ಚೆನ್ನೈ: ಜನಪ್ರಿಯ ತಮಿಳು ನಟ ವಿವೇಕ್ (Tamil actor Vivek) ಶನಿವಾರ ಬೆಳಿಗ್ಗೆ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಎದೆನೋವಿನಿಂದಾಗಿ ನಿನ್ನೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ನಟ ವಿವೇಕ್ ಅವರು ಚಿಕಿತ್ಸೆಗೆ ಸ್ಪಂಧಿಸದೆ ಇಂದು ಮುಂಜಾನೆ  4:35ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಸ್ಪತ್ರೆ ಹೊರಡಿಸಿದ ವೈದ್ಯಕೀಯ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್: 
59 ವರ್ಷದ ಹಾಸ್ಯನಟ ವಿವೇಕ್ ಅವರು ಗುರುವಾರ ಕೋವಿಡ್ 19 ಲಸಿಕೆ (Covid 19 Vaccine) ಹಾಕಿಸಿಕೊಂಡಿದ್ದರು. ಲಸಿಕೆ ಪಡೆದ ನಂತರ ಅವರು ಅರ್ಹ ಸಾರ್ವಜನಿಕರು ತಪ್ಪದೇ ಕೋವಿಡ್  19 ಲಸಿಕೆಗಳನ್ನು ಪಡೆಯುವಂತೆ ಕೂಡ ಮನವಿ ಮಾಡಿದ್ದರು.  ಅದರ ಮರುದಿನ ಅಂದರೆ ಶುಕ್ರವಾರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿವೇಕ್ ಅವರನ್ನು ಅವರ ಕುಟುಂಬ ಸದಸ್ಯರು  ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆಗೆ ದಾಖಲಿಸಿದ್ದರು.


ಇದನ್ನೂ ಓದಿ - Excessive Sweating: ನೀವು ಸಹ ಯಾವುದೇ ಕಾರಣವಿಲ್ಲದೆ ಅತಿಯಾಗಿ ಬೆವರುತ್ತೀರಾ? ಹಾಗಿದ್ದರೆ ಎಚ್ಚರ


ಹಾರ್ಟ್ ಬ್ಲಾಕೇಜ್:
ಹೃದಯ ನಾಳದಲ್ಲಿ ರಕ್ತ ಸಂಚಾರದಲ್ಲಿ ತೊಂದರೆಯಾದ ಕಾರಣ ವಿವೇಕ್ ಅವರಿಗೆ ಹೃದಯಾಘಾತವಾಗಿತ್ತು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಕೃತಕ ಶ್ವಾಸಕೋಶದಿಂದ ರಕ್ತನಾಳಗಳಿಗೆ ರಕ್ತ ಹರಿಯುವಂತೆ ಮಾಡಲು ಅವರನ್ನು ಎಕ್ಸ್‌ಟ್ರಾಕಾರ್ಪೊರಿಯಲ್ ಮೆಂಬರೇನ್ ಆಕ್ಸಿಜೀಕರಣ (ಇಸಿಎಂಒ) ಮೇಲೆ ಇರಿಸಲಾಗಿದೆ. ರೋಗಿಯ ದೇಹ, ಹೃದಯ (Heart) ಮತ್ತು ಶ್ವಾಸಕೋಶದ ಹೊರಗಿನಿಂದ ಇಸಿಎಂಒ ಕಾರ್ಯನಿರ್ವಹಿಸುತ್ತದೆ ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದರು.  ಆದರೆ ಚಿಕಿತ್ಸೆಗೆ ಸ್ಪಂದಿಸದ ಹಾಸ್ಯ ನಟ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.


ಇದನ್ನೂ ಓದಿ - "ಕೊರೊನಾ ಗಾಳಿಯಿಂದಲೂ ಹರಡುವುದಕ್ಕೆ ಪ್ರಬಲ ಪುರಾವೆ ಇದೆ"


ಖ್ಯಾತ ನಟನ ಅಗಲಿಕೆಗೆ ಕಂಬನಿ ಮಿಡಿದಿರುವ ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ನೀವು ನಮ್ಮನ್ನು ಅಗಲಿದ್ದೀರಿ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ... ದಶಕಗಳಿಂದ ನಮ್ಮನ್ನು ರಂಜಿಸಿದ್ದೀರಿ, ನಿಮ್ಮ ಪರಂಪರೆ ನಮ್ಮೊಂದಿಗೆ ಉಳಿಯುತ್ತದೆ ಎಂದಿದ್ದಾರೆ.


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.