Ananya Panday and Aditya Roy Kapoor : ಅತ್ಯಂತ ವಿವಾದಾತ್ಮಕ ಮತ್ತು ಜನಪ್ರಿಯ ಸೆಲೆಬ್ರಿಟಿ ಚಾಟ್ ಶೋ ಕಾಫಿ ವಿತ್ ಕರಣ್ ಸೀಸನ್ 8 ರ ಹೊಸ ಸಂಚಿಕೆ ಬಿಡುಗಡೆಯಾಗಿದೆ. ಹೊಸ ಸಂಚಿಕೆಯಲ್ಲಿ, ಕರಣ್ ಜೋಹರ್ ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಕರಣ್ ಜೋಹರ್ ಈ ಸಂಚಿಕೆಯನ್ನು ಅನನ್ಯ ಪಾಂಡೆ ಡೇಟಿಂಗ್ ವದಂತಿಗಳೊಂದಿಗೆಯೇ ಆರಂಭಿಸುತ್ತಾರೆ. ಇಲ್ಲಿ  ಕರಣ್ ನೇರವಾಗಿ ಆದಿತ್ಯ ಜೊತೆಗಿನ ಡೇಟಿಂಗ್ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪ್ರಶ್ನೆಯಿಂದ ನುಣುಚಿಕೊಳ್ಳಲು ಅನನ್ಯ ಬಹಳ ಸಾರಿ ಪ್ರಯತ್ನ ಪಡುವುದನ್ನು ಕೂಡಾ ಗಮನಿಸಬಹುದು. 


COMMERCIAL BREAK
SCROLL TO CONTINUE READING

ಅನನ್ಯ-ಆದಿತ್ಯರ ಡೇಟಿಂಗ್ ವದಂತಿ ಖಚಿತಪಡಿಸಿಡ ಕರಣ್ : 
ಕಾಫಿ ವಿಥ್ ಕರಣ್ ಸೀಸನ್ 8 ರ ಇತ್ತೀಚಿನ ಸಂಚಿಕೆಯಲ್ಲಿ, ಕರಣ್ ಜೋಹರ್  ಅನನ್ಯ ಪಾಂಡೆ ಅವರೊಂದಿಗೆ ಮಾತನಾಡುತ್ತಾ 'ಅನನ್ಯ ರಿಲೇಶನ್ ಸ್ಟೇಟಸ್ ಬಗ್ಗೆ ಪ್ರಶ್ನೆ ಎತ್ತುತ್ತಾರೆ. ಈ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಅನನ್ಯ ಪಾಂಡೆ  ನಾವು ನಮ್ಮ ಸಂಬಂಧಗಳನ್ನು ಮುಚ್ಚಿಡಬೇಕು ಅಥವಾ ಒಪ್ಪಿಕೊಳ್ಳಬೇಕು ಎಂದೇ ನಿಲ್ಲ. ಸರಿಯಾದ ಸಂದರ್ಭದಲ್ಲಿ ಸೂಕ್ತವಾದುದನ್ನು ಮಾಡಬೇಕು ಎಂದಿದ್ದಾರೆ. ಅಲ್ಲದೆ, ಕೆಲವು ವಿಷಯಗಳು ಖಾಸಗಿಯಾಗಿದ್ದು,  ವಿಶೇಷವಾಗಿರುತ್ತವೆ. ಅವುಗಳನ್ನು ಅದರ ಪಾಡಿಗೆ ಬಿಟ್ಟು ಬಿಡಬೇಕು ಎಂದು ಹೇಳಿದ್ದಾರೆ. 


ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಾಯಕ ವಾಸುಕಿ ವೈಭವ್! ಮದುವೆ ಆಗ್ತಿರೋ ಹುಡುಗಿ ಯಾರು ಗೊತ್ತಾ?


ಅನನ್ಯಾ  ರಿಲೇಶನ್ ಸ್ಟೇಟಸ್ ಏನು? : 
ಅನನ್ಯ ಉತ್ತರಕ್ಕೆ ಸುಮ್ಮನಾಗದ ಕರಣ್, ಹಾಗಾದರೆ  ಆದಿತ್ಯ ಜೊತೆ ಇರುವುದು ನಿಮ್ಮ ಸ್ನೇಹಾನಾ ಅಥವಾ ಸ್ನೇಹಕ್ಕಿಂತ ಮುಂದುವರಿದ ಸಂಬಂಧನಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅನನ್ಯ  'ಸ್ನೇಹಿತರಲ್ಲ...ನಾವು ಸ್ನೇಹಿತರು...' ಎಂದು ಮತ್ತೆ ಮಾತು ಬದಲಿಸಲು ಪ್ರಯತ್ನಿಸುತ್ತಾರೆ.  ಆಗ ಮಧ್ಯೆ ಪ್ರವೇಶಿಸುವ ಕರಣ್ ಹೌದು ಇದು ಸ್ನೇಹ ಆದರೆ 'ಪ್ರೀತಿಯ ಸ್ನೇಹ ಎನ್ನುತ್ತಾರೆ. ಈ ಸಂದರ್ಭದಲ್ಲಿ ಅನನ್ಯಾ ನಾವು ನಿಜವಾಗಿಯೂ 'ಬೆಸ್ಟ್ ಫ್ರೆಂಡ್ಸ್  ಎಂದಿದ್ದಾರೆ. 


ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ನಡುವೆ ಡೇಟಿಂಗ್ ವದಂತಿಗಳು ಬಹಳ ಸಮಯದಿಂದ ಕೇಳಿ ಬರುತ್ತಿದೆ. ಇಬ್ಬರೂ ಅನೇಕ ಬಾರಿ ಒಟ್ಟಿಗೆ ರಜಾದಿನಗಳನ್ನು ಕಳೆದಿದ್ದಾರೆ.  ದಿನಗಳನ್ನು ಕೆಲವು ಸಮಯದ ಹಿಂದೆ, ಆದಿತ್ಯ-ಅನನ್ಯ ಅವರ ಯುರೋಪ್ ಪ್ರವಾಸದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗಿತ್ತು. 


ಇದನ್ನೂ ಓದಿ : ಅಧಿಕೃತವಾಗಿ ಡಿವೋರ್ಸ್‌ ಪಡೆದ ಹನಿಸಿಂಗ್‌ ಹಾಗೂ ಪತ್ನಿ ಶಾಲಿನಿ ತಲ್ವಾರ್..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.