ಸೂಪರ್‌ ಸ್ಟಾರ್‌ ರಜನಿಕಾಂತ್‌ರನ್ನು ಬಾಲಿವುಡ್‌ಗೆ ಪರಿಚಯಿಸಿದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಟಿ. ರಾಮರಾವ್ ಇಂದು ಮುಂಜಾನೆ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ 83 ವರ್ಷ ವಯಸ್ಸಾಗಿತ್ತು. ಟಿ.ರಾಮರಾವ್‌ ಅವರ ಕುಟುಂಬ ನಿಧನದ ಸುದ್ಧಿಯನ್ನು ದೃಢಪಡಿಸಿದೆ. ಅವರ ಅಂತಿಮ ವಿಧಿವಿಧಾನಗಳು ಇಂದು ಸಂಜೆ ಚೆನ್ನೈನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: ಸ್ನಾನಕ್ಕೆಂದು ತೆರಳಿದ್ದ ಆಶ್ರಮದ ನಾಲ್ವರು ಬಾಲಕಿಯರು ನೀರುಪಾಲು


ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕ ಟಿ. ರಾಮರಾವ್ ಅವರು ಪತ್ನಿ ಟಿ. ಜಯಶ್ರೀ ಮತ್ತು ಮಕ್ಕಳಾದ ಚಾಮುಂಡೇಶ್ವರಿ, ನಾಗ ಸುಶೀಲ, ಅಜಯ್ ಮತ್ತು ಕುಟುಂಬ ಸದಸ್ಯರನ್ನು ಅಗಲಿದ್ದಾರೆ.  ನಿಧನದ ಬಗ್ಗೆ ಕುಟುಂಬ ಸದಸ್ಯರು ಮಾಹಿತಿಯನ್ನು ಬಿಡುಗಡೆ ಮಾಡಿದ್ದು, "ನಮ್ಮ ಪ್ರೀತಿಯ ಟಿ. ರಾಮರಾವ್ ಅವರು ಏಪ್ರಿಲ್ 20, 2022 ರ ಮುಂಜಾನೆ ನಿಧನರಾಗಿದ್ದಾರೆ" ಎಂದು ತಿಳಿಸಿದ್ದಾರೆ. 


ಟಿ. ರಾಮರಾವ್ ಅವರು ತೆಲುಗು, ತಮಿಳು ಮತ್ತು ಹಿಂದಿ ಚಲನಚಿತ್ರೋದ್ಯಮದಲ್ಲಿ ಅನೇಕ ಪ್ರಮುಖ ನಟರೊಂದಿಗೆ ಕೆಲಸ ಮಾಡಿದ್ದಾರೆ. ಬಾಲಿವುಡ್‌ನ ಅಮಿತಾಭ್ ಬಚ್ಚನ್‌ನಿಂದ ಶ್ರೀದೇವಿಯವರೆಗೆ, ತೆಲುಗಿನ ಎನ್‌ಟಿಆರ್ ಮತ್ತು ಎಎನ್‌ಆರ್‌ವರೆಗೆ ಅವರು ಭಾರತದ ಅನೇಕ ಟಾಪ್ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. ನವರಾತ್ರಿ, ಬ್ರಹ್ಮಚಾರಿ, ಇಲ್ಲಲು, ಪಾಂಡನಿ ಜೀವಿತಂ, ಅಂಧಾ ಕಾನೂನ್, ನಾಚೆ ಮಯೂರಿ, ಮುಕಾಬ್ಲಾ ಹೀಗೆ ಹಲವಾರು ಹಿಟ್‌ ಸಿನಿಮಾಗಳನ್ನು ಸಿನಿರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 


ಇದನ್ನು ಓದಿ: ಹುಬ್ಬಳ್ಳಿ ಕೋಮು ಗಲಭೆಗೆ ಕಾಂಗ್ರೆಸ್ ಪಕ್ಷವೇ ರೂವಾರಿ: ಬಿಜೆಪಿ ಆರೋಪ


ನಿರ್ದೇಶನದ ಜೊತೆಗೆ, ಅವರು ಶ್ರೀ ಲಕ್ಷ್ಮಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಮಿಳು ಚಲನಚಿತ್ರಗಳನ್ನು ಸಹ ನಿರ್ಮಿಸಿದ್ದಾರೆ. ದಿಲ್, ಯೂತ್, ಅರುಣ್, ಸಮ್‌ಥಿಂಗ್ ಸಮ್‌ಥಿಂಗ್ ಉನಕುಮ್ ಎನಕುಮ್ ಮತ್ತು ಮಲೈಕೋಟೈ ಸಿನಿಮಾಗಳನ್ನು ನಿರ್ಮಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.