊಡ್ಮನೆಯಲ್ಲಿ ಸಂಗೀತಾ-ಪ್ರತಾಪ್‌ ಕಣ್ಣಿಗೆ ಬಲವಾದ ಪಟ್ಟು ಬಿದಿದ್ದು ನಿಜಾನಾ ಅಥವಾ Sympathy ಗಿಟ್ಟಿಸಿಕೊಳ್ಳುತ್ತಿದ್ದಾರಾ?

 ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ : 
ವಿನಯ್ ಗೌಡ ಬಗ್ಗೆ ನಟಿ ಇಳಾ ವಿಟ್ಲ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದು, ಈಗ ವೈರಲ್ ಆಗುತ್ತಿದೆ.  ಬಿಗ್ ಬಾಸ್ ನೋಡ್ತಿರೋ ಕಾರಣ ವಿನಯ್ ಅವರನ್ನ ಹತ್ತಿರದಿಂದ ನೋಡಿ ಅನುಭವಿಸಿರೋದಕ್ಕೆಈ ಪೋಸ್ಟ್ ಮಾಡುತ್ತಾ ಇದ್ದೇನೆ ಎಂದು ನಟಿ ಬರೆದಿದ್ದಾರೆ. ನನಗೇನಾದರೂ ಆದರೆ ನಾನು ಸುಮ್ನೆ ಬಿಡಲ್ಲ ಅಂತಾನೆ ಇರ್ತಾರಲ್ವಾ, ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತೆ ಸ್ವಲ್ಪ ಸ್ವಲ್ಪ ಗಾಯಗಳು ಆಗುತ್ತೆ ಅದು ಸರ್ವೇಸಾಮಾನ್ಯ . ಬೇರೆಯವರು ಯಕ್ಕುಟೋದ್ರು ಪರ್ವಾಗಿಲ್ಲ ನಾನು ಗೆಲ್ಲಲೇ ಬೇಕು ಅನ್ನೋ ಮನಸ್ಥಿತಿ ಇರೋದು ಯಾವತ್ತಿಗೂ ಉದ್ದಾರ ಆಗಿಲ್ಲ. ರಿಯಾಲಿಟಿ ಶೋ ನೇ ಹಾಗೆ ಏನು ಮಾಡಕ್ಕಾಗಲ್ಲ ಇಷ್ಟ ಇದ್ರೆ ಹೋಗ್ಬೇಕು ಇಲ್ಲ ಅಂದ್ರೆ ಸುಮ್ನಿರಬೇಕು ಎಂದಿದ್ದಾರೆ.  ಇದೇ ವಿನಯ್, ಸೂಪರ್ ಜೋಡಿ ಟೈಮಲ್ಲಿ ಪ್ಲಾನ್ ಮಾಡಿಕೊಂಡು ಬಂದು ನನಗೇನಾದರೂ ಆದರೆ ನಾನು ಯಾರನ್ನೂ ಸುಮ್ಮನೆ ಬಿಡಲ್ಲ ಅಂತ  ಹೆದರಿಸೋದು,  ಆಮೇಲೆ ಅಂತ ಕೆಲಸ ಅವರೇ ಮಾಡೋದು ಎಂದು ಅಸಮಾಧಾನ ಹೊರ ಹಾಕಿದ್ದಾರೆ. ವಿನಯ್ ಆಟದಲ್ಲಿ ನಮ್ಮ ಯಜಮಾನರ ದವಡೆ ಹಲ್ಲು ಮುರಿದ್ರು, ಅಷ್ಟು ಸಾಲದು ಅಂತ ರಿಬ್ಬು ಫ್ಯಾಕ್ಚರ್  ಮಾಡಿದ್ದರು. ಆದರೂ ನಾವು ಒಂದು ಮಾತೂ ಹೇಳಿಲ್ಲ. ಶೋ ಮುಗಿದ ಮೇಲೆ  ನೋವು ಜಾಸ್ತಿ ಆಯ್ತು. ಆರು ತಿಂಗಳು  ಸರಿಯಾಗಿ ಕೆಲಸ ಮಾಡುವುದಕ್ಕೆ ಆಗದೆ, ನನ್ನ ಪತಿ ಎಷ್ಟು ಒದ್ದಾಡಿದ್ದಾರೆ ಎಂದು ನೋವು ಹೊರ ಹಾಕಿದ್ದಾರೆ.  

 

ಇದನ್ನೂ ಓದಿ : ಹೊಸ ಪ್ರೊಡಕ್ಷನ್ ಹೌಸ್ ಘೋಷಿಸಿದ ಸಮಂತಾ… ನಿರ್ಮಾಣ ಸಂಸ್ಥೆಗೆ ಸ್ಯಾಮ್ ಇಟ್ಟಿದ್ದು ಈ ಹೆಸರು

ನಟಿಯ ಮನದಾಳದ ಮಾತು : 
ಮತ್ತೊಂದು ಪೋಸ್ಟ್ ನಲ್ಲಿ ವಿನ್ಯ ಹೆಸರೆತ್ತದೆ ಕೆಲವು ಸಾಲುಗಳನ್ನು ಬರೆದಿದ್ದಾರೆ. ಆದರೆ ಈ ಪೋಸ್ಟ್ ಗೆ ಕಾಮೆಂಟ್ ಮಾಡಿದವರು ಇದು ವಿನಯ್ ಅವರನ್ನು  ಉದ್ದೇಶಿಸಿಯೇ ಬರೆದಿರುವುದು ಎಂದು ಕಾಮೆಂಟ್ ಹಾಕಿದ್ದಾರೆ. 

 

ಇದನ್ನೂ ಓದಿ : “ಎಲ್ಲವೂ ಹೇಳಿದೆ, ಎಲ್ಲವನ್ನೂ ಮಾಡಿದೆ”- ಸೊಸೆ ಐಶ್ವರ್ಯಾರನ್ನ ಅನ್’ಫಾಲೋ ಮಾಡಿದ ಬೆನ್ನಲ್ಲೇ ಅಮಿತಾಬ್ ವಿಚಿತ್ರ ಪೋಸ್ಟ್!

ಒಟ್ಟಿನಲ್ಲಿ ಈ ಪೋಸ್ಟ್ ನೋಡಿದ ಮೇಲೆ ವಿನಯ್ ಅಗ್ರೆಶನ್ ಬಿಗ್ ಬಾಸ್ ನಲ್ಲಿ ಮಾತ್ರ ಅಲ್ಲ, ಹೊರಗೆ ಕೂಡಾ ಇದೇ ರೀತಿಯ  ವರ್ತನೆ ಎಂದು ವೀಕ್ಷಕರು ಆಡಿಕೊಳ್ಳುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News