`ಕ್ಯಾಪ್ಟನ್ ಮಿಲ್ಲರ್` ಕಾದಂಬರಿಯ ನಕಲು: ವೇಲಾ ರಾಮಮೂರ್ತಿ ಗಂಭೀರ ಆರೋಪ!
Captain Miller: ನಟ ಧನುಷ್ ಹಾಗೂ ಶಿವರಾಜ್‌ಕುಮಾರ್ ಅಭಿನಯದ `ಕ್ಯಾಪ್ಟನ್ ಮಿಲ್ಲರ್` ಚಿತ್ರದ ಕಥೆಯನ್ನು ನಕಲಿ ಮಾಡಿದ್ದಾರೆ ಎಂದು ಬರಹಗಾರ ಮತ್ತು ನಟ ವೇಲಾ ರಾಮಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.
Captain Miller In Plagarism Row: ಇದೇ ವರ್ಷ ಸಂಕ್ರಾಂತಿಗೆ ಭರ್ಜರಿಯಾಗಿ ತೆರೆಕಂಡ ನಟ ಧನುಷ್ ಮತ್ತು ಶಿವರಾಜ್‌ಕುಮಾರ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಮಾಲ್ ಮಾಡುವ , ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಇದೀಗ ಈ ಚಿತ್ರದ ಮೇಲೆ ಖ್ಯಾತ ಲೇಖಕರೊಬ್ಬರು ಗಂಭೀರ ಆರೋಪ ಮಾಡಿ, ಸಿನಿಮಾದ ಕಥೆಯನ್ನು ನಕಲು ಮಾಡಲಾಗಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಇದೇ ಕಾಲಿವುಡ್‌ನಲ್ಲಿ ಸಕತ್ ಚರ್ಚೆಯಲ್ಲಿದೆ.
ಸದ್ಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾವನ್ನು ಕಾಪಿ ಮಾಡಲಾಗಿದೆ ಎಂದು ಬರಹಗಾರ ಮತ್ತು ನಟ ವೇಲಾ ರಾಮಮೂರ್ತಿ ಗಂಭೀರ ಆರೋಪ ಮಾಡಿ, ತಮ್ಮ ಕಾದಂಬರಿ ಪಟ್ಟತ್ತು ಯಾನೈ (ನೂರು ಆನೆಗಳು) ಅನ್ನು ಸಲೀಸಾಗಿ ನಕಲಿ ಮಾಡಿದ್ದಾರೆ ಎಂದು 'ಪುತ್ತಿಯ ತಲೈಮುರೈ' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಆರೋಪಿಸಿದ್ದಾರೆ. 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ತಂಡದ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಕರ ಸಂಘವನ್ನು ಸಂಪರ್ಕಿಸಲು ಸಿದ್ಧರಾಗಿರುವುದಾಗಿ ನಟ, ಬರಹಗಾರ ವೇಲಾ ರಾಮಮೂರ್ತಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: "ಶ್ರೀರಾಮ ನಮ್ಮ ಕಣ ಕಣದಲ್ಲೂ ಇದ್ದಾನೆ": ಕವಿತೆ ಬರೆದ ಕಿಚ್ಚ!
ಕ್ಯಾಪ್ಟನ್ ಮಿಲ್ಲರ್ ಸಿನಿಮಾ ತಂಡ ಚಲನಚಿತ್ರವನ್ನು ನಿರ್ಮಿಸುವ ಯಾವುದೇ ಅನುಮತಿಯನ್ನು ಪಡೆಯಲಿಲ್ಲ ಎಂದು ಬರಹಗಾರ ಬೇಸರ ಹೊರಹಾಕುತ್ತಾ,"ಕ್ಯಾಪ್ಟನ್ ಮಿಲ್ಲರ್ ನನ್ನ ಕಾದಂಬರಿ ಪಟ್ಟತ್ತು ಯಾನೈ ಅನ್ನು ಆಧರಿಸಿದೆ. ಕೃತಿಚೌರ್ಯ ಮಾಡಿ ಸಿನಿಮಾ ಮಾಡಲಾಗಿದೆ. ಹೀಗಾಗಿ ನನಗೆ ನ್ಯಾಯ ಬೇಕು. ಚಿತ್ರರಂಗದಲ್ಲಿ ಪ್ರಾಮಾಣಿಕತೆ ಇಲ್ಲ. ನಾನಯ ಹೆಸರು ಗಳಿಸಲು ಇದೆಲ್ಲ ಮಾಡುತ್ತಿಲ್ಲ. ಹಾಗಾಗಿ ಭಾರತಿರಾಜ ಅವರು ನನಗೆ ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ನ್ಯಾಯಕ್ಕಾಗಿ ಸಿನಿಮಾ ನಿರ್ದೇಶಕರ ಸಂಘದ ಮೊರೆ ಹೋಗುತ್ತಿದ್ದೇನೆ" ಎಂದಿದ್ದಾರೆ.
ಕೃತಿಚೌರ್ಯದ ಆರೋಪದ ಕುರಿತು ಚಿತ್ರ ತಂಡದ ವಿರುದ್ಧದ ತನ್ನ ಆರೋಪಗಳನ್ನು ಸ್ಪಷ್ಟಪಡಿಸಿದ ವೇಲಾ ರಾಮಮೂರ್ತಿ, ತಾನು ಖ್ಯಾತಿ ಅಥವಾ ಹಣವನ್ನು ಗಳಿಸುವ ಯೋಚನೆಯಿಂದ ತಂಡದ ಮೇಲೆ ಈ ಆರೋಪಗಳನ್ನು ಮಾಡಿಲ್ಲ. ಆದರೆ ಬೌದ್ಧಿಕ ಆಸ್ತಿ ಹಕ್ಕುಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ಮತ್ತು ಅವರ ಶ್ರಮಕ್ಕೆ ನ್ಯಾಯ ಪಡೆಯಲು ಇದನ್ನು ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಲೇಖಕ ವೇಲಾ ರಾಮಮೂರ್ತಿ ಬರವಣಿಗೆಯ ಜೊತೆ ಜೊತೆಗೆ. ತಮಿಳು ಚಿತ್ರರಂಗದಲ್ಲಿ ಕಿದಾರಿ, ಸೇತುಪತಿ, ಎನ್‌ಜಿಕೆ, ನಮ್ಮ ವೀಟು ಪಿಳ್ಳೈ, ಅನ್ನತ್ತೆ ಮತ್ತು ಇನ್ನೂ ಅನೇಕ ಸಿನಿಮಾಗಳು ಮತ್ತು ಅನೇಕ ತಮಿಳು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಇನ್ನು, ಈ ಬಗ್ಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ