Desi Dadi Viral Video: ಇತ್ತೀಚಿನ ದಿನಗಳಲ್ಲಿ ಡಾನ್ಸ್ ಮಾಡುವಾಗ ಯುವಕರಲ್ಲಿ ಮಾತ್ರ ಉತ್ಸಾಹ ಹಾಗೂ ಜೋಶ್ ಇರುವುದನ್ನು ನಾವು ನೋಡುತ್ತೇವೆ. ಆದರೆ, ವಯಸ್ಸಾದವರೂ ಕೂಡ ತಾವೂ ಏನು ಯುವಕರಿಗಿಂತ ಕಮ್ಮಿಯೇನಿಲ್ಲ ಎಂಬುದನ್ನು ಸಾಬೀತುಪಡಿಸುವಲ್ಲಿ ನಿರತರಾಗಿದ್ದಾರೆ. ಇದರ ಒಂದು ತಾಜಾ ಉದಾಹರಣೆ ಸಾಮಾಜಿಕ ಮಾಧ್ಯಮಗಳ ಮೇಲೆ ಕಾಣಲು ಸಿಗುತ್ತಿದೆ. ಹೌದು ಸಾಮಾಜಿಕ ಮಾಧ್ಯಮದಲ್ಲಿ (Social Media) ಡಾನ್ಸ್ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ 63 ವಯಸ್ಸಿನ ದಾದಿಯೊಬ್ಬಳು, ಖ್ಯಾತ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವಳ ಹಾಡಿಗೆ ಜಬರ್ದಸ್ತ್ ಪರ್ಫಾರ್ಮೆನ್ಸ್ ನೀಡಿದ್ದಾಳೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Black Idli: ನೀವು ಎಂದಾದರೂ 'ಕರಿ ಇಡ್ಲಿ' ತಿಂದಿದ್ದೀರಾ? ಎಲ್ಲಿ ಸಿಗುತ್ತೆ?


ಬಾಲಿವುಡ್ ಹಾಡಿಗೆ ದೇಸಿ ದಾದಿಯ ಜಬರ್ದಸ್ತ್ ಜಲ್ವಾ (Grandma Viral Video)
ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಓರ್ವ ಅಜ್ಜಿ (Grandma Dance) ಬಾಲಿವುಡ್ ಹಾಡಿಗೆ ಸಕತ್ ಸ್ಟೆಪ್ ಹಾಕಿದ್ದು, ಲಕ್ಷಾಂತರ ನೆಟ್ಟಿಗರ ಗಮನ ಸೆಳೆದಿದ್ದಾಳೆ. ದೇಸಿ ದಾದಿ ಎಂದೇ ಖ್ಯಾತ ರವಿ ಬಾಲಾ ಶರ್ಮಾ ಅವರ ಹಲವು ವಿಡಿಯೋಗಳು ವೈರಲ್ ಆಗಿವೆ. ಆದರೆ, ಇದೀಗ ಫ್ರೆಶ್ ವಿಡಿಯೋದೊಂದಿಗೆ ಮತ್ತೊಮ್ಮೆ ಅವರು ಸಕತ್ ಸದ್ದು ಮಾಡಿದ್ದಾರೆ. ಈ ಬಾರಿ ಅವರು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವಳ 'ಚಕಾ ಚಕ್' ಹಾಡಿಗೆ ಹೆಜ್ಜೆ ಹಾಕಲು ನಿರ್ಧರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸುಮಾರು ಮೂರು ಲಕ್ಷಕ್ಕೂ ಅಧಿಕ ಬಾರಿಗೆ ವೀಕ್ಷಣೆಗೆ ಒಳಗಾಗಿದೆ. 



ಇದನ್ನೂ ಓದಿ-‘ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್ ಪ್ಲೀಸ್’: ಶಿಕ್ಷಕನ ವರ್ಗಾವಣೆಗೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು..


ಅಜ್ಜಿಯ ಡಾನ್ಸ್ ವಿಡಿಯೋ ನೋಡಿ ನೀವು ಕುಣಿಯಲು ಆರಂಭಿಸುವಿರಿ (Trending)
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ 63 ವರ್ಷ ವಯಸ್ಸಿನ ದೇಸಿ ದಾದಿಯನ್ನು ನೀವು ಸಾರಾ ಅಲಿ ಖಾನ್ ರೀತಿಯೇ ಹಸಿರು ಬಣ್ಣದ ಸೀರೆ ಧರಿಸಿರುವುದನ್ನು ನೀವು ಗಮನಿಸಬಹುದು. ಡಾನ್ಸ್ ಬೀಟ್ ಗೆ ಅಜ್ಜಿ ಡಿಟ್ಟೋ ಹೆಜ್ಜೆ  ಹಾಕುತ್ತಿರುವುದನ್ನು ನೀವು ನೋಡಬಹುದು. ಅಷ್ಟೇ ಅಲ್ಲ ಡಾನ್ಸ್ ವೇಳೆ ಅಜ್ಜಿ ನಟಿಯ ಹುಕ್ ಸ್ಟೆಪ್ಸ್ ಗಳನ್ನೂ ಕೂಡ ಡಿಟ್ಟೋ ಅನುಸರಿಸಿದ್ದಾಳೆ. ಹಾಡಿನಲ್ಲಿ ಅಜ್ಜಿಯ ಹಾವಭಾವಗಳು ಕೂಡ ಅದ್ಭುತವಾಗಿದ್ದು, ಅಜ್ಜಿಯ ಉತ್ಸಾಹ ನೋಡುವಂತಿದೆ. ಅಜ್ಜಿಯ ಈ ಡಾನ್ಸ್ ನೋಡಿ ನೀವೂ ಕೂಡ ಕುಣಿಯಲು ಆಣಿಯಾಗುವಿರಿ.


ಇದನ್ನೂ ಓದಿ-Viral video:ಲೆಹೆಂಗಾ ಬದಲು ರಿಪ್ಡ್ ಡೆನಿಮ್‌ ತೊಟ್ಟು ಹಸೆಮಣೆ ಏರಲು ಬಂದ ಮದುಮಗಳು.!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.