ಮುಂಬೈ : ಹಿರಿಯ ನಟ ನಸೀರುದ್ದೀನ್ ಷಾ ಅವರಿಗೆ ನ್ಯುಮೋನಿಯಾ ಇರುವುದು ಪತ್ತೆಯಾಗಿದ್ದು, ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪತ್ನಿ ರತ್ನ ಪಾಠಕ್ ಷಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

70 ವರ್ಷದ ನಸೀರುದ್ದೀನ್ ಷಾ(Naseeruddin Shah) ಅವರನ್ನು ಖಾರ್ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಶ್ವಾಸಕೋಶದಲ್ಲಿ ನ್ಯುಮೋನಿಯಾದ ಸಣ್ಣ ಪ್ಯಾಚ್ ಕಂಡು ಬಂದಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇದನ್ನೂ ಓದಿ : Dilip Kumar : ಆಸ್ಪತ್ರೆಗೆ ದಾಖಲಾದ ದಿಲೀಪ್ ಕುಮಾರ್ : ICU ನಲ್ಲಿ ಚಿಕಿತ್ಸೆ!


ಅವರಿಗೆ ಶ್ವಾಸಕೋಶದಲ್ಲಿ ಸಣ್ಣ ಪ್ಯಾಚ್(small patch found in lungs) ಇದ್ದು ಅವರು ಸಧ್ಯ ನಿಯಂತ್ರಣದಲ್ಲಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಆದ್ದರಿಂದ ಅವರನ್ನು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಎಂದು ರತ್ನ ಪಾಠಕ್ ಷಾ ತಿಳಿಸಿದ್ದಾರೆ.


ಇದನ್ನೂ ಓದಿ : ದಕ್ಷಿಣದ ನಿರ್ಮಾಪಕನೊಂದಿಗೆ ಅಜಯ್ ದೇವಗನ್ ಮುಂದಿನ ಚಿತ್ರ


ರಾಷ್ಟ್ರೀಯ ಪ್ರಶಸ್ತಿ(National Award) ವಿಜೇತ ನಟ ನಸೀರುದ್ದೀನ್ ಷಾ ಕೊನೆಯ ಬಾರಿಗೆ 2020 ರಲ್ಲಿ "ಮೀ ರಕ್ಸಮ್" ಮತ್ತು ಮೆಚ್ಚುಗೆ ಪಡೆದ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ "ಬ್ಯಾಂಡಿಶ್ ಡಕಾಯಿತ" ನಲ್ಲಿ ಕಾಣಿಸಿಕೊಂಡಿದ್ದರು.


ಇದನ್ನೂ ಓದಿ : ಅಭಿಮಾನಿಯ ಸಂತೋಷಕ್ಕಾಗಿ ಕಮಲ್ ಹಾಸನ್ ಮಾಡಿಯೇ ಬಿಟ್ಟರು ಈ ಕೆಲಸ ..!


ಅವರ ಮುಂಬರುವ ಚಿತ್ರ "The Miniaturist Of Junagadh' ಚಿತ್ರದಲ್ಲಿ ರಸಿಕಾ ದುಗಲ್ ಅವರೊಂದಿಗೆ ಶಾ ಕಾಣಿಸಿಕೊಳ್ಳಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.