Tollywood : ಸ್ಟಾರ್‌ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಅವರು ಕೆಲವು ದಿನಗಳ ಹಿಂದೆ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ ಪಡೆದ ಸಂಭ್ರಮದಲ್ಲಿದ್ದರು. ಅದನ್ನು ಅವರು ಇಂದಿಗೂ ಎಂಜಾಯ್‌ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಮುಂಬರುವ ಸಿನಿಮಾದ ತಯಾರಿಯಲ್ಲಿದ್ದಾರೆ. ಈಗಾಗಲೇ ಇವರು ಮಹೇಶ್‌ ಬಾಬು ಜೊತೆ ಸಿನಿಮಾ ಅನೌನ್ಸ್‌ ಮಾಡಿದ್ದು, ಈ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಗಳಲ್ಲಿ ಸಖತ್‌ ಬ್ಯೂಸಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಸ್ಟಾರ್‌ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಾಜಮೌಳಿ ಅವರು ಹೀರೋ ಆಗಿ ನಟಿಸಲು ರೆಡಿಯಾಗಿದ್ದಾರೆ. ಹಾಗಾದ್ರೆ ಸಿನಿಮಾ ಯಾವುದು? ಸಿನಿಮಾ ನಾಯಕಿ ಯಾರು ಅನ್ನೊ ಕುತೂಹಲ ಎಲ್ಲರಲ್ಲಿಯೂ ಇರೋದು ಕಾಮನ್.‌ ಆದರೆ ಇದ್ಯಾವುದು ಅಲ್ಲ. ರಾಜಮೌಳಿ ಯಾವುದೇ ಸಿನಿಮಾದಲ್ಲಿ ಹೀರೋ ಆಗುತ್ತಿಲ್ಲ.


ಗಿನ್ನಿಸ್‌ ದಾಖಲೆ ಬರೆದ ಶಾರುಖ್‌ ಅಭಿಮಾನಿಗಳು..!


ಪೋನ್ ಒಂದರ ಜಾಹೀರಾತಿನಲ್ಲಿ. ಈ ಜಾಹಿರಾತಿನ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ ಇದು ಅವರೇನಾ ಎಂದೆಲ್ಲಾ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.


ಇನ್ನು ರಾಜಮೌಳಿ ಒಪ್ಪೋ ಫೋನ್‌ ಜಾಹೀರಾತಿನಲ್ಲಿ ಸ್ಟೈಲಿಷ್‌ ಆಗಿ ನಡೆದು ಖದರ್‌ ಆಗಿ ಮಿಂಚಿದ್ದಾರೆ. ಈ ಜಾಹೀರಾತಿನ ಚಿತ್ರಿಕರಣ ರಾಜಸ್ಥಾನದ ಜೋಧ್‌ಪುರ್‌ನ ಹಳೆಯ ಅರಮನೆಯೊಂದರ ಬಳಿ ನಡೆದಿದ್ದು, ರಾಜಮೌಳಿ ಇದಕ್ಕಾಗಿ ಭಾರೀ ಮೊತ್ತ ಕೂಡಾ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಈ ಜಾಹೀರಾತನ್ನು ಟಿವಿಯಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 


ಆರ್‌ಆರ್‌ಆರ್‌ ಚಿತ್ರದ ಯಶಸ್ಸಿನ ನಂತರ ರಾಜಮೌಳಿ ಅವರು ಸದ್ಯಕ್ಕೆ ಗುಂಟೂರು ಖಾರಂ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 


ಇದನ್ನೂ ಓದಿ-Yash: ರಾವಣನ ಪಾತ್ರದಲ್ಲಿ ನಟಿಸಲು ʻNOʼ ಎಂದಿದ್ದೇಕೆ ಯಶ್?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.