Vivek Agnihotri - Aishwarya Rai: ‘ಕಾನ್ ಅಂದ್ರೆ ಚಿತ್ರೋತ್ಸವವೇ ಹೊರತು ಫ್ಯಾಷನ್ ಶೋ ಅಲ್ಲ- ವಿವೇಕ್ ಅಗ್ನಿಹೋತ್ರಿ ಟೀಕೆ
Cannes Film Festival: ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬಾಲಿವುಡ್ ನಟಿಯರ ಉಡುಗೆಗಳ ಬಗ್ಗೆ ಅದರಲ್ಲೂ ಮುಖ್ಯವಾಗಿ ಮಾಜಿ ವಿಶ್ವ ಸುಂದರಿ ಉಡುಗೆಗೆ ಖ್ಯಾತ ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ ಬಾರಿ ಟೀಕೆ ವ್ಯಕ್ತ ಪಡಿಸಿದ್ದಾರೆ.
ದೆಹಲಿ: ಫ್ರಾನ್ಸ್ನಲ್ಲಿ10 ದಿನಗಳ ಕಾಲ ನಡೆಯುವ ದೊಡ್ಡ ಉತ್ಸವ ಎಂದರೆ ಕಾನ್ಸ್ ಫಿಲ್ಮ್ ಫೆಸ್ಟಿವಲ್. ಕಾನ್ಸ್ ಫಿಲ್ಮ್ ಫೆಸ್ಟಿವಲ್ ಎಂದರೆ ಸಿನಿಮಾ ತಾರೆಯರಿಗೆ ದೊಡ್ಡ ಉತ್ಸವ. ಈ ಫಿಲ್ಮ್ ಉತ್ಸವದಲ್ಲಿ ಹೆಚ್ಚಿನ ಸಿನಿಮಾ ನಟರು ಭಾಗಿಯಾಗುತ್ತಾರೆ. ಈ ಬಾರಿ ಅನೇಕ ಭಾರತೀಯ ನಟರು ಭಾಗಿಯಾಗಿದ್ದರು.
ಮುಖ್ಯವಾಗಿ ಬಾಲಿವುಡ್, ಟಾಲಿವುಡ್ ಸೇರಿದಂತೆಯೇ ಅನೇಕರು ಭಾಗಿಯಾಗಿದ್ದರು. ಅದರಲ್ಲೂ ವಿಶೇಷವಾಗಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ವಿಭಿನ್ನ ಉಡುಗೆ ತೊಟ್ಟು ಎಲ್ಲರ ಮನ ಸೆಳೆಯುತ್ತಿದ್ದರು. ಸದ್ಯ ನಟಿ ಐಶ್ವರ್ಯ ರೈ ಮಾತ್ರವಲ್ಲದೇ ಅನೇಕ ನಟಿಯರು ವಿಭಿನ್ನವಾಗಿ ಉಡುಗೆ ತೊಟ್ಟು ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿ ಪೋಸ್ ನೀಡಿದರು.
ಇದನ್ನೂ ಓದಿ: Karnataka CM: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ತಾರೆಯರ ಸಮಾಗಮ!
ಸದ್ಯ ಇದೀಗ ಬಾಲಿವುಡ್ ನಟಿಯರ ಉಡುಗೆಗಳ ಬಗ್ಗೆ ಅದರಲ್ಲೂ ಮುಖ್ಯವಾಗಿ ಮಾಜಿ ವಿಶ್ವ ಸುಂದರಿ ಉಡುಗೆಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಹಿಟ್ ಆದ ಬಳಿಕ ಖ್ಯಾತಿ ಪಡೆದ ವಿವೇಕ್ ಅಗ್ನಿಹೋತ್ರಿ ಬಾರಿ ಟೀಕೆ ವ್ಯಕ್ತ ಪಡಿಸಿದ್ದಾರೆ. ಈ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರು ಧರಿಸಿದ್ದ ಕಾಸ್ಟ್ಯೂಮ್ ಬಗ್ಗೆ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ಈ ಫಿಲ್ಮ್ ಫೆಸ್ಟಿವಲ್ನಲ್ಲಿ ಸೆಲೆಬ್ರಿಟಿಗಳು ಬಗೆಬಗೆಯ ಕಾಸ್ಟ್ಯೂಮ್ ಧರಿಸಿ, ರೆಡ್ ಕಾರ್ಪೆಟ್ನಲ್ಲಿ ಪೋಸ್ ಕೊಡುವುದು ಸಾಕಷ್ಟು ಹೈಲೈಟ್ ಹೊಸದೆನಲ್ಲ.
ಆದರೆ ಈ ಚಲನಚಿತ್ರೋತ್ಸವ ಕುರಿತಂತೆ ಹೇಳಿರುವ ಅವರು, ಕಾನ್ ಚಲನಚಿತ್ರೋತ್ಸವ ಬಗ್ಗೆ ತಿಳಿದಿಯೇ , ಇದು ಫ್ಯಾಶನ್ ಶೋ ಅಂತ ನೀವು ಭಾವಿಸುತ್ತಿದ್ದರೆ ನಾನು ನಿಮಗೆ ನೆನಪಿಸುತ್ತಿದ್ದೇನೆ’ ಎಂದು ತಮ್ಮ ಟ್ವೀಟ್ರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Rakshit Shetty: ಟೊವಿನೋ ಥಾಮಸ್ ʼARMʼ ಟೀಸರ್ ರಿಲೀಸ್ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ