"ಪುರುಷೋತ್ತಮನ‌ ಪ್ರಸಂಗ" ಚಿತ್ರದ ಸುಂದರ ಯುಗಳಗೀತೆಗೆ ಅಭಿಮಾನಿಗಳು ಫಿದಾ!

Purushottamana Prasanga: ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ ರವಿಕುಮಾರ್ ನಿರ್ಮಿಸಿರುವ, ಖ್ಯಾತ ನಟ, ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡ ಚಿತ್ರ "ಪುರುಷೋತ್ತಮನ‌ ಪ್ರಸಂಗ". 

Written by - YASHODHA POOJARI | Last Updated : Feb 18, 2024, 02:41 PM IST
  • ಇತ್ತೀಚಿಗೆ ಈ ಚಿತ್ರದ "ಅಚ್ಚುಮೆಚ್ಚು ನಿನ್ನ ಕಂಡರೆ" ಎಂಬ ಸುಂದರ ಯುಗಳಗೀತೆ
  • ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿರುವ ಜನಪ್ರಿಯ ಸಾಹಿತಿ ಜಯಂತ ಕಾಯ್ಕಿಣಿ ಈ ಹಾಡನ್ನು ರಚಿಸಿದ್ದಾರೆ.
"ಪುರುಷೋತ್ತಮನ‌ ಪ್ರಸಂಗ" ಚಿತ್ರದ ಸುಂದರ ಯುಗಳಗೀತೆಗೆ ಅಭಿಮಾನಿಗಳು ಫಿದಾ! title=

ಇತ್ತೀಚಿಗೆ ಈ ಚಿತ್ರದ "ಅಚ್ಚುಮೆಚ್ಚು ನಿನ್ನ ಕಂಡರೆ" ಎಂಬ ಸುಂದರ ಯುಗಳಗೀತೆ A2 music ಮೂಲಕ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿರುವ ಜನಪ್ರಿಯ ಸಾಹಿತಿ ಜಯಂತ ಕಾಯ್ಕಿಣಿ ಈ ಹಾಡನ್ನು ರಚಿಸಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನೀಡಿ, ತಾವೇ ಹಾಡಿದ್ದಾರೆ. ಈ ಸುಂದರ ಗೀತೆಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆಯಾಗಲಿದ್ದು, ಚಿತ್ರ ಮಾರ್ಚ್ ಒಂದರಂದು ತೆರೆಗೆ ಬರಲಿದೆ.

ಇದನ್ನೂ ಓದಿ-‌Sunny Leone: ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಹಾಕಿದ ಸನ್ನಿ ಲಿಯೋನ್!? ಅಡ್ಮಿಟ್ ಕಾರ್ಡ್‌ ವೈರಲ್!!

ಉತ್ತಮ ಹಾಸ್ಯ ಕಥಾಹಂದರವನ್ನು ಒಳಗೊಂಡಿರುವ ಈ ಚಿತ್ರದ ನಾಯಕನಾಗಿ ಅಜಯ್ ಅಭಿನಯಿಸಿದ್ದಾರೆ. ರಿಷಿಕಾ ನಾಯ್ಕ್ ಮತ್ತು ದೀಪಿಕಾ "ಪುರುಷೋತ್ತಮನ ಪ್ರಸಂಗ" ಚಿತ್ರದ ನಾಯಕಿಯರು.  ದೇವದಾಸ್ ಕಾಪಿಕಾಡ್,  ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ,ಜ್ಯೋತಿಷ್ ಶೆಟ್ಟಿ ಹಾಗೂ ಇತರರು ತಾರಾಬಳಗದಲ್ಲಿದ್ದಾರೆ. 

ಇದನ್ನೂ ಓದಿ-ಅರ್ಧ ಡಜನ್‌ ನಟರ ಜೊತೆ ಅಫೇರ್ಸ್‌, ಒಂದು ಕಾಲದಲ್ಲಿ ಇಂಡಸ್ಟ್ರಿ ಆಳಿದ ಸ್ಟಾರ್ ಹೀರೋಯಿನ್.. ಯಾರು ಗೊತ್ತೇ!

ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರೆ ಚಿತ್ರಕ್ಕೆ ಕಥೆ,  ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಕಾಪಿಕಾಡ್ ಈ ಚಿತ್ರದ ಸಹ ನಿರ್ದೇಶಕರು. ವಿಷ್ಣು ಅವರ ಛಾಯಾಗ್ರಹಣವಿರುವ "ಪುರುಷೋತ್ತಮನ ಪ್ರಸಂಗ" ಚಿತ್ರಕ್ಕೆ ನಕುಲ್ ಅಭಯ್ ಸಂಗೀತ ನೀಡಿದ್ದಾರೆ. ಅರ್ಜುನ್ ಕಜೆ, ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ, ಅನೂಪ್ ಸಾಗರ್ ಅವರು ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಂದೀಪ್ ಶೆಟ್ಟಿ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಸಹ ನಿರ್ಮಾಪಕರು ಅಬೂಬಕರ್ ಪುತ್ತಾಕ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News