Karnataka CM: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್ ತಾರೆಯರ ಸಮಾಗಮ!

Siddaramaiah Takes Oath Sandalwood Stars : ರಾಜ್ಯ ನೂತನ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಕೆ ಶಿವಕುಮಾರ್ ಅವರು ಇಲ್ಲಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಈ ನಿಟ್ಟಿನಲ್ಲಿ ಇವರಿಗೆ ಶುಭ ಕೋರಲೆಂದು ಸಿನಿ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. 

ಬೆಂಗಳೂರು: ಕರ್ನಾಟಕದಲ್ಲಿ ಬಹುಮತ ಪಡೆದಿರುವ ಕಾಂಗ್ರೆ​ಸ್​ ಪಕ್ಷವು ಸರ್ಕಾರ ರಚನೆಯಲ್ಲಿ ಮುಂದಾಗಿದೆ. ರಾಜ್ಯ ನೂತನ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಕೆ ಶಿವಕುಮಾರ್ ಅವರು ಇಲ್ಲಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಈ ನಿಟ್ಟಿನಲ್ಲಿ ಇವರಿಗೆ ಶುಭ ಕೋರಲೆಂದು ಅಪಾರ ಸಂಖ್ಯೆಯ ಕಾರ್ಯಕರ್ತರು  ಹಾಗೂ ಸಿನಿ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. ಶಿವರಾಜ್​ಕುಮಾರ್​, ರಮ್ಯಾ,ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ, ಎಂ.ಕೆ. ಸ್ಟಾಲಿನ್​ ಸೇರಿದಂತೆ ಹಲವರ ತಾರೆಯರ ಸಮ್ಮುಖದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು.

1 /6

ಸಿನಿ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಹಲವರ ತಾರೆಯರ ಸಮ್ಮುಖದಲ್ಲಿ ಇಂದು  ಸಿದ್ದರಾಮಯ್ಯನವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. 

2 /6

ಕ್ಯಾಂಪೇನ್​ ವೇಳೆ ಕಾಂಗ್ರೆಸ್​ ಪಕ್ಷಕ್ಕೆ ಬೆಂಬಲ ನೀಡಿದ ಗೀತಾ ಶಿವರಾಜ್​ಕುಮಾರ್​ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಕೋರಿದ್ದಾರೆ.  

3 /6

ಕಾಂಗ್ರೆಸ್‌ ಪರ ಚುನಾವಣಾ ಪ್ರಚಾರ ಮಾಡಿದ್ದ ನಟಿ ರಮ್ಯಾ, ಇದೀಗ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊಟ್ಟ ಮಾತಿನಂತೆ ನಡೆದು ಕೊಳ್ಳುತ್ತಾರೆಂದು ಹೊಸ ಸರ್ಕಾರ ಕುರಿತು ರಮ್ಯಾ ಭರವಸೆ ನೀಡಿದರು.

4 /6

ʼಜೋಡೆತ್ತುʼ ಸರ್ಕಾರಕ್ಕೆ ಶುಭ ಕೋರುವ ಸಲುವಾಗಿ ದುನಿಯಾ ವಿಜಯ್‌ ಇಂದು  ಬೆಳ್ಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮನದಾಳದ ಮಾತನ್ನು ಬರೆದುಕೊಂಡಿದ್ದರು. ಇದೀಗ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ. 

5 /6

ಕಮಲ್​ ಹಾಸನ್ ಕೂಡ ಸಿದ್ದರಾಮಯ್ಯನವರ  ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

6 /6

ನಟಿ ಉಮಾಶ್ರೀ ಸೇರಿದಂತೆ ಮುಂತಾದ ತಾರೆಯರ ಸಮ್ಮುಖದಲ್ಲಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸಿದರು.