ಅಮ್ಮನ ತಾಳಿ ಮತ್ತು ಮೂಗುಬೊಟ್ಟನ್ನ ಪತ್ನಿಗೆ ಕೊಟ್ಟ ನಟ ವಸಿಷ್ಠ ಸಿಂಹ ! ಯಾಕೆ ಗೊತ್ತಾ?
ಇತ್ತೀಚಿಗೆ ಜೀ ಕನ್ನಡ ನ್ಯೂಸ್ ಗೆ ಈ ದಂಪತಿ ಸಂದರ್ಶನ ನೀಡಿತು. ಆ ವೇಳೆ ಪತ್ನಿ ನಂಗೆ ತಾಯಿ ಪ್ರೀತಿ ನೀಡುತ್ತಾಳೆ ಎಂದಿದ್ದಾರೆ ನಟ.
ಬೆಂಗಳೂರು : ವಸಿಷ್ಠ ಹರಿಪ್ರಿಯಾ ಸ್ಯಾಂಡಲ್ವುಡ್ ನ ವೆರೀ ಕ್ಯೂಟ್ ಕಪಲ್ ಅಂದ್ರೆ ತಪ್ಪಿಲ್ಲ. ಈ ಮುದ್ದಾದ ಜೋಡಿಯನ್ನ ನೋಡ್ತಾ ಇದ್ರೆ ನೋಡ್ತಾನೇ ಇರೋಣ ಅನ್ನೋ ಲೆವೆಲ್ಲಿಗೆ ಕ್ಯೂಟ್ ಆಗಿ ಕಾಣುತ್ತಾರೆ. ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದ ಮೇಲೆ ಯಾರಿಗೂ ಈ ವಿಚಾರದ ಬಗ್ಗೆ ಹೆಚ್ಚು ಗುಲ್ಲೆಬ್ಬಿಸದೆ ತಮ್ಮ ಪಾಡಿಗೆ ಇದ್ದ ಪ್ರೇಮ ಪಕ್ಷಿಗಳಿವರು. ಆದರೆ ಇವರಿಬ್ಬರ ಪ್ರೀತಿ - ಪ್ರೇಮದ ವಿಚಾರ ಅಭಿಮಾನಿಗಳಿಗೆ ಕೊನೆಗೂ ಒಂದು ದಿನ ಗೊತ್ತಾಯ್ತು.
ಕಳೆದ ಜನವರಿ ತಿಂಗಳಿನಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹರಿಪ್ರಿಯಾ - ವಸಿಷ್ಠ ಸಿಂಹ ಅವರ ವಿವಾಹ ಜರುಗಿತು. ಆನಂತರ ತುಮಕೂರು ರಸ್ತೆಯ ಗೋಲ್ಡನ್ ಪಾಮ್ಸ್ & ರೆಸಾರ್ಟ್ನಲ್ಲಿ ಹರಿಪ್ರಿಯಾ - ವಸಿಷ್ಠ ಸಿಂಹ ಅವರ ಆರತಕ್ಷತೆ ಕೂಡಾ ಅದ್ದೂರಿಯಾಗಿ ನಡೆಯಿತು. ಇತ್ತೀಚಿಗೆ ಜೀ ಕನ್ನಡ ನ್ಯೂಸ್ ಗೆ ಈ ದಂಪತಿ ಸಂದರ್ಶನ ನೀಡಿತು. ಆ ವೇಳೆ ಪತ್ನಿ ನಂಗೆ ತಾಯಿ ಪ್ರೀತಿ ನೀಡುತ್ತಾಳೆ ಎಂದಿದ್ದಾರೆ ನಟ.
ಇದನ್ನೂ ಓದಿ : ಅರಳಿದ ಹೂವುಗಳು 'ಟೀಸರ್ ಬಿಡುಗಡೆ.. ಟೈಟಲ್ ಮೂಲಕವೇ ಸದ್ದು ಮಾಡುತ್ತಿದೆ ಈ ಸಿನಿಮಾ..!
ನಿಮಗೆಲ್ಲ ಗೊತ್ತಿರೋ ಹಾಗೇ ನಟ ವಸಿಷ್ಠ ಅವರ ತಾಯಿ ಇಹ ಲೋಕ ತ್ಯಜಿಸಿದ್ದಾರೆ. ಹಾಗಾಗಿ ತಂದೆಯೇ ತಾಯಿ ಪ್ರೀತಿ ಕೊಟ್ಟು ಬೆಳೆಸಿದ್ದಾರೆ. ತಾಯಿ ತೀರಿಕೊಂಡ ಬಳಿಕ ವಸಿಷ್ಠ ತನ್ನ ಅಮ್ಮನ ಮೂಗು ಬೊಟ್ಟು ಮತ್ತು ತಾಳಿಯನ್ನ ಜೇಬಿನಲ್ಲಿ ಇಟ್ಟುಕೊಂಡೆ ಓಡಾಡುತ್ತಿದ್ದರು. ತಾಯಿ ತನ್ನ ಜೊತೆಯಲ್ಲೇ ಇದ್ದಾರೆ ಅನ್ನೋ ಫೀಲ್ ಇರುತ್ತೆ ಅನ್ನುವುದು ಇದರ ಉದ್ದೇಶವಾಗಿತ್ತು. ಈಗ ಆ ತಾಳಿ ಮತ್ತು ಮೂಗು ಬೊಟ್ಟನ್ನ ತನ್ನ ಮುದ್ದಾದ ಪತ್ನಿಗೆ ನೀಡಿರೋದನ್ನ ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಹಂಚ್ಚಿಕೊಂಡಿದ್ದಾರೆ.
ಅದೇನೇ ಇರಲಿ ತಾಯಿ ಅಂದ್ರೆ ಪ್ರತಿಯೊಬ್ಬರಿಗೂ ಸರ್ವಸ್ವ. ಕಳೆದುಕೊಂಡ ತಾಯಿಯನ್ನ ಪತ್ನಿಯಲ್ಲಿ ನೋಡ್ತಾ ಇದ್ದೀನಿ ಅನ್ನೋ ನಟ ವಸಿಷ್ಠ ಸಿಂಹನ ಮಾತು ನಿಜಕ್ಕೂ ಗ್ರೇಟ್.
ಇದನ್ನೂ ಓದಿ : 1 ರೂಪಾಯಿಗೆ ʼಯದಾ ಯದಾಹಿʼ ಪ್ರೀಮಿಯರ್ ಶೋ.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.