Family Star Movie Release Date: ಟಾಲಿವುಡ್‌ ಸ್ಟಾರ್‌ ನಟ ವಿಜಯ್‌ ದೇವರಕೊಂಡ ಲೈಗರ್ ಸಿನಿಮಾದಿಂದ ಸೋಲನ್ನು ಕಂಡು, ಕಳೆದ ವರ್ಷ ಸೆಪ್ಟೆಂಬರ್ 1 ತೆರೆಕಂಡ ಖುಷಿ ಚಿತ್ರಕ್ಕೆ ಗೆಲುವನ್ನು ಬೀರಿದ್ದಾರೆ. ವಿಜಯ್‌ ದೇವರಕೊಂಡ ಅಭಿನಯದ ಖುಷಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈ ಚಿತ್ರದ ಬಳಿಕ ಈ ನಟ ರೌಡಿ ಸ್ಟಾರ್‌ನಿಂದ ಫ್ಯಾಮಿಲಿ ಸ್ಟಾರ್ ಆಗಿ ತೆರೆಗೆ ಬರಲು ಸಜ್ಜಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನಟ ವಿಜಯ್‌ ದೇವಕೊಂಡ ನಟಿಸಿರುವ ಫ್ಯಾಮಿಲಿ ಸ್ಟಾರ್ ಎಂಬ ಫ್ಯಾಮಿಲಿ ಎಂಟರ್ಟೈನ್ಮೆಂಟ್  ಸಿನಿಮಾ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಈ ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ಮೃಣಾಲ್ ಠಾಕೂರ್ ಬಣ್ಣ ಹಚ್ಚಿದ್ದಾರೆ. ಗೀತಾ ಗೋವಿಂದಂ ಸಿನಿಮಾದ ಬಳಿಕ ಡೈರೆಕ್ಟರ್‌ ಪರಶುರಾಮ್ ಮತ್ತೆ ವಿಜಯ್‌ ದೇವರಕೊಂಡಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇನ್ನೂ ಈ ಚಿತ್ರವನ್ನು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ.



ಇದನ್ನೂ ಓದಿ: ಮರೆಯಲಾಗದ ನೆನಪು ಅಪ್ಪು: ಕನ್ನಡ ಕಂದ ದಿವಂಗತ ಪುನೀತ್‌ ರಾಜ್‌ಕುಮಾರ್‌ 49ನೇ ವರ್ಷದ ಹುಟ್ಟುಹಬ್ಬ!!


ಫ್ಯಾಮಿಲಿ ಸ್ಟಾರ್ ರಿಲೀಸ್‌ ಡೇಟ್‌ ಹತ್ತಿರವಾಗುತ್ತಿದ್ದಂತೆ, ಸಿನಿತಂಡ ಹೊಸ ಹೊಸ ಅಪ್‌ಡೇಟ್‌ಗಳನ್ನು ನೀಡುತ್ತಿತ್ತು. ಇದೀಗ ಈ ಸಿನಿಮಾದ ಶೂಟಿಂಗ್‌ ಕಂಪ್ಲೀಟ್‌ ಆಗಿದೆ ಎಂದು ಸ್ವತಃ ವಿಜಯ್‌ ದೇವರಕೊಂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಗ್ಲಿಮ್ಸ್‌ ಹಾಗೂ ಟೀಸರ್‌ ಫ್ಯಾನ್ಸ್ಸ ಗಮನ ಸೆಳೆದಿದೆ. ಈ ಸಿನಿಮಾ ಇದೇ ಏಪ್ರಿಲ್ 5 ರಂದು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ.


ಬಹುನಿರೀಕ್ಷಿತ ಫ್ಯಾಮಿಲಿ ಸ್ಟಾರ್‌ ಚಿತ್ರ ಸಂಕ್ರಾಂತಿಯಂದು ರಿಲೀಸ್‌ ಆಗಬೇಕಿತ್ತು. ಆದರೆ ಚಿತ್ರೀಕರಣ ಪೂರ್ಣಗೊಳ್ಳದ ಕಾರಣದಿಂದಾಗಿ ಈ ಸಿನಿಮಾದ ರಿಲೀಸ್‌ ಡೇಟ್‌ ಮುಂದೂಡಲಾಗಿತ್ತು. ಬಹಳ ದಿನಗಳಿಂದ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಫಾಮಿಲಿ ಸ್ಟಾರ್‌ ಸಿನಿಮಾ ಮುಂದಿನ ತಿಂಗಳು ತೆರೆ ಮೇಲೆ ಮಿಂಚಲಿದ್ದು, ಪೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ