ಹುಬ್ಬಳ್ಳಿ ಕೋಮು ಗಲಭೆಗೆ ಕಾಂಗ್ರೆಸ್ ಪಕ್ಷವೇ ರೂವಾರಿ: ಬಿಜೆಪಿ ಆರೋಪ

ಕರ್ನಾಟಕದ ಮೀರ್​ ಸಾಧಿಕ್​ ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಈಗ ಒಂದರ ಮೇಲೊಂದರಂತೆನಡೆಯುತ್ತಿರುವ ಕೋಮು ಪ್ರಚೋದನೆ ಚಟುವಟಿಕೆಗಳ ಹಿಂದಿರುವುದು ನಿಮ್ಮ ಕುಚೇಷ್ಟೆಯೋ ಅಥವಾ ಕೆಪಿಸಿಸಿಯ ಭ್ರಷ್ಟ ಅಧ್ಯಕ್ಷನ ಕೈವಾಡವೋ ಎಂದು ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : Apr 20, 2022, 03:37 PM IST
  • ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ನಡೆಸಿದ ಪೂರ್ವ ನಿಯೋಜಿತ ಸಂಚು ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ
  • ಹುಬ್ಬಳ್ಳಿ ಕೋಮು ಪ್ರಚೋದನೆಗೆ ಕಾರಣನಾದ ಮೌಲ್ವಿಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ
  • ಹಿಂದೂ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸುವ ಮೂಲಕ ಕಾಂಗ್ರೆಸ್ ಹುಬ್ಬಳ್ಳಿ ಘಟನೆ ಮುಚ್ಚಿ ಹಾಕಲು ಸಂಚು ರೂಪಿಸಿದೆ
ಹುಬ್ಬಳ್ಳಿ ಕೋಮು ಗಲಭೆಗೆ ಕಾಂಗ್ರೆಸ್ ಪಕ್ಷವೇ ರೂವಾರಿ: ಬಿಜೆಪಿ ಆರೋಪ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ

ಬೆಂಗಳೂರು: ಹನುಮ ಜಯಂತಿಯಂದು ಹುಬ್ಬಳ್ಳಿಯಲ್ಲಿ ನಡೆದ ಕೋಮು ಗಲಭೆಗೆ ಕಾಂಗ್ರೆಸ್​ ಪಕ್ಷವೇ ರೂವಾರಿ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. #CONgressSupportsJihadis ಹ್ಯಾಶ್ ಟ್ಯಾಗ್ ಬಳಸಿ ಬುಧವಾರ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

‘ಹಿಜಾಬ್ ವಿವಾದ & ಹುಬ್ಬಳ್ಳಿ ಕೋಮು ಗಲಭೆಗೆ ಸಾಮ್ಯತೆ ಇದೆ ಎಂದು ಬಿಜೆಪಿ ಆರೋಪಿಸಿದೆ.  ಎರಡು ಕೂಡ ಕಾಂಗ್ರೆಸ್ ಪ್ರೇರಿತ ಮತಕ್ರೋಢೀಕರಣದ ತಂತ್ರ. ಹಿಜಾಬ್ ಪ್ರಕರಣದಲ್ಲಿ ತನ್ನ ಕಾನೂನು ಘಟಕದ ಅಧ್ಯಕ್ಷರನ್ನೇ ವಾದ ಮಾಡಲು ನಿಯೋಜಿಸಿತು. ಹುಬ್ಬಳ್ಳಿ ಗಲಭೆಯ ಮತಾಂಧ ಆರೋಪಿಗಳ ಪರವಾಗಿ ಕೆಪಿಸಿಸಿಯಿಂದಲೇ ವಕೀಲರನ್ನು ನಿಯೋಜಿಸುತ್ತೀರಾ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಕಾಂಗ್ರೆಸ್ ಪಕ್ಷವೇ ಹುಬ್ಬಳ್ಳಿ ಗಲಭೆಯ ರೂವಾರಿ. ಹುಬ್ಬಳ್ಳಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ತನ್ನ ಕಾರಿನಲ್ಲಿ ಕೋಮು ಪ್ರಚೋದನೆಗೆ ಕಾರಣನಾದ ಮೌಲ್ವಿಯನ್ನು ಜೋಪಾನವಾಗಿ ಕರೆದೊಯ್ದಿದ್ದರು. ಹುಬ್ಬಳ್ಳಿ ಗಲಭೆ ಕಾಂಗ್ರೆಸ್‌ ನಡೆಸಿದ ಪೂರ್ವನಿಯೋಜಿತ ಸಂಚು ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ವಾಣಿ ವಿಲಾಸ ಮಾದರಿಯಲ್ಲಿ ಕೆ.ಸಿ‌. ಜನರಲ್ ನಲ್ಲೂ ತಾಯಿ-ಶಿಶು ಆಸ್ಪತ್ರೆ - ಡಾ.ಸುಧಾಕರ್

‘ಕರ್ನಾಟಕದ #ಮೀರ್‌ಸಾಧಿಕ್ ಸಿದ್ದರಾಮಯ್ಯನವರೇ, ರಾಜ್ಯದಲ್ಲಿ ಈಗ ಒಂದರ ಮೇಲೊಂದರಂತೆ ನಡೆಯುತ್ತಿರುವ ಕೋಮು ಪ್ರಚೋದನಾ ಚಟುವಟಿಕೆಗಳ ಹಿಂದಿರುವುದು ನಿಮ್ಮ ಕುಚೇಷ್ಠೆಯೋ ಅಥವಾ ಕೆಪಿಸಿಸಿಯ #ಭ್ರಷ್ಟಾಧ್ಯಕ್ಷ ನ ಕೈವಾಡವೋ? ಸಮಾಜದಲ್ಲಿ ಶಾಂತಿ- ಸುಭಿಕ್ಷೆ ನೆಲೆಸುವುದು ಕಾಂಗ್ರೆಸ್‌ ನಾಯಕರಿಗೆ ಬೇಕಿಲ್ಲವೇ?’ ಎಂದು ಬಿಜೆಪಿ ಕುಟುಕಿದೆ.

‘ಹುಬ್ಬಳ್ಳಿ ಘಟನೆಯ ದುರುಳರನ್ನು #ಮೀರ್‌ಸಾದಿಕ್ ಸಿದ್ದರಾಮಯ್ಯನವರು ಅಮಾಯಕರು ಎಂದು ಶರಾ ಬರೆದಿದ್ದಾರೆ. ಶಿರಚ್ಛೇದ ಮಾಡುತ್ತೇವೆ ಎಂದು ಕೇಕೆ ಹಾಕಿದವರು ಅಮಾಯಕರೇ? ತಲೆ ಕತ್ತರಿಸಲು ಮುಂದಾಗಿರುವವರಿಗೆ ಕೆಪಿಸಿಸಿ ಕಾನೂನು‌ ಘಟಕ ನೆರವು ನೀಡುತ್ತದೆಯೇ ಅಥವಾ ಖುದ್ದು ಸಿದ್ದರಾಮಯ್ಯ ವಾದ ಮಾಡುತ್ತಾರೋ?’ ಅಂತಾ ಪ್ರಶ್ನಿಸಿದೆ.

‘ಹಿಂದೂ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸುವ ಮೂಲಕ ಕಾಂಗ್ರೆಸ್ ಹುಬ್ಬಳ್ಳಿ ಘಟನೆಯನ್ನು ಮುಚ್ಚಿ ಹಾಕುವುದಕ್ಕೆ ಸಂಚು ರೂಪಿಸಿದೆ. ಅಧಿಕಾರದಲ್ಲಿದ್ದಾಗ ಹಿಂದೂ ಧರ್ಮ ವಿಭಜನೆಗೆ ಆಗ್ರಹಿಸಿದ ವ್ಯಕ್ತಿ ಚುನಾವಣೆ ಹತ್ತಿರುವಾಗುತ್ತಿದ್ದಂತೆ ಹಳೆ‌ ವಿಚಾರದ ಪ್ರಚಾರಕ್ಕೆ ಹೊರಟಿದ್ದಾರೆ’ ಅಂತಾ ಟೀಕಿಸಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ, ಬಿಜೆಪಿ ಬೆಂಕಿಗೆ ಕಾಂಗ್ರೆಸ್ ಪೆಟ್ರೋಲ್: ಎಚ್.ಡಿ.ಕೆ

‘ಹಿಂದು ವಿರೋಧಿ #ಮೀರ್‌ಸಾದಿಕ್ ಗೆ ವಿಪಕ್ಷ ನಾಯಕನ ಪಟ್ಟ. ಕೆಪಿಸಿಸಿ ಭ್ರಷ್ಟಾಧ್ಯಕ್ಷರಿಂದ ಅಲ್ಪಮತೀಯ ಕೋಮು ಕ್ರಿಮಿಗಳಿಗೆ ಅಮಾಯಕರ ಪಟ್ಟ. ಧರ್ಮ ವಿಭಜಕನಿಗೆ ಪ್ರಚಾರ ಸಮಿತಿ ಅಧ್ಯಕ್ಷ ಪಟ್ಟ. ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ಹುಬ್ಬಳ್ಳಿಯಂತಹ ಹತ್ತಾರು ಘಟನೆಗೆ ಸಂಚು ರೂಪಿಸುತ್ತಿದ್ದಾರೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News