ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ಭಾರತದ ಅತ್ಯಂತ ಜನಪ್ರಿಯ ಮತ್ತು ಆದರ್ಶ ದಂಪತಿಗಳೆಂದು ಕರೆಯಲಾಗುತ್ತದೆ. ಕಳೆದ ವರ್ಷ ಡಿಸೆಂಬರ್ 11 ರಂದು ಇಟಲಿಯಲ್ಲಿ ಮದುವೆಯಾದ ವಿರಾಟ್ ಮತ್ತು ಅನುಷ್ಕ ಅವರು ತಮ್ಮ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಇಬ್ಬರೂ ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ. ಇಬ್ಬರೂ ತಮ್ಮ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ, ತನ್ನ ಪತ್ನಿ, ನಟಿ ಮತ್ತು ನಿರ್ಮಾಪಕಿ ಅನುಷ್ಕಾ ಶರ್ಮಾ ಅವರೊಂದಿಗೆ ಯಾವುದೇ ಸ್ಪರ್ಧೆಯನ್ನು ಹೊಂದಿಲ್ಲ ಎಂದು ದೃಢಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ, ತನ್ನ ಹೆಂಡತಿ ಅನುಷ್ಕಾ ಶರ್ಮಾ ಹೆಸರಾಂತ ನಟಿ, ಆಕೆ ತನ್ನದೇ ಆದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ನಮ್ಮ ನಡುವೆ ಯಾವುದೇ ರೀತಿಯ ಸ್ಪರ್ಧೆ ಇಲ್ಲ ಮತ್ತು ಎಂದಿಗೂ ನಾವು ನಮ್ಮ ನಡುವೆ ಸ್ಪರ್ಧೆಯ ಭಾವದಿಂದ ಯೋಚಿಸಲಿಲ್ಲ ಎಂದು ಸ್ಪಷ್ಟಪಡಿಸಿರುವ ವಿರಾಟ್, ಅಂತಹ ವಿಷಯಗಳನ್ನು ನೀವೇಕೆ ಭಾವಿಸುತ್ತೀರಿ ಎಂದು ನನಗೆ ಗೊತ್ತಿಲ್ಲ ಎಂದಿದ್ದಾರೆ.



"ನಮ್ಮಿಬ್ಬರ ನಡುವಿನ ಮಾತುಕತೆ ಆರಾಮದಾಯಕವಾಗಿದೆ. ಇದನ್ನು ನಾನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ವ್ಯವಹಾರ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರೂ ವೃತ್ತಿಪರರರಗಿದ್ದೇವೆ. ನಿಸ್ಸಂಶಯವಾಗಿ ನಮ್ಮ ನಡುವೆ ಯಾವುದೇ ಸ್ಪರ್ಧೆ ಇಲ್ಲ. ಜನರಿಗೆ ಇಂತಹ ವಿಷಯಗಳು ಹೇಗೆ ತಲುಪುತ್ತದೆ ಮತ್ತು ಕೆಲವರು ಯಾಕೆ ಅಂತಹ ಕೆಲಸಗಳನ್ನು ಮಾಡುತ್ತಾರೆಂದು ನನಗೆ ಗೊತ್ತಿಲ್ಲ" ಎಂದು ವಿರಾಟ್ ಬೇಸರ ವ್ಯಕ್ತಪಡಿಸಿದರು.



ಈ ಮೂಲಕ ವಿರಾಟ್ ಮತ್ತು ಅನುಷ್ಕಾ ನಡುವೆ ಸ್ಪರ್ಧೆ ಇದೆಯಾ ಎಂಬ ಊಹಾಪೋಹಗಳಿಗೆ ವಿರಾಟ್ ತೆರೆ ಎಳೆದಿದ್ದಾರೆ.