Kiccha sudeep: ತವರು ಜಿಲ್ಲೆಯಲ್ಲಿ ಗ್ರಾಮವೊಂದನ್ನು ದತ್ತು ಪಡೆದ 'ಕಿಚ್ಚ' ಸುದೀಪ್‌..!

ರಾಜ್ಯದ ವಿವಿಧೆಡೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ. ಇದೀಗ ತಮ್ಮ ತವರೂರು ಶಿವಮೊಗ್ಗದ ಒಂದು ಹಳ್ಳಿಯನ್ನೇ ಸೊಸೈಟಿ ಮೂಲಕ ಸುದೀಪ್‌ ದತ್ತು ಪಡೆದುಕೊಂಡಿದ್ದಾರೆ.

Last Updated : Feb 20, 2021, 01:22 PM IST
  • ನಟ 'ಕಿಚ್ಚ' ಸುದೀಪ್ ಅವರು ಸಾಮಾಜಿಕ ಸೇವೆ ಮಾಡುವುದರಲ್ಲಿ ಒಂದು ಹೆಜ್ಜೆ ಮುಂದೆ ಇರತ್ತಾರೆ.
  • ತಮ್ಮದೇ ಚಾರಿಟೇಬಲ್ ಸೊಸೈಟಿ ಮೂಲಕ ಅನೇಕ ಕೆಲಸಗಳನ್ನು ಈಗಾಗಲೇ ಮಾಡಿಕೊಂಡು ಬರುತ್ತಿದ್ದಾರೆ. ರಾಜ್ಯದ ವಿವಿಧೆಡೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ.
  • ರಾಜ್ಯದ ವಿವಿಧೆಡೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ. ಇದೀಗ ತಮ್ಮ ತವರೂರು ಶಿವಮೊಗ್ಗದ ಒಂದು ಹಳ್ಳಿಯನ್ನೇ ಸೊಸೈಟಿ ಮೂಲಕ ಸುದೀಪ್‌ ದತ್ತು ಪಡೆದುಕೊಂಡಿದ್ದಾರೆ.
Kiccha sudeep: ತವರು ಜಿಲ್ಲೆಯಲ್ಲಿ ಗ್ರಾಮವೊಂದನ್ನು ದತ್ತು ಪಡೆದ 'ಕಿಚ್ಚ' ಸುದೀಪ್‌..! title=

ಬೆಂಗಳೂರು: ನಟ 'ಕಿಚ್ಚ' ಸುದೀಪ್ ಅವರು ಸಾಮಾಜಿಕ ಸೇವೆ ಮಾಡುವುದರಲ್ಲಿ ಒಂದು ಹೆಜ್ಜೆ ಮುಂದೆ ಇರತ್ತಾರೆ. ತಮ್ಮದೇ ಚಾರಿಟೇಬಲ್ ಸೊಸೈಟಿ ಮೂಲಕ ಅನೇಕ ಕೆಲಸಗಳನ್ನು ಈಗಾಗಲೇ ಮಾಡಿಕೊಂಡು ಬರುತ್ತಿದ್ದಾರೆ. ರಾಜ್ಯದ ವಿವಿಧೆಡೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ. ಇದೀಗ ತಮ್ಮ ತವರೂರು ಶಿವಮೊಗ್ಗದ ಒಂದು ಹಳ್ಳಿಯನ್ನೇ ಸೊಸೈಟಿ ಮೂಲಕ ಸುದೀಪ್‌ ದತ್ತು ಪಡೆದುಕೊಂಡಿದ್ದಾರೆ. ಹೌದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿಗೆ ಗ್ರಾಮವನ್ನು ಕಿಚ್ಚ ಸುದೀಪ್‌ ಚಾರಿಟೆಬಲ್‌ ಸೊಸೈಟಿಯು ದತ್ತು ತೆಗೆದುಕೊಂಡಿದೆ.

ಸಾಗರ ತಾಲ್ಲೂಕು ಕೇಂದ್ರದಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ, ಶರಾವತಿ ಹಿನ್ನೀರು ಪ್ರದೇಶದಲ್ಲಿರುವ ಆವಿಗೆ ಗ್ರಾಮದಲ್ಲಿ 27 ಮನೆಗಳಿದೆ. ಇಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೆ ಪ್ರಾಥಮಿಕ ಶಾಲೆ ಇದ್ದು, ಅಲ್ಲಿ 13 ಮಕ್ಕಳು ಕಲಿಯುತ್ತಿದ್ದಾರೆ. ಆರಂಭದಲ್ಲಿ ಈ ಊರಿನ ಶಾಲೆ(School)ಯನ್ನು ದತ್ತು ಪಡೆಯಬೇಕು ಎಂಬುದು ಸೊಸೈಟಿಯ ಉದ್ದೇಶವಾಗಿತ್ತು. ಆ ಹಿನ್ನೆಲೆಯಲ್ಲಿ ಸೊಸೈಟಿಯ ಸದಸ್ಯರು ಆವಿಗೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಆದರೆ, ಹೊರಜಗತ್ತಿನೊಂದಿಗೆ ಸಂಪರ್ಕವನ್ನೇ ಕಳೆದುಕೊಂಡ ಗ್ರಾಮಕ್ಕೆ ಮೂಲಸೌಕರ್ಯ ಕೊರತೆ ಇತ್ತು. ಹಾಗಾಗಿ, ಇಡೀ ಗ್ರಾಮವನ್ನೇ ದತ್ತು ಪಡೆಯುವ ನಿರ್ಧಾರ ಮಾಡಿದ್ದಾರೆ.

ಕಪಿಲ್ ದೇವ್ ಜೀವನಾಧಾರಿತ ಸಿನಿಮಾ '83' ಜೂನ್ 4ಕ್ಕೆ ಬೆಳ್ಳಿತೆರೆಗೆ

ದತ್ತು ಪಡೆಯುವ ಸಲುವಾಗಿ ಜಿಲ್ಲಾಡಳಿತ ಹಾಗೂ ಶಾಸಕರ ಅನುಮತಿ ಪಡೆದುಕೊಂಡಿರುವ ಸೊಸೈಟಿಯ ಸದಸ್ಯರು, ಆವಿಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿದ್ದಾರೆ. ಈ ಗ್ರಾಮ(Village)ವನ್ನು ಮಾದರಿ ಗ್ರಾಮವನ್ನಾಗಿ ರೂಪಿಸುವ ಪಣ ತೊಟ್ಟಿದ್ದಾರೆ. ಗ್ರಾಮದ ಅಭಿವೃದ್ಧಿಗೂ ಮುನ್ನ, ಅಲ್ಲಿರುವ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿ ಮಾಡುವ ಉದ್ದೇಶ ತಂಡದ್ದು. ಶಾಲೆಗೆ ಬರುವ ಮಕ್ಕಳಿಗೆ ಸರಿಯಾದ ವಾಹನ ವ್ಯವಸ್ಥೆ ಹಾಗೂ ಶಾಲೆಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವ ಉದ್ದೇಶವನ್ನು ಸೊಸೈಟಿಯ ಸದಸ್ಯರು ಇಟ್ಟುಕೊಂಡಿದ್ದಾರೆ. ನಂತರದ ದಿನಗಳಲ್ಲಿ ಆವಿಗೆ ಗ್ರಾಮದ ಅಭಿವೃದ್ಧಿ ಕೆಲಸಗಳು ನಡೆಯಲಿವೆ.

ಸರ್ಜಾ ಫ್ಯಾಮಿಲಿಗೆ ಡಬ್ಬಲ್ ಖುಷಿ.! ರಾಜಮಾರ್ತಾಂಡ ಟ್ರೇಲರ್ ಬಿಡುಗಡೆ ಮಾಡಿದ ಜೂ. ಚಿರು

ನಟ ಸುದೀಪ್(Kiccha sudeep)‌ ಅವರ ಈ ಸಮಾಜಮುಖಿ ಕೆಲಸಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ದಿಲ್ಲದೇ ತಮ್ಮ ಚಾರಿಟೇಬಲ್ ಸೊಸೈಟಿ ಮೂಲಕ ಸುದೀಪ್‌ ಮಾಡುತ್ತಿರುವ ಈ ಸಮಾಜಸೇವೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ.

Priyanka Chopraಗೆ ಬಾಡಿಗೆದಾರರಾದ Jacqueline Fernandez ತಿಂಗಳಿಗೆ ಪಾವತಿಸುವ ಹಣವೆಷ್ಟು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News