singer Sharda Rajan dies : ಹಿರಿಯ ಗಾಯಕಿ ಮತ್ತು ಸಂಗೀತ ಸಂಯೋಜಕಿ ಶಾರದಾ ರಾಜನ್ ಅವರು ನಿಧನರಾಗಿದ್ದಾರೆ. 1966ರ ಸೂರಜ್ ಚಲನಚಿತ್ರದ ʼತಿತ್ಲಿ ಉಡಿʼ ಪೌರಾಣಿಕ ಗೀತೆಗೆ ಹೆಸರುವಾಸಿಯಾಗಿದ್ದ ಅವರು 86ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಶಾರದಾ ರಾಜನ್ ಅಯ್ಯಂಗಾರ್ ಅವರು 25-10-1933 ರಂದು ತಮಿಳು ಕುಟುಂಬದಲ್ಲಿ ಜನಿಸಿದಳು. ನಟ ರಾಜ್‌ ಕಪೂರ್‌ ಅವರು ಶಾರದಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಮೊದಲಿಗೆ ರಾಜ್‌ ಕಪೂರ್‌ ಶಾರದಾ ಅವರನ್ನು ಸಂಗೀತ ನಿರ್ದೇಶಕರಾದ ಶಂಕರ್‌-ಜೈಕಿಶನ್‌ ಅವರಿಗೆ ಪರಿಚಯಿಸಿದ್ದರು. ಅಲ್ಲದೆ ಮೊಹಮ್ಮದ್‌ ರಫಿ ಅವರ ಜೊತೆ ಹಾಡಿದ ಮೊದಲ ಹಾಡಿಗೆ ಫಿಲ್ಮ್‌ ಫೇರ್‌ ಪ್ರಶಸ್ತಿಯನ್ನು ಪಡೆದರು.


ಇದನ್ನೂ ಓದಿ: ಶಾರುಖ್‌ ಖಾನ್‌ಗೆ ಬಲವಂತವಾಗಿ ಕಿಸ್‌ ಕೊಟ್ಟ ಮಹಿಳೆ, ವೈರಲ್‌ ಆಯ್ತು ವಿಡಿಯೋ!


ಆ ಸಮಯದಲ್ಲಿ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಹೆಚ್ಚಾಗಿ ಹಾಡುಗಳಿಗೆ ಧ್ವನಿಯನ್ನು ನೀಡುತ್ತಿದ್ದರು. ಆದ್ರೆ ಶಾರದಾ ಅವರ ಅಸಾಂಪ್ರದಾಯಿಕ ಧ್ವನಿ ಕೇಳುಗರ ಮನಗೆದ್ದಿತ್ತು. ಅವರು ಆನ್ ಈವ್ನಿಂಗ್ ಇನ್ ಪ್ಯಾರಿಸ್, ಅರೌಂಡ್ ದಿ ವರ್ಲ್ಡ್, ಗುಮ್ನಾಮ್, ಸಪ್ನೋ ಕಾ ಸೌದಾಗರ್ ಮತ್ತು ಕಲ್ ಆಜ್ ಔರ್ ಕಲ್ ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ. ಹೆಚ್ಚಾಗಿ ಶಾರದಾ ಅವರು ವೈಜಯಂತಿಮಾಲಾ, ಮುಮ್ತಾಜ್, ರೇಖಾ, ಶರ್ಮಿಳಾ ಟ್ಯಾಗೋರ್ ಮತ್ತು ಹೇಮಾ ಮಾಲಿನಿಯಂತಹ ನಟಿಯರಿಗೆ ಧ್ವನಿಯಾಗಿದ್ದರು.


ಶಾರದಾ ಆ ಕಾಲದ ಪ್ರಮುಖ ಸಂಗೀತ ನಿರ್ದೇಶಕರೊಂದಿಗೆ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ ಹಾಡಿದರು. 70 ರ ದಶಕದಲ್ಲಿ, ಅವರು ತಮ್ಮ ಪಾಪ್ ಆಲ್ಬಂ ಅನ್ನು ಪ್ರಾರಂಭಿಸಿ, ಸಂಗೀತ ನಿರ್ದೇಶನಕ್ಕೆ ಮುಂದಾದರು. ಶಾರದಾ ರಾಜನ್ 1960 ಮತ್ತು 70 ರ ದಶಕದಲ್ಲಿ ಜನಪ್ರಿಯ ಹೆಸರು. ಗಾಯಕ ಮೊಹಮ್ಮದ್ ರಫಿ, ಆಶಾ ಭೋಂಸ್ಲೆ, ಕಿಶೋರ್ ಕುಮಾರ್ ಮತ್ತು ಮುಖೇಶ್ ಅವರಂತಹ ಎಲ್ಲಾ ಸಂಗೀತ ಮಾಂತ್ರಿಕರೊಂದಿಗೆ ಕೆಲಸ ಮಾಡಿದ್ದಾರೆ. 


ಇದನ್ನೂ ಓದಿ:  ಕಂಗನಾ ನಿರ್ಮಿತ ಬಾಲೀವುಡ್ ಚಿತ್ರ 'ಟೀಕು ವೆಡ್ಸ್ ಶೇರು' ಟ್ರೈಲರ್ ಬಿಡುಗಡೆ


ಶಾರದಾ ರಾಜನ್ ಸಾಹಿತ್ಯ ಬರವಣಿಗೆಯಲ್ಲೂ ಪ್ರಯೋಗ ಮಾಡಿದರು ಮತ್ತು 1970 ರ ದಶಕದ ಮಧ್ಯಭಾಗದಲ್ಲಿ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಮಾ ಬೆಹೆನ್ ಔರ್ ಬಿವಿ, ತು ಮೇರಿ ಮೈನ್ ತೇರಾ, ಕ್ಷಿತಿಜ್, ಮಂದಿರ್ ಮಸೀದಿ ಮತ್ತು ಮೈಲಾ ಅಂಚಲ್ ಮುಂತಾದ ಚಿತ್ರಗಳಿಗೆ ಅವರು ಸಂಗೀತ ನೀಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.