Spandana Vijay Raghavendra Death: ಸ್ಯಾಂಡಲ್ವುಡ್ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿದೇಶ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಅಸುನೀಗಿದ್ದಾರೆ. ಸ್ಯಾಂಡಲ್ವುಡ್ ಚಿನ್ನಾರಿ ಮುತ್ತ ತನ್ನ ಪ್ರೀತಿಯ ಮಡದಿ ಅಗಲಿಕೆಯಿಂದ ಕಂಗಾಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಚಿನ್ನಾರಿ ಮುತ್ತನ ಮುತ್ತಿನಂತಾ ಮಡದಿ "ಸ್ಪಂದನಾ"


ಸ್ಪಂದನಾ ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಅವರ ಪುತ್ರಿ. ಸ್ಯಾಂಡಲ್ ವುಡ್ ನ ಖ್ಯಾತ ನಟ ವಿಜಯ್ ರಾಘವೇಂದ್ರ ಅವರನ್ನು ಪ್ರೀತಿಸಿ 2007ರಲ್ಲಿ ಮದುವೆಯಾಗಿದ್ದರು. ಸ್ಪಂದನಾ ಹುಟ್ಟಿದ್ದು ಬೆಂಗಳೂರಿನಲ್ಲಿ. ತನ್ನ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಸ್ಟೆಲ್ಲಾ ಮಾರಿಸ್ ಹೈಸ್ಕೂಲ್‌’ನಲ್ಲಿ ಪೂರ್ಣಗೊಳಿಸಿದರೆ, ಕೇರಳದ MES ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದ್ದರು.


ಸ್ಪಂದನಾ ವಿಜಯ್ ರಾಘವೇಂದ್ರ ಅವರು ಕನ್ನಡ ಅಪೂರ್ವ ಮತ್ತು ಕಿಸ್ಮತ್ ಚಿತ್ರದಲ್ಲಿ ನಟಿಸಿದ್ದಾರೆ. 2016 ರಲ್ಲಿ ವಿ. ರವಿಚಂದ್ರನ್ ನಿರ್ದೇಶನದ ಕನ್ನಡ ಚಲನಚಿತ್ರ "ಅಪೂರ್ವ" ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್’ಗೆ ಪದಾರ್ಪಣೆ ಮಾಡಿದ್ದರು.


ಇದನ್ನೂ ಓದಿ: ಹೀಗೆ ಸಾಗಿತ್ತು ವಿಜಯ ರಾಘವೇಂದ್ರ - ಸ್ಪಂದನಾ ಬಾಳ ನೌಕೆ ! ಕ್ರೂರ ವಿಧಿ ಹೀಗಾಡಬಾರದಿತ್ತು 


ಸ್ಪಂದನಾ ಅವರು ಇಂದು (7 ಆಗಸ್ಟ್ 2023) ಬ್ಯಾಂಕಾಕ್‌’ನ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದಾಗಿ ನಿಧನರಾಗಿದ್ದಾರೆ. 16 ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಇರುವಾಗಲೇ ಈ ಆಘಾತಕಾರಿ ಘಟನೆ ಸಂಭವಿಸಿದೆ. ಸ್ಪಂದನಾ ಪತಿ ವಿಜಯ್ ರಾಘವೇಂದ್ರ ಮತ್ತು ಮಗ ಶೌರ್ಯ ಅವರನ್ನು ಅಗಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ