Sanjay Dutt : ನಿರ್ದೇಶಕ ಎಸ್. ಎಸ್. ರಾಜಮೌಳಿ-ಪ್ರಭಾಸ್ ಕಾಂಬಿನೇಷನ್‌ನ 'ಬಾಹುಬಲಿ' ಚಿತ್ರದ ಸೆನ್ಸೇಷನಲ್ ಯಶಸ್ಸಿನ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎರಡು ಭಾಗಗಳಲ್ಲಿ ತಯಾರಾದ ಈ ಸಿನಿಮಾ ಜಗತ್ತಿನಾದ್ಯಂತ ಸಂಚಲನ ಮೂಡಿಸಿತ್ತು. ದಗ್ಗುಪತಿ ರಾಣಾ ಖಳನಟನಾಗಿ ನಟಿಸಿದರೆ, ಶಿವಗಾಮಿ ದೇವಿಯಾಗಿ ಹಿರಿಯ ನಟಿ ರಮ್ಯಾಕೃಷ್ಣ ಮಿಂಚಿದರು. ಈ ಚಿತ್ರದ ಮೂಲಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದರು.


COMMERCIAL BREAK
SCROLL TO CONTINUE READING

ಪ್ರಭಾಸ್ ಮಾತ್ರವಲ್ಲ ಸಿನಿಮಾದಲ್ಲಿ ನಟಿಸಿದ ಎಲ್ಲರಿಗೂ ಒಳ್ಳೆಯ ಮನ್ನಣೆ ಸಿಕ್ಕಿತು. ಅದರಲ್ಲೂ ಪ್ರಭಾಸ್ ಮತ್ತು ದಗ್ಗುಬಾಟಿ ರಾಣಾ ನಂತರ ಕಟ್ಟಪ್ಪನ ಪಾತ್ರ ಹೈಲೈಟ್ ಆಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕಟ್ಟಪ್ಪ ಪಾತ್ರದಲ್ಲಿ ತಮಿಳು ನಟ ಸತ್ಯರಾಜ್ ಅಭಿನಯಿಸಿದ್ದರು. ಆದರೆ ವಾಸ್ತವವಾಗಿ, 'ಬಾಹುಬಲಿ' ಚಿತ್ರದಲ್ಲಿ ಕಟ್ಟಪ್ಪ ಪಾತ್ರಕ್ಕೆ ಆರಂಭದಲ್ಲಿ ಬಾಲಿವುಡ್ ನಾಯಕನನ್ನು ಪರಿಗಣಿಸಲಾಗಿತ್ತಂತೆ ಈ ಕುರಿತು ಸ್ವತಃ ರಾಜಮೌಳಿ ಅವರ ತಂದೆ, ಲೇಖಕ ವಿಜಯೇಂದ್ರ ಪ್ರಸಾದ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.


ಇದನ್ನೂ ಓದಿ:ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ನಿಜವಾದ ಹೆಸರೇನು ಗೊತ್ತಾ?


‘ಬಾಹುಬಲಿ’ಯಲ್ಲಿ ಕಟ್ಟಪ್ಪನ ಪಾತ್ರಕ್ಕೆ ಭಾರೀ ಮನ್ನಣೆ ಸಿಕ್ಕಿತ್ತು. ಅದರಲ್ಲೂ ಕಟ್ಟಪ್ಪ ಬಾಹುಬಲಿಯನ್ನು ಕೊಂದದ್ದು ಯಾಕೆ? ಎಂಬ ಪ್ರಶ್ನೆಯೊಂದಿಗೆ ರಾಜಮೌಳಿ 'ಬಾಹುಬಲಿ 2' ಬಗ್ಗೆ ಹೆಚ್ಚು ಕ್ರೇಜ್ ಕ್ರಿಯೆಟ್‌ ಮಾಡಿದ್ದರು. ಕಟ್ಟಪ್ಪ ಪಾತ್ರಕ್ಕೆ ಮೊದಲು ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಅವರನ್ನು ಪರಿಗಣಿಸಲಾಗಿತ್ತಂತೆ. ಲೇಖಕ ವಿಜಯೇಂದ್ರ ಪ್ರಸಾದ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಇದೇ ವಿಷಯವನ್ನು ಬಹಿರಂಗಪಡಿಸಿದ್ದಾರೆ.


ಬಾಹುಬಲಿಯನ್ನು ಪ್ರಭಾಸ್‌ಗಾಗಿ ಬರೆಯಲಾಯಿತು. ಆದರೆ ನಾವು ಮೊದಲು ಸಂಜಯ್ ದತ್ ಅವರನ್ನು ಕಟ್ಟಪ್ಪ ಪಾತ್ರಕ್ಕೆ ಹಾಕಬೇಕೆಂದು ಯೋಚಿಸಿದ್ದೇವೆ. ಆದರೆ ಅವರು ಲಭ್ಯವಿಲ್ಲದ ಕಾರಣ ಬೇರೆಯವರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದೇವು. ನಂತರ ತಮಿಳು ನಟ ಸತ್ಯರಾಜ್ ಅವರನ್ನು ಕಟ್ಟಪ್ಪ ಪಾತ್ರಕ್ಕೆ ಆಯ್ಕೆ ಮಾಡಲಾಯಿತು ಅಂತ ವಿಜಯೇಂದ್ರ ಪಸಾದ್‌ ಅವರು ಹೇಳಿದ್ದಾರೆ.. ಕಟ್ಟಪ್ಪನ ಪಾತ್ರ ದೇಶಾದ್ಯಂತ ಸತ್ಯರಾಜ್‌ಗೆ ಮನ್ನಣೆ ತಂದುಕೊಟ್ಟಿತ್ತು.


ಇದನ್ನೂ ಓದಿ:ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದ ದರ್ಶನ್!


‘ಬಾಹುಬಲಿ’ಯಲ್ಲಿ ಕಟ್ಟಪ್ಪ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದರೆ ದಕ್ಷಿಣದಲ್ಲಿ ಭಾರೀ ಜನಮನ್ನಣೆ ಗಳಿಸುತ್ತಿದ್ದರು. ಆದರೆ ಅಂತಹ ಪವರ್ ಫುಲ್ ಪಾತ್ರವನ್ನು ಸಂಜಯ್ ದತ್ ಗೆ 'ಕೆಜಿಎಫ್' ಮೂಲಕ ನೀಡಲಾಯಿತು. ಯಶ್ ಅಭಿನಯದ 'ಕೆಜಿಎಫ್' ಚಿತ್ರದಲ್ಲಿ ಸಂಜಯ್ ದತ್ ಅವರ ಖಳನಾಯಕ ಅಧಿರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಜಯ್ ದತ್ 'ಕೆಜಿಎಫ್' ಸೆನ್ಸೇಷನಲ್ ಹಿಟ್ ಪಡೆದ ನಂತರ ದಕ್ಷಿಣದಲ್ಲಿ ಭಾರಿ ಕ್ರೇಜ್ ಪಡೆದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.