ಬೆಂಗಳೂರು: ಬೇಸಿಗೆ ಕಾಲ ಪ್ರಾರಂಭವಾಗಿದೆ. ಈ ಋತುವಿನಲ್ಲಿ ಸೆಕೆ/ಶೆಕೆ ಮತ್ತು ಬೆವರು ಅನುಭವಿಸುವುದು ಸಾಮಾನ್ಯವಾಗಿದೆ. ಆದರೆ ಯಾವುದೇ ಕಾರಣವಿಲ್ಲದೆ ಅತಿಯಾಗಿ ಬೆವರುವವರೂ ಇದ್ದಾರೆ. ಸಾಮಾನ್ಯವಾಗಿ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ವಿನಾಕಾರಣ ಅತಿಯಾಗಿ ಬೆವರುವುದು ನಿಮಗೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದು ನಿಮಗೆ ತಿಳಿದಿದೆಯೇ?
- ಬಿಸಿಲಿನ ಬೇಗೆ ಹೆಚ್ಚಾದಾಗ ಅಥವಾ ಏನಾದರೂ ಕೆಲಸ ಮಾಡುವಾಗ ಬೆವರುವುದು ತುಂಬಾ ಸಾಮಾನ್ಯವಾಗಿದೆ. ಆದರೆ ಇದ್ದಕ್ಕಿದ್ದಂತೆ ನೀವು ಯಾವುದೇ ಕಾರಣವಿಲ್ಲದೆ ಬೆವರುತ್ತಿದ್ದರೆ ಇದು ಹಲವು ಕಾಯಿಲೆಗಳಿಗೆ ಮುನ್ಸೂಚನೆ ಆಗಿರಬಹುದು ಎಚ್ಚರ.
ಇದನ್ನೂ ಓದಿ - Black pepper: ಪ್ರತಿದಿನ ಕೇವಲ ಒಂದೆರಡು ಕರಿಮೆಣಸನ್ನು ಸೇವಿಸಿ, ಈ ರೋಗಗಳಿಂದ ದೂರವಿರಿ
- ಯಾವುದೇ ಕಾರಣವಿಲ್ಲದೆ ಅತಿಯಾಗಿ ಬೆವರುಗುವುದು (Excessive Sweating) ಹೃದಯಾಘಾತದ ಸಂಕೇತವಾಗಿರಬಹುದು. ಎದೆ ನೋವು ಮತ್ತು ಸ್ನಾಯುಗಳ ಬಿಗಿತ ಎಲ್ಲವೂ ಹೃದಯಾಘಾತದ ಲಕ್ಷಣಗಳಾಗಿವೆ.
- ನೀವು ವ್ಯಾಯಾಮ ಮಾಡದಿದ್ದರೆ ಮತ್ತು ಇದರ ಹೊರತಾಗಿಯೂ ನೀವು ಹೆಚ್ಚು ಬೆವರುತ್ತಿದ್ದರೆ, ಅದು ಹೃದ್ರೋಗದ (Heart) ಸಂಕೇತವಾಗಿರಬಹುದು. ಹೃದಯಕ್ಕೆ ರಕ್ತವನ್ನು ಸಾಗಿಸುವ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾದಾಗ, ಅದು ನಿರ್ಬಂಧಿಸುತ್ತದೆ ಮತ್ತು ಹೃದಯಕ್ಕೆ ರಕ್ತದ ಹರಿವು ಕಡಿಮೆಯಾಗುತ್ತದೆ. ಈ ಸಮಯದಲ್ಲಿ, ನಮ್ಮ ಹೃದಯವು ರಕ್ತವನ್ನು ಪಂಪ್ ಮಾಡಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು, ಬೆವರು ಹೊರಬರಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ - Sleeping Tips: ರಾತ್ರಿ ಮಲಗುವಾಗ ನೀವೂ ಈ ರೀತಿಯ ಒಳಉಡುಪು ಧರಿಸುತ್ತಿದ್ದರೆ ಎಚ್ಚರ!
- ಇದಲ್ಲದೆ, ದೀರ್ಘ ಸಮಯದವರೆಗೆ ನಿಮಗೆ ಕೈ, ಭುಜ ಅಥವಾ ತಲೆ ನೋವಿನ ಸಮಸ್ಯೆ ಕಾಡುತ್ತಿದ್ದರೆ ಇವು ಹೃದಯಾಘಾತದ ಲಕ್ಷಣಗಳಾಗಿವೆ. ಈ ರೀತಿಯ ಲಕ್ಷಣಗಳು ಕಂಡು ಬಂದರೆ ತಡಮಾಡದೇ ನಿಮ್ಮ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆಯಿರಿ.
- ಹೃದಯಾಘಾತಕ್ಕೆ ವಾಯುಮಾಲಿನ್ಯವೂ ಮುಖ್ಯ ಕಾರಣವಾಗಿದೆ. ಇಂದಿನ ಕಾಲದಲ್ಲಿ, ನಿಮ್ಮ ಶ್ವಾಸಕೋಶದ ಮೇಲೆ ದಾಳಿ ಮಾಡುವ ಅನೇಕ ರೀತಿಯ ವಿಷಕಾರಿ ವಸ್ತುಗಳು ಗಾಳಿಯಲ್ಲಿವೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.