ಕನ್ನಡದ ‘ವಿಕ್ರಾಂತ್ ರೋಣ’ ಜಗತ್ತಿನಾದ್ಯಂತ ಅಬ್ಬರಿಸಿ ಬೊಬ್ಬಿರಿಯಲು ಸಜ್ಜಾಗಿದೆ. ಇನ್ನೇನು ಜುಲೈ 28 ಅಂದ್ರೆ ಗುರುವಾರ ‘ವಿಕ್ರಾಂತ್ ರೋಣ’ ಚಿತ್ರ ಜಗತ್ತಿನಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ ಎಂಟ್ರಿ ಕೊಡಲಿದೆ. ಆದರೆ ಈ ಸಂಭ್ರಮಕ್ಕೂ ಮೊದಲು ಪ್ರೀ ರಿಲೀಸ್‌ ಇವೆಂಟ್‌ ಆಯೋಜಿಸಿದೆ ‘ವಿಕ್ರಾಂತ್ ರೋಣ’ ತಂಡ. ಅಂದಹಾಗೆ ಈ ಕಾರ್ಯಕ್ರಮಕ್ಕೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರೇ ಸ್ಪೆಷಲ್‌ ಗೆಸ್ಟ್ ಆಗಿ ಎಂಟ್ರಿ ಕೊಡುತ್ತಿದ್ದು, ನಿರೀಕ್ಷೆಗಳ ಶಿಕರ ಮುಗಿಲು ಮುಟ್ಟಿದೆ. ಕೋಟಿ ಕೋಟಿ ಅಭಿಮಾನಿಗಳು ಈ ಕಾರ್ಯಕ್ರಮಕ್ಕಾಗಿ ಕಾದು ಕುಳಿತಿದ್ದಾರೆ.


COMMERCIAL BREAK
SCROLL TO CONTINUE READING

ವಿಕ್ರಾಂತ್ ರೋಣ’ ಪದ ಕಿವಿಗೆ ಬಿದ್ದ ತಕ್ಷಣ ಸ್ಯಾಂಡಲ್‌ವುಡ್‌ ಸಿನಿ ಪ್ರಿಯರು ಎದೆಯುಬ್ಬಿಸಿ, ಇದು ನಮ್ಮ ಸಿನಿಮಾ ಅಂತಾರೆ. ಯಾಕಂದ್ರೆ ಕಿಚ್ಚ ಸುದೀಪ್‌ ಅಭಿನಯದ ‘ವಿಕ್ರಾಂತ್ ರೋಣ’ ಸೃಷ್ಟಿಸಿರುವ ಹವಾನೆ ಅಂತಹದ್ದು. ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್ ಸಿನಿಮಾ ಒಂದು ಹಾಲಿವುಡ್‌ ಬಾಗಿಲನ್ನೇ ಬಡಿದು, ಹೊಸ ಇತಿಹಾಸ ಸೃಷ್ಟಿಸುತ್ತಿದೆ.


ಇದನ್ನೂ ಓದಿ : ಅಶ್ಲೀಲ ಫೋಟೋಶೂಟ್‌ ತಂದಿತಾ ಸಂಕಷ್ಟ? ರಣವೀರ್‌ ಸಿಂಗ್‌ ವಿರುದ್ಧ ದೂರು!


ಚಂದನವನ ಹವಾ..!


ಸಾಲು ಸಾಲು ಕನ್ನಡ ಸಿನಿಮಾಗಳು ಜಗತ್ತಿನಾದ್ಯಂತ ಹವಾ ಎಬ್ಬಿಸುತ್ತಿವೆ. ಈ ಸಂಭ್ರಮ ಕನ್ನಡಿಗರ ಖುಷಿಗೆ ಕಾರಣವಾಗುತ್ತಿದೆ. ಇದರ ಜೊತೆಗೆ ಕನ್ನಡಿಗರ ಮತ್ತೊಂದು ಸಿನಿಮಾ ಹಾಲಿವುಡ್‌ ಅಂಗಳವನ್ನು ಶೇಕ್‌ ಮಾಡಲು ಸಜ್ಜಾಗಿ ನಿಂತಿದೆ. ಈಗಾಗಲೇ‌ ಕಿಚ್ಚ ಸುದೀಪ್ ಫ್ಯಾನ್ಸ್ ‘ವಿಕ್ರಾಂತ್ ರೋಣ’ ರಿಲೀಸ್‌ಗೆ ಸಂಭ್ರಮದ‌ ತಯಾರಿ ನಡೆಸಿದ್ದಾರೆ. ನಾಳೆಯಿಂದಲೇ ‘ವಿಕ್ರಾಂತ್ ರೋಣ’ನ ಹಬ್ಬ ಜಗಮಗಿಸಲಿದೆ.


ಹೀಗೆ ಎಲ್ಲೆಲ್ಲೂ ‘ವಿಕ್ರಾಂತ್ ರೋಣ’ ಸಿನಿಮಾ ಜಪ ಶುರುವಾಗಿದೆ. ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದ್ದು, ಜುಲೈ 28 ಯಾವಾಗ ಬರುತ್ತೋ ಅಂತಾ ನಟ ಕಿಚ್ಚ ಸುದೀಪ್‌ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾದು ಕುಳಿತಿದ್ದಾರೆ. ಹಾಗೇ ಸ್ಯಾಂಡಲ್‌ವುಡ್‌ ಪಾಲಿಗೆ ಈ ದಿನ ಎಂದೆಂದೂ ಮರೆಯಲಾಗದ ದಿನವಾಗಿ ಉಳಿಯೋದು ಪಕ್ಕಾ.


ಇದನ್ನೂ ಓದಿ : ಎಲ್ಲೆಲ್ಲೂ ʻವಿಕ್ರಾಂತ್‌ ರೋಣʼ ಹವಾ.. ಪ್ರತಿ ಜಿಲ್ಲೆಗಳಲ್ಲೂ ರಾರಾಜಿಸುತ್ತಿವೆ ಕಿಚ್ಚನ ಕಟೌಟ್‌ಗಳು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.