Vikrant Rona: ಕನ್ನಡದಲ್ಲಿ ಇತ್ತೀಚೆಗೆ ಬರುತ್ತಿರುವ ಸಿನಿಮಾಗಳು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯವಂತಿವೆ. ಕೆಜಿಎಫ್‌ ಚಾಪ್ಟರ್‌ 2 ನಲ್ಲಿ ರಾಕಿ ಭಾಯ್‌ ಅಬ್ಬರಕ್ಕೆ ಬೆಚ್ಚಿಬಿದ್ದ ಜನರಿಗೆ 777 ಚಾರ್ಲಿ ಎಮೋಷನಲ್‌ ಆಗಿ ಹಿಡಿದಿಟ್ಟುಕೊಂಡಿತು. ಇದೀಗ ಕನ್ನಡದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್‌ ರೋಣ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಈ ಸಿನಿಮಾ ಸ್ಯಾಂಡಲ್‌ವುಡ್‌ನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ಯೊದು ಪಕ್ಕಾ. ಇನ್ನೇನೂ ಕೆಲವೇ ತಿಂಗಳಲ್ಲಿ ಸಿನಿಮಾ ಕೂಡ ರಿಲೀಸ್‌ ಆಗಲಿದೆ.     


COMMERCIAL BREAK
SCROLL TO CONTINUE READING

ಇದನ್ನೂ ಓದಿ: Meena Husband Death: ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ


ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್​ ರೋಣ ಟ್ರೇಲರ್ ನೋಡಿದ ಜನರಿಗೆ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಆಗಿದ್ದೇನೋ ಸತ್ಯ. ಆದರೆ ಅದರ ಜೊತೆಗೆ ಸಿನಿಮಾದಲ್ಲಿರುವ ಟ್ವಿಸ್ಟ್‌ಗಳ ಬಗ್ಗೆ ತಲೆಗೆ ಹುಳ ಬಿಟ್ಟಿದೆ. 3ಡಿ ಅಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್‌ ಆಗಲಿದೆ. 


ಇಡೀ ಜಗತ್ತೇ ಇಂದು ಕನ್ನಡ ಸಿನಿರಂಗದತ್ತ ತಿರುಗಿ ನೋಡುವ ಕಾಲ ಬಂದಿದೆ. ಭುರ್ಜ್ ಖಲೀಫಾದಿಂದ ಶುರುವಾದ ವಿಕ್ರಾಂತ್‌ ರೋಣನ ಹವಾ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಈ ಬೆನ್ನಲ್ಲೇ ಚಿತ್ರತಂಡ ಭರ್ಜರಿ ಪ್ರಮೋಷನ್‌ ಕೂಡ ಆರಂಭಿಸಿದೆ. ಕಿಚ್ಚ ಸುದೀಪ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್‌ ರೋಣ ಈಗಾಗಲೇ ರಿಲೀಸ್‌ ಆದ ಹಾಡು, ಟ್ರೈಲರ್‌ ಮೂಲಕ ಸಖತ್‌ ಸದ್ದು ಮಾಡುತ್ತಿದೆ. ಬಾಲಿವುಡ್‌, ಟಾಲಿವುಡ್‌ ಸೇರಿದಂತೆ ಭಾರತ ಸಿನಿರಂಗದ ಖ್ಯಾತ ನಾಮರು ವಿಕ್ರಾಂತ್‌ ರೋಣನಿಗೆ ಸಾಥ್‌ ನೀಡಿದ್ದಾರೆ. 


ಇದನ್ನೂ ಓದಿ: ಸಲ್ಮಾನ್ ಖಾನ್ ಚಿತ್ರದಿಂದ ತೆಲುಗಿನ DSP ಔಟ್, ರವಿ ಬಸ್ರೂರ್ ಇನ್..!


ಅನೂಪ್‌ ಭಂಡಾರಿ ನಿರ್ದೇಶನದ ಈ ಸಿನಿಮಾ ಮೂಲಕ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದಾರೆ. ರಕೇಲ್‌ ಡಿಕೋಸ್ಟ ಉರ್ಫ್‌ ಗಡಂಗ್‌ ರಕ್ಕಮ್ಮನಾಗಿ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದಾರೆ. ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಸುದೀಪ್‌ ಅವರೇ ಡಬ್‌ ಮಾಡಿದ್ದಾರೆ. ಇಷ್ಟೆಲ್ಲ ವಿಶೇಷತೆ ಹೊಂದಿರುವ ಈ ಸಿನಿಮಾ ಸದ್ಯ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 


ಇಡೀ ಭಾರತವೇ ಸಿನಿಮಾ ಬಿಡುಗಡೆಗೆ ಕಾದು ಕುಳಿತಿದ್ದು, ಜುಲೈ 28 ರಂದು ಬೆಳ್ಳಿತೆರೆ ಮೇಲೆ ವಿಕ್ರಾಂತ್‌ ರೋಣ ಅಬ್ಬರಿಸುವುದಂತೂ ಪಕ್ಕಾ ಆಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.