Leo Movie Updates: ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ  ವಿಜಯ್ ಅಭಿನಯದ ಲಿಯೋ ಸಿನಿಮಾವನ್ನು ಲಲಿತ್ ಕುಮಾರ್ ನಿರ್ಮಿಸಿದ್ದಾರೆ. ವಿಜಯ್ ಜೊತೆಗೆ ತ್ರಿಶಾ, ಅರ್ಜುನ್, ಗೌತಮ್ ವಾಸುದೇ ಮೆನನ್, ಮೈಷ್ಕಿನ್, ಸಂಜಯ್ ದತ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಮುಗಿದಿದ್ದು, ಅಂತಿಮ ಹಂತದ ಕೆಲಸ ನಡೆಯುತ್ತಿದೆ. 


COMMERCIAL BREAK
SCROLL TO CONTINUE READING

ಬಿಡುಗಡೆಗೆ 22 ದಿನಗಳ ಮೊದಲು ಸೆನ್ಸಾರ್‌ಗೆ ಅರ್ಜಿ ಸಲ್ಲಿಸಿದ ವಿಜಯ್ ಅಭಿನಯದ ಲಿಯೋ ಚಿತ್ರ ಯಾವ ಸರ್ಟಿಫಿಕೇಟ್ ಪಡೆಯಲಿದೆ ಎಂದು ವಿಜಯ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 


ಇದನ್ನೂ ಓದಿ-ಅದೆಷ್ಟು ಕೋಟಿ.. ಬೆಚ್ಚಿ ಬೀಳಿಸಿದ ನಟಿ ನಯನತಾರಾ ಆಸ್ತಿ ಮೌಲ್ಯ..! ಎಷ್ಟು ಗೊತ್ತಾ?


ಇನ್ನು ಲಿಯೋ ಸಿನಿಮಾ ಗುರುವಾರ ಅಕ್ಟೋಬರ್ 19 ರಂದು ತೆರೆಗೆ ಬರಲಿದೆ. ಕಳೆದ ತಿಂಗಳು ಟ್ರೇಲರ್‌ಗಿಂತ ಮೊದಲು ಚಿತ್ರದ ಟೀಸರ್ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ ಚಿತ್ರತಂಡ ಟೀಸರ್ ಕಟ್ ಮಾಡಿ ನೇರವಾಗಿ ಟ್ರೇಲರ್ ಗೆ ಹೋಗಿದೆ. ಅಲ್ಲದೇ ಟ್ರೈಲರ್‌ ರಿಲೀಸ್‌ ಆಗಿ ಭರ್ಜರಿ ಸೌಂಡ್‌ ಮಾಡುತ್ತಿದೆ. 


ಇದೇ ವೇಳೆ ಲಿಯೋ ಚಿತ್ರದ ಸೆನ್ಸಾರ್ ಕುರಿತ ಮಾಹಿತಿ ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿದೆ. ಕೆಟ್ಟ ಪದಗಳಿರುವ ಹಲವು ದೃಶ್ಯಗಳನ್ನು ಮ್ಯೂಟ್ ಮಾಡಿದ್ದಾರೆ. ಕೆಲವು ಕೆಟ್ಟ ಪದಗಳನ್ನು ಕತ್ತರಿಸಲಾಗಿದೆ. ಇದುವರೆಗೆ ವಿಜಯ್ ನಟಿಸಿದ ಸಿನಿಮಾದಲ್ಲಿ ಇರುವುದಕ್ಕಿಂತ ಹೆಚ್ಚು ಕೆಟ್ಟ ಪದಗಳನ್ನು ಚಿತ್ರದಲ್ಲಿ ಬಳಸಲಾಗಿದೆ ಎನ್ನುವ ವರದಿಯನ್ನೂ ಮಾಡಲಾಗಿದೆ. 


ಇದನ್ನೂ ಓದಿ-"ಆಸ್ಪತ್ರೆಯಲ್ಲಿ ನಾನು ಬೆತ್ತಲಾಗಿದ್ದಾಗಲೂ ವೈದ್ಯರು, ನರ್ಸ್ ವಿಡಿಯೋ ತೆಗೆದಿದ್ರು": ನಟ ಸಿದ್ದಾರ್ಥ್ ಹೇಳಿಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.