"ಶ್ರೀರಾಮ ನಮ್ಮ ಕಣ ಕಣದಲ್ಲೂ ಇದ್ದಾನೆ": ಕವಿತೆ ಬರೆದ ಕಿಚ್ಚ!

Kiccha Sudeeep Post: ಅಯೋಧ್ಯೆಯ ರಾಮಲಲಾ ಪ್ರಾಣ ಪ್ರತಿಷ್ಠಾಪನೆಯ ದಿನ ನಟ ಕಿಚ್ಚ ಸುದೀಪ್‌ ಬಾಲ ರಾಮನ ಫೋಟೋ ಮುಂದೆ ಹೂವನಿಟ್ಟು ದೀಪ ಬೆಳಗಿಸಿರುವ ವಿಡಿಯೋವನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡುವುದರ ಜೊತೆಗೆ ಕವಿತೆಯನ್ನು ಬರೆದು ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.  

Written by - Zee Kannada News Desk | Last Updated : Jan 23, 2024, 10:30 AM IST
  • ಅನೇಕ ನಟರು ಸೋಶಿಯಲ್ ಮೀಡಿಯಾದಲ್ಲಿ ರಾಮನ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
  • ಬಾದ್‌ಶಾ ಕಿಚ್ಚ ಸುದೀಪ್‌ ಬಾಲ ರಾಮನ ಫೋಟೋ ಮುಂದೆ ಹೂವನಿಟ್ಟು ದೀಪ ಬೆಳಗಿಸಿ ತಮ್ಮ ರಾಮ ಭಕ್ತಿಯನ್ನ ವ್ಯಕ್ತಪಡಿಸಿದ್ದಾರೆ.
  • 500 ವರ್ಷಗಳ ಕತ್ತಲೆಯ ನಂತರ ಒಂದು ರಾಷ್ಟ್ರದ, ಜನರ, ಬೆಳಕಿನ ಪ್ರಾಣ-ಪ್ರತಿಷ್ಠೆ, ಜೈ ಶ್ರೀರಾಮ್ಎಂದು ಸುದೀಪ್ ಬರೆದುಕೊಂಡಿದ್ದಾರೆ.
"ಶ್ರೀರಾಮ ನಮ್ಮ ಕಣ ಕಣದಲ್ಲೂ ಇದ್ದಾನೆ": ಕವಿತೆ ಬರೆದ ಕಿಚ್ಚ! title=

Kiccha Sudeep Post On Ram Mandir: ಭಾರತದಲ್ಲಿ ಸುಮಾರು 5 ಶತಮಾನಗಳ ಹೋರಾಟ ಹಾಗೂ ಕಾಯುವಿಕೆ ನಂತರ ನಿನ್ನೆ ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆಯ ಕಾರ್ಯ ನೆರವೇರಿದೆ. ಈ ಶುಭ ಸಮಾರಂಭದಲ್ಲಿ ದೇಶದ ಅನೇಕ ಗಣ್ಯರು ಭಾಗವಹಿಸಿದ್ದರು. ಇನ್ನೂ ಅನೇಕ ನಟರು ಸೋಶಿಯಲ್ ಮೀಡಿಯಾದಲ್ಲಿ ರಾಮನ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದರಂತೆ ಅಭಿನಯ ಚಕ್ರವತಿ ಕಿಚ್ಚ ಸುದೀಪ್‌ ಬಾಲ ರಾಮನ ಫೋಟೋ ಮುಂದೆ ಹೂಗಳನ್ನ ಇಟ್ಟು ಪೂಜೆ ಸಲ್ಲಿಸಿದ್ದಾರೆ. 

ಬಾದ್‌ಶಾ ಕಿಚ್ಚ ಸುದೀಪ್‌ ಬಾಲ ರಾಮನ ಫೋಟೋ ಮುಂದೆ ಹೂವನಿಟ್ಟು ದೀಪ ಬೆಳಗಿಸಿ ತಮ್ಮ ರಾಮ ಭಕ್ತಿಯನ್ನ  ವ್ಯಕ್ತಪಡಿಸಿದ್ದಾರೆ. ರಾಮನ ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಮತ್ತು ಹೇಗೆ ರಾಮ ನಮ್ಮಲ್ಲಿ ಉಳಿದು ಹೋಗಿದ್ದಾನೆ ಅನ್ನೋದನ್ನ ಬರೆದುಕೊಂಡು, ಶ್ರೀರಾಮನ ನಮ್ಮ ಕಣ ಕಣದಲ್ಲೂ ಇದ್ದಾನೆ ಅನ್ನೋದನ್ನ  ಹೇಳಿಕೊಂಡಿದ್ದಾರೆ. ಸುದೀಪ್‌ ಸೋಷಿಯಲ್‌ ಮಿಡಿಯಾದಲ್ಲಿ ವಿಶೇಷವಾದ ಸಾಲುಗಳನ್ನ ಬರೆದು ಶ್ರೀರಾಮನ ಗುಣಗಾನ ಮಾಡಿದ್ದಾರೆ. 

ಇದನ್ನೂ ಓದಿ: "ಮರ್ಯಾದಾ ಪುರುಷೋತ್ತಮ ರಾಮನಿಗೆ ನಮನ": ರಾಕಿಂಗ್‌ ಸ್ಟಾರ್‌ ಯ‌ಶ್!‌

ಸುದೀಪ್‌ ಸೋಷಿಯಲ್‌ ಮಿಡಿಯಾದಲ್ಲಿ ಅವನ ತೋಳುಗಳು ನಮ್ಮ ಬಲ, ಅವನ ಎದೆ ನಮ್ಮ ಮಹತ್ವಾಕಾಂಕ್ಷೆ, ಅವನ ಕೈಗಳು ನಮ್ಮ ಶೌರ್ಯ, ಅವನ ಪಾದ ನಮ್ಮ ಮುಕ್ತಿ, ಅವನ ರೂಪದಲ್ಲಿ, ಎಲ್ಲಾ ಸೃಷ್ಟಿಯ ಸಾರವಿದೆ ಆದ್ದರಿಂದ ಇದು ಪ್ರಾರಂಭವಾಗುತ್ತದೆ, ಇಲ್ಲಿಂದ ನಾವು ಏರುತ್ತೇವೆ. 500 ವರ್ಷಗಳ ಕತ್ತಲೆಯ ನಂತರ ಒಂದು ರಾಷ್ಟ್ರದ, ಜನರ, ಬೆಳಕಿನ ಪ್ರಾಣ-ಪ್ರತಿಷ್ಠೆ, ಜೈ ಶ್ರೀರಾಮ್ಎಂದು ಸುದೀಪ್ ಬರೆದುಕೊಂಡಿದ್ದಾರೆ. ಆ ಒಂದು ವಿಡಿಯೋವನ್ನ ಸುದೀಪ್‌ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ಹಾಗೆ ಸುದೀಪ್‌ "ರಾಮ ಜಯ ರಾಮ ಆದಿ ಗುರು ಮಹರ್ಷಿ ಶ್ರೀ ವಾಲ್ಮೀಕಿ ಮೊದಲು ನಿಮ್ಮ ಕಥೆ ಹೇಳಿದರು. ವಾಲ್ಮೀಕಿಗಳು ರೂಪಿಸಿದ ಶ್ರೀ ರಾಮ ನೀನು ನಮ್ಮ ಎದೆಯಲ್ಲಿ ಶಾಶ್ವತವಾಗಿ ನಿಂತೆ. ವರ್ಷಗಳ ಕಾಯುವಿಕೆ ನಂತರ ಇಂದು ವಿರಾಜಮಾನನಾದೆ ಗುಡಿಯೊಳಗೆ. ನಿನ್ನ ಕಣ್ತುಂಬಿಕೊಳ್ಳಲು ಎರಡೇ ಕಣ್ಣನ್ನೇಕೆ ಕೊಟ್ಟೆ ನಿನ್ನ ಕೀರ್ತನೆಗೆ ಎರಡೇ ಕಿವಿಗಳು. ನಮ್ಮದು ಎಂತಹ ಪುಣ್ಯ, ಕರುನಾಡಿನಿಂದ ವಿಗ್ರಹವಾಗಿ ರೂಪುಗೊಂಡೆ. ಕರ್ನಾಟಕದ ಮಣ್ಣ ಗರ್ಭದಿಂದ ಎದ್ದು ಬಂದೆ ನಿನ್ನ ಆಲಯ ಕಟ್ಟಲು ಶ್ರೀ ವಿಶ್ವ ಪ್ರಸನ್ನ ತೀರ್ಥ ಗುರುಗಳಿಗೆ ಅದೃಷ್ಟ ಕೊಟ್ಟೆ, ಅರುಣ್ ಯೋಗಿರಾಜ್ ಅವರಿಗೆ ನಿನ್ನ ಕೆತ್ತಲು. ನಿನ್ನ ಪರಮ ಭಕ್ತ ಕವಚದ ಮಣ್ಣಿನ ವೀರ ಹನುಮನ ಇದು ಕರ್ನಾಟಕಕ್ಕೆ ನಿಜದ ಸಮ್ಮಾನ. ‘ಜೈ ಶ್ರೀ ರಾಮ್’" ಎಂದು ಬರೆದು ಪ್ರಧಾನಿ ನರೇಂದ್ರ ಮೋದಿಗೆ ಅಧ್ಬುತ ಕ್ಷಣ ನೀಡಿದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News