ನವದೆಹಲಿ: ಬುಧವಾರದಂದು ನಟ ರಜನಿಕಾಂತ್ ಅವರು ಬರೆದ ಆರೋಗ್ಯದ ಕಾರಣದಿಂದಾಗಿ ಅವರು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಹೇಳಿರುವ ಸಂದೇಶವು ವೈರಲ್ ಆಗಿರುವುದು ಈಗ ಸಾಕಷ್ಟು ಚರ್ಚೆಗೆ ಈಡು ಮಾಡಿದೆ.


COMMERCIAL BREAK
SCROLL TO CONTINUE READING

ಈ ಹಿನ್ನಲೆಯಲ್ಲಿ ಈಗ ನಟ ರಜನಿಕಾಂತ್ ಇದು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ರಜಿನಿ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ನೀಡಿದ ಸ್ಪಷ್ಟೀಕರಣದಲ್ಲಿ, ಈ ಹೇಳಿಕೆ ನಕಲಿಯಾಗಿದ್ದರೂ, ಅವರ ಆರೋಗ್ಯದ ಬಗ್ಗೆ ಹೇಳಿರುವುದು ನಿಜ ಎಂದು ಹೇಳಿದ್ದಾರೆ.


ಮುಖ್ಯಮಂತ್ರಿಯಾಗಲು ಎಂದಿಗೂ ಬಯಸಿಲ್ಲ, ಆದರೆ ಬದಲಾವಣೆ ಬಯಸಿರುವೆ- ರಜನಿಕಾಂತ್


"ನನ್ನ ಹೇಳಿಕೆಯಂತೆ ಕಂಡುಬರುವ ಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ವೈರಲ್ ಆಗಿ ಹಂಚಿಕೊಳ್ಳಲಾಗುತ್ತಿದೆ. ಅದು ನನ್ನ ಹೇಳಿಕೆಯಲ್ಲ ಎಂದು ಎಲ್ಲರಿಗೂ ತಿಳಿದಿದೆ. ಅದೇನೇ ಇದ್ದರೂ, ನನ್ನ ಆರೋಗ್ಯದ ಬಗ್ಗೆ ಮತ್ತು ನನ್ನ ವೈದ್ಯರ ಸಲಹೆಯೆಲ್ಲವೂ ನಿಜ. ನನ್ನ ರಜಿನಿ ಮಕ್ಕಲ್ ಮಂದರಂ ಸದಸ್ಯರೊಂದಿಗೆ ಸಮಾಲೋಚಿಸಿದ ನಂತರ ಸರಿಯಾದ ಸಮಯದಲ್ಲಿ ಈ ಬಗ್ಗೆ ಜನರಿಗೆ ನನ್ನ ರಾಜಕೀಯ ನಿಲುವಿನ ಬಗ್ಗೆ ಪ್ರಕಟಣೆ ನೀಡುತ್ತೇನೆ 'ಎಂದು ರಜನಿಕಾಂತ್ ಸ್ಪಷ್ಟೀಕರಣ ನೀಡಿದ್ದಾರೆ.


2021 ರಲ್ಲಿ ತಮಿಳುನಾಡಿನ ಜನರು ರಾಜಕೀಯದಲ್ಲಿ ಅದ್ಭುತವನ್ನು ಸೃಷ್ಟಿಸುತ್ತಾರೆ- ರಜನಿಕಾಂತ್


ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ  ಸಂದೇಶವು, ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸದಿರಬಹುದು ಮತ್ತು ಈ ವರ್ಷದ ಡಿಸೆಂಬರ್ ವೇಳೆಗೆ ಅವರು ತಮ್ಮ ಅಂತಿಮ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಾರೆ ಎಂದು ಸೂಚಿಸಿತ್ತು.


ರಜನಿ ಮತ್ತು ನಾನು ಭಿನ್ನ ರಾಜಕೀಯ ನಿಲುವು ಹೊಂದಿದ್ದರೂ ನಮ್ಮಲ್ಲಿ ಪರಸ್ಪರ ಗೌರವವಿದೆ-ಕಮಲ್ ಹಾಸನ್

2017 ರ ಡಿಸೆಂಬರ್‌ನಲ್ಲಿ ರಜನಿಕಾಂತ್ ಅವರು ಚೆನ್ನೈನಲ್ಲಿರುವ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಮ್ಮ ಅಭಿಮಾನಿಗಳನ್ನು ಒಟ್ಟುಗೂಡಿಸಿ ತಾವು ರಾಜಕೀಯ ಪ್ರವೇಶಿಸುವ ಕುರಿತಾಗಿ ಮಾತನಾಡಿದ್ದರು.ಆದರೆ ಇದುವರೆಗೂ ಕೂಡ ಇದಕ್ಕೆ ಸಂಬಂಧಿದಂತೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಈ ವರ್ಷದ ಆರಂಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, 2021 ರಲ್ಲಿ ಮುಂಬರುವ ರಾಜ್ಯ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಿದರೂ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎಂದು ರಜನಿಕಾಂತ್  ಹೇಳಿದ್ದರು.