ಅದೆಷ್ಟು ಕೋಟಿ.. ಬೆಚ್ಚಿ ಬೀಳಿಸಿದ ನಟಿ ನಯನತಾರಾ ಆಸ್ತಿ ಮೌಲ್ಯ..! ಎಷ್ಟು ಗೊತ್ತಾ?

 Nayanatara Total Property: ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನತಾರಾ 20 ವರ್ಷಗಳಿಂದ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ ಇವರ ಆಸ್ತಿ ಮೌಲ್ಯ ಎಷ್ಟೀರಬಹುದು ಎಂಬುದು ನಿಮಗೆ ಗೊತ್ತೇ? 

Written by - Savita M B | Last Updated : Oct 7, 2023, 07:28 AM IST
  • ಅಯ್ಯಾ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಯನತಾರಾ
  • ಅಲ್ಲದೇ ಇತ್ತೀಚೆಗೆ ಜವಾನ್ ಚಿತ್ರದ ಮೂಲಕ ಬಾಲಿವುಡ್‌ಗೂ ಪದಾರ್ಪಣೆ ಮಾಡಿದರು.
  • ಸದ್ಯ ಇವರ ಆಸ್ತಿ ಮೌಲ್ಯದ ಕುರಿತು ಮಾಹಿತಿಯೊಂದು ಹೊರಬಿದ್ದಿದೆ
ಅದೆಷ್ಟು ಕೋಟಿ.. ಬೆಚ್ಚಿ ಬೀಳಿಸಿದ ನಟಿ ನಯನತಾರಾ ಆಸ್ತಿ ಮೌಲ್ಯ..! ಎಷ್ಟು ಗೊತ್ತಾ? title=

South Actress Nayanatara: ಅಯ್ಯಾ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಯನತಾರಾ ತಮಿಳು, ತೆಲುಗು, ಮಲಯಾಳಂ ಸೇರಿದಂತೆ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಜವಾನ್ ಚಿತ್ರದ ಮೂಲಕ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದರು. 

ಇನ್ನು ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಕೂಡ ಒಬ್ಬರು. ಅವರ ಅಭಿನಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ರಜನಿ, ವಿಜಯ್, ಅಜಿತ್, ಸೂರ್ಯ, ವಿಕ್ರಮ್, ಧನುಷ್, ಜಯಂ ರವಿ ಶಿವಕಾರ್ತಿಕೇಯನ್ ಮುಂತಾದ ತಮಿಳು ಚಿತ್ರರಂಗದ ಪ್ರಮುಖ ನಟರೊಂದಿಗೆ ನಯನತಾರಾ ನಟಿಸಿದ್ದಾರೆ.

ಇದನ್ನೂ ಓದಿ-ಕಾಂತಾರ ಚಿತ್ರಕ್ಕೆ 1 ವರ್ಷ...! ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡಲು ಸಜ್ಜಾದ ಹೊಂಬಾಳೆ

ಅದೇ ರೀತಿ ನಯನತಾರಾ ಬೇರೆ ಭಾಷೆಯ ಟಾಪ್ ಸ್ಟಾರ್ ಗಳ ಜೊತೆ ತೆರೆಹಂಚಿಕೊಂಡಿದ್ದಾರೆ. ಈ ನಡುವೆ ನಟಿ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾದರು. ದಂಪತಿಗೆ ವಯಾ ಮತ್ತು ಉಲಗ್ ಎಂಬ 2 ಅವಳಿ ಮಕ್ಕಳಿದ್ದಾರೆ. ಇತ್ತೀಚೆಗಷ್ಟೇ ತನ್ನ ಇನ್‌ಸ್ಟಾಗ್ರಾಮ್ ಪೇಜ್‌ಗೆ ಸೇರ್ಪಡೆಗೊಂಡಿರುವ ನಯನತಾರಾ, ಪತಿ ಮತ್ತು ಮಕ್ಕಳೊಂದಿಗೆ ಇರುವ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. 

ಸದ್ಯ ನಯನತಾರಾ ದೇಶದ ಶ್ರೀಮಂತ ನಟಿಯರಲ್ಲಿ ಒಬ್ಬರು ಎಂದು ಹೇಳಲಾಗುತ್ತಿದೆ. ಹಾಗಾದರೆ ಇವರ ಆಸ್ತಿಯ ಮೌಲ್ಯ ಎಷ್ಟೀರಬಹುದು ಅಂತೀರಾ ಇಲ್ಲಿದೆ ಉತ್ತರ. 

ನಯನತಾರಾ ನಿವ್ವಳ ಮೌಲ್ಯ ಸುಮಾರು 200 ಕೋಟಿ ಮತ್ತು ಅವರು ರೂ. 100 ಕೋಟಿಯ ಮನೆಯನ್ನು ಹೊಂದಿದ್ದಾರೆ. ಪ್ರಸ್ತುತ, ನಯನತಾರಾ ತನ್ನ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಚೆನ್ನೈನಲ್ಲಿ 100 ಕೋಟಿ ರೂಪಾಯಿ ಮೌಲ್ಯದ 4 BHK ಮನೆಯಲ್ಲಿ ವಾಸಿಸುತ್ತಿದ್ದಾರೆ. 

ಮನೆಯಲ್ಲಿ ಖಾಸಗಿ ಚಿತ್ರಮಂದಿರ, ಸ್ವೀಮ್ಮಿಂಗ್‌ ಫೂಲ್ ಮತ್ತು ಜಿಮ್‌ನಂತಹ ವಿಶೇಷ ಸೌಕರ್ಯಗಳಿವೆ. ಅಲ್ಲದೆ ನಯನತಾರಾ ಅವರು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ತಲಾ ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ-ವಯಸ್ಸಲ್ಲಿ ರಾಘವ್‌ ಚಡ್ಡಾ ಅವರಿಗಿಂತ ದೊಡ್ಡವರಾ ಪರಿಣಿತಿ ಚೋಪ್ರಾ?

ನಯನತಾರಾ ಕೂಡ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅವರು 1.76 ಕೋಟಿ ರೂಪಾಯಿ ಮೌಲ್ಯದ BMW 7 ಸಿರೀಸ್, 1 ಕೋಟಿ ಮೌಲ್ಯದ Mercedes GLS350D ಮತ್ತು BMW 5 ಸರಣಿಯಂತಹ ಹಲವಾರು ಉನ್ನತ ಮಟ್ಟದ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ‌

ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ ಮತ್ತು ಮಾಧುರಿ ದೀಕ್ಷಿತ್ ಅವರಂತಹ ಬಾಲಿವುಡ್ ನಟಿಯರಲ್ಲದೆ, ನಯನತಾರಾ ಅವರ ಬಳಿ 50 ಕೋಟಿ ಮೌಲ್ಯದ ಖಾಸಗಿ ಜೆಟ್ ಕೂಡ ಇದೆ. ವಿಶೇಷವೆಂದರೆ, ನಯನತಾರಾ ತನ್ನದೇ ಆದ ವಿಮಾನವನ್ನು ಹೊಂದಿರುವ ದಕ್ಷಿಣ ಭಾರತದ ಏಕೈಕ ನಟಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News