ನವದೆಹಲಿ: ನಿದ್ದೆ ಅಂದ್ರೆ ಅದೊಂದು ಧ್ಯಾನವಿದ್ದ ಹಾಗೆ,ಬದುಕಿನ ಎಲ್ಲ ಜಂಜಾಟಗಳಿಗೆ ಒಂದು ಕ್ಷಣ ಗುಡ್ ಬೈ ಹೇಳಿ ನಿದ್ರಿಸುವುದಿದೆಯಲ್ಲ ಅದರ ಮಜಾನೆ ಬೇರೆ. ಹೌದು ಈಗ ನಾವು ನಿದ್ದೆಗೆ ಇಷ್ಟೆಲ್ಲಾ ಯಾಕೆ ಪೀಠಿಕೆ ಹಾಕುತ್ತಿದ್ದೇವೆ ಎಂದರೆ ಕ್ಲಾಸ್ ರೂಮನಲ್ಲಿ ಮಾನ್ಸಿ ಎನ್ನುವ  ಬಾಲಕಿಯು ನಿದ್ರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಈ ವಿಡಿಯೋದಲ್ಲಿ ತರಗತಿ ನಡೆಯುತ್ತಿರುವ ವೇಳೆ ಗಾಡ್ ನಿದ್ರೆಗೆ ಜಾರಿದ್ದಾಳೆ.ಇದನ್ನು ಕಂಡ ಪಕ್ಕದ ಸಹಪಾಠಿ ಮತ್ತು ಟೀಚರ್ ಈ ಪುಟ್ಟ ಬಾಲಕಿಯನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ ಅಷ್ಟಾಗಿಯೂ ಕೂಡ ಇದನ್ನೆಲ್ಲವನ್ನು ಅಲಕ್ಷಿಸಿ ಅವಳು ನಿದ್ರಿಸುತ್ತಿದ್ದಾಳೆ.ಹಾಗಾದರೆ ನೀವು  ಒಂದು ಸಲ ಈ ಪುಟ್ಟ ಕಂದನ ನಿದ್ದೆಯನ್ನು ಕಣ್ಣು ತುಂಬಿಕೊಳ್ಳಿ.