ಮರೆಯಲಾಗದ ನೆನಪು ಅಪ್ಪು: ಕನ್ನಡ ಕಂದ ದಿವಂಗತ ಪುನೀತ್‌ ರಾಜ್‌ಕುಮಾರ್‌ 49ನೇ ವರ್ಷದ ಹುಟ್ಟುಹಬ್ಬ!!

Puneeth Rajkumar Birthday: ಇಂದು (ಮಾರ್ಚ್‌ 17) ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ.. ಅಂಜನಿ ಪುತ್ರನಾಗಿ.. ರಾಜಕುಮಾರನಂತೆ ಮೆರೆದ ನಟ ಸಾರ್ವಭೌಮ, ಯುವರತ್ನ ಪುನೀತ್‌ ರಾಜ್‌ಕುಮಾರ್‌ ಅವರ 49ನೇ ವರ್ಷದ ಹುಟ್ಟುಹಬ್ಬದ ಸ್ಫೂರ್ತಿ ದಿನ ಇದು.. 

1 /6

ನಟ ಪುನೀತ್​ ರಾಜ್​ಕುಮಾರ್ ಅವರು ಭೌತಿಕವಾಗಿ ನಮ್ಮನಗಲಿ ಮೂರು ವರ್ಷಗಳು ಕಳೆದಿವೆ.. ಆದರೆ ಆ ಕನ್ನಡದ ಕಂದ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ..   

2 /6

ಕನ್ನಡ ಚಿತ್ರರಂಗದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೇ ಅತ್ಯುತ್ತಮ ಮಾದರಿ ವ್ಯಕ್ತಿತ್ವದಿಂದಲೂ ಜನರ ಮನಸ್ಸಿನಲ್ಲಿ ಉಳಿದುಕೊಂಡವರು ಪುನೀತ್‌ರಾಜಕುಮಾರ್.  

3 /6

ತಮ್ಮದೇ ಪ್ರೊಡಕ್ಷನ್ ಹೌಸ್‌ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಎಷ್ಟೋ ಜನರ ಜೀವನಕ್ಕೆ ದಾರಿ ದೀಪವಾಗಿದ್ದಾರೆ ನಮ್ಮ ಅಪ್ಪು..  

4 /6

ನಟನೆಯೊಂದಿಗೆ ಅನೇಕ ಕಾರ್ಯಕ್ರಮಗಳ ನಿರೂಪಣೆ, ಗಾಯಕನಾಗಿ ಅಪ್ಪು ಎಲ್ಲರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು..   

5 /6

ಕನ್ನಡಿಗರ ಎದೆಯಲ್ಲಿ ಎಂದೆಂದಿಗೂ ಜೀವಂತವಾಗಿರುವ ಅಪ್ಪು, ದೊಡ್ಮನೆ ರಾಜಕುಮಾರ ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ.   

6 /6

ಕನ್ನಡದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಎಷ್ಟೋ ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ.. ಬದುಕಿದರೆ ಅಪ್ಪು ಅವರಂತೆ ಬದುಕುಬೇಕು ಎನ್ನುತ್ತಾರೆ ಕನ್ನಡಿಗರು.