Leo and Dhruva Natchathiram : ʼಧೃವ ನಕ್ಷತ್ರʼ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಚಿತ್ರ. ಈ ಸಿನಿಮಾದಲ್ಲಿ ಚಿಯಾನ್‌ ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹಳ ಹಿಂದೆಯೇ ಘೋಷಣೆಯಾಗಿದ್ದ ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಚಿತ್ರದ ಬಿಡುಗಡೆಯ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಆದರೆ ಈಗ ಬರುತ್ತಿರುವ ಸುದ್ದಿ ಪ್ರಕಾರ ವಿಜಯ್ ನಟನೆಯ ʼಲಿಯೋʼ ರಿಲೀಸ್‌ ದಿನವೇ ಧೃವ ನಕ್ಷತ್ರ ಬಿಡುಗಡೆಯಾಗಲಿದೆ ಎನ್ನಲಾಗಿದ್ದು, ಕುತೂಹಲ ಕೆರಳಿಸಿದೆ. 


COMMERCIAL BREAK
SCROLL TO CONTINUE READING

ಹೌದು.. ಅಕ್ಟೋಬರ್ 19 ರಂದು ʼಲಿಯೋʼ ಸಿನಿಮಾ ಬಿಡುಗಡೆಯಾಗಲಿದೆ. ಅಲ್ಲದೆ, ಈ ದಿನದಂದೇ ವಿಕ್ರಮ್‌ ನಟನೆಯ ಬಹುನಿರೀಕ್ಷಿತ ಸಿನಿಮಾ, ʼಧೃವ ನಕ್ಷತ್ರ ʼವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಪ್ಲಾನ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.


ಇದನ್ನೂ ಓದಿ: ಸಾಲದ ವಸೂಲಿಗಾಗಿ ನಟ ಸನ್ನಿ ಡಿಯೋಲ್ ಮನೆ ಹರಾಜಿಗಿಟ್ಟ ಬ್ಯಾಂಕ್..!


ವಿಕ್ರಮ್, ಐಶ್ವರ್ಯ ರಾಜೇಶ್, ರಿತು ವರ್ಮಾ, ವಿನಾಯಕನ್, ಸಿಮ್ರಾನ್, ಪಾರ್ತಿಬನ್, ದಿವ್ಯದರ್ಶಿನಿ (ಡಿಡಿ), ಅರ್ಜುನ್ ದಾಸ್, ವಂಶಿ ಕೃಷ್ಣ, ರಾಧಿಕಾ ಶರತ್‌ಕುಮಾರ್, ಮಾಯಾ ಎಸ್. ಕೃಷ್ಣನ್, ಅಭಿರಾಮಿ ಸೇರಿದಂತೆ ಬಹು ದೊಡ್ಡ ತಾರಾಬಳಗ ʼಧೃವ ನಕ್ಷತ್ರʼ ಸಿನಿಮಾದಲ್ಲಿದೆ. ಮನೋಜ್ ಪರಮಹಂಸ, ಜೋಮೋನ್ ಟಿ ಜಾನ್, ಸಂತಾನ ಕೃಷ್ಣನ್ ರವಿಚಂದ್ರನ್ ಅವರ ಛಾಯಾಗ್ರಹಣ ಮತ್ತು ಪ್ರವೀಣ್ ಆಂಟೋನಿ ಸಂಕಲನ ಈ ಚಿತ್ರಕ್ಕಿದೆ. 2017ರಲ್ಲಿ ಸೆಟ್ಟೇರಿದ ಚಿತ್ರ ಇನ್ನೂ ಬಿಡುಗಡೆ ಕಂಡಿಲ್ಲ.


ಈ ಮಧ್ಯ ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಹೆರಾಲ್ಡ್ ದಾಸ್ ಎನ್ನುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಈ ಕುರಿತು ಪೊಸ್ಟರ್‌ ಸಹ ಬಿಡುಗಡೆಯಾಯಿತು. ಅಲ್ಲದೆ, ಸಂಜಯ್ ದತ್ ಪರಿಚಯದ ವಿಡಿಯೋ ಕೂಡ ವೈರಲ್ ಆಗಿತ್ತು. 


ಇದನ್ನೂ ಓದಿ: ಧರ್ಮ ಕೈಯಲ್ಲಿ ತಲ್ವಾರ್! ನಾಯಕ್ ನಹೀ ಖಳ್ ನಾಯಕ್ ಅಂದ್ರು ಕ್ಯಾಟ್ಬರೀಸ್ :


ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಮತ್ತು ದಿ ರೂಟ್ ಬ್ಯಾನರ್ ಅಡಿಯಲ್ಲಿ ಲಲಿತ್ ಕುಮಾರ್ ಮತ್ತು ಜಗದೀಶ್ ಪಳನಿಸಾಮಿ ಅವರು ಲಿಯೋವನ್ನು ನಿರ್ಮಿಸಿದ್ದಾರೆ. ತ್ರಿಶಾ, ಸಂಜಯ್ ದತ್, ದತ್, ಅರ್ಜುನ್ ಸರ್ಜಾ, ಗೌತಮ್ ಮೆನನ್, ಮೈಶ್ಕಿನ್, ಮ್ಯಾಥ್ಯೂ ಥಾಮಸ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್, ಸ್ಯಾಂಡಿ, ಜನನಿ, ಅಭಿರಾಮಿ ವೆಂಕಟಾಚಲಂ, ಬಾಬು ಆಂಟೋನಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.