ಜೈಪುರ್, ರಾಜಸ್ಥಾನ್: ಸಾಮಾನ್ಯವಾಗಿ ಚಿರತೆಯನ್ನು ತುಂಬಾ ಕ್ರೂರ ಪ್ರಾಣಿ ಎಂದು ಹೇಳಲಾಗುತ್ತದೆ. ಚಿರತೆ ನೀಡುವ ಒಂದೇ ಒಂದು ಹೊಡೆತ ಜೀವವನ್ನೇ ತೆಗೆಯುತ್ತದೆ ಎಂದು ಹೇಳಲಾಗುತ್ತದೆ. ಚಿರತೆ ಮತ್ತು ಇತರೆ ಪ್ರಾಣಿಗಳ ಮಧ್ಯೆ ಕಾನನದಲ್ಲಿ ನಡೆಯುವ ಹಲವು ವಿಡಿಯೋಗಳು ವೈರಲ್ ಆಗುತ್ತವೆ ಹಾಗೂ ಪ್ರಾಣಿಗಳು ಹೇಗೆ ತಮ್ಮ ಪ್ರಾಣ ರಕ್ಷಿಸಿಕೊಳ್ಳುತ್ತವೆ ಎಂಬುದರ ಕುರಿತು ಹಲವಾರು ವಿಡಿಯೋಗಳಿವೆ. ಇಂತಹ ಬಹತೇಕ ವಿಡಿಯೋಗಳಲ್ಲಿ ಚಿರತೆಯೇ ಮೇಲುಗೈಸಾಧಿಸುವುದನ್ನು ನೀವು ಗಮನಿಸಬಹುದು.  ಸದ್ಯ ಇಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ನಾಯಿಯೊಂದು ಚಿರತೆಯ ಜೊತೆಗೆ ಸೆಣೆಸಾಟ ನಡೆಸಿದ್ದು, ಚಿರತೆಯ ಬೆವರಿಳಿಸಿದೆ. ಕೇವಲ ಬೊಗಳುವುದರ ಮೂಲಕ ನಾಯಿ ಚಿರತೆಯನ್ನು ಹಿಮ್ಮೆಟ್ಟಿಸಿದ್ದನ್ನು ಕಂಡು ನೀವೂ ಓದು ಕ್ಷಣ ತಬ್ಬಿಬ್ಬಾಗುವಿರಿ. ತುಂಬಾ ಚಾಣಾಕ್ಷತೆಯಿಂದ ಈ ನಾಯಿ ತನ್ನ ಪ್ರಾಣ ಕಾಪಾಡಿಕೊಂಡಿದ್ದು, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಹವಾ ಸೃಷ್ಟಿಸಿದೆ.


COMMERCIAL BREAK
SCROLL TO CONTINUE READING


ರಾಜಸ್ಥಾನದ ಜೈಪುರ್ ನಲ್ಲಿರುವ ಝಲಾನಾ ಸಫಾರಿ ಪಾರ್ಕ್ ನಿಂದ ಈ ವಿಡಿಯೋ ಹೊರಬಿದ್ದಿದೆ ಎನ್ನಲಾಗಿದೆ. ವಿಡಿಯೋದಲ್ಲಿ ನಡುರಸ್ತೆಯಲ್ಲಿಯೇ ನಾಯಿಯೊಂದು ಮಲಗಿರುವುದನ್ನು ನೀವು ಗಮನಿಸಬಹುದು. ಇದೇ ವೇಳೆ ಕಾಡಿನಿಂದ ರಸ್ತೆಗೆ ಎಂಟ್ರಿ ನೀಡಿರುವ ಚಿರತೆಯೊಂದು ಅಲ್ಲಿಗೆ ಬಂದು ನಾಯಿಯನ್ನು ಮುಸಿಸಲು ಆರಂಭಿಸುತ್ತದೆ. ಇದರಿಂದ ಗಲಿಬಿಲಿಗೊಂಡ ನಾಯಿ ಒಮ್ಮೆಲೇ ಎದ್ದು ನಿಂತು ಜೋರಾಗಿ ಬೊಗಳಲು ಪ್ರಾರಂಭಿಸುತ್ತದೆ. ಇದರಿಂದ ಗಾಬರಿಗೊಂಡ ಚಿರತೆ ಹಿಂದೇಟು ಹಾಕಿ ಮರಳಿ ಅರಣ್ಯ ಸೇರುತ್ತದೆ.


ಪ್ರವಾಸಿಗರೊಬ್ಬರು ಶೂಟ್ ಮಾಡಿರುವ ಈ ವಿಡಿಯೋವನ್ನು Wilderness of India ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದೆ. ಇದುವರೆಗೆ ಈ ವಿಡಿಯೋ ಸುಮಾರು 21 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದೆ. ಚಿರತೆಯನ್ನು ಹಿಮ್ಮೆಟ್ಟಿದ ನಾಯಿಯನ್ನು ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸುಮಾರು 3 ನಿಮಿಷಗಳ ಅವಧಿಯ ಈ ವಿಡಿಯೋವನ್ನು ಜನ ಶೇರ್ ಕೂಡ ಮಾಡುತ್ತಿದ್ದಾರೆ.