ರಶ್ಮಿಕಾ ಡೀಪ್‌ಫೇಕ್‌ ವಿಡಿಯೋದಲ್ಲಿರುವ ನಿಜವಾದ ಯುವತಿ ʼಜರಾʼ..! ಯಾರು ಈಕೆ..?

Rashmika mandanna deepfake video : ಇತ್ತೀಚಿಗೆ ರಶ್ಮಿಕಾ ಮಂದಣ್ಣ ಲಿಫ್ಟ್‌ ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದ್ರೆ ಅದು ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಲಾದ ವೀಡಿಯೊ ಎಂದು ತಿಳಿದು ಬಂದಿತ್ತು. ಆ ವಿಡಿಯೋ ಜರಾ ಪಟೇಲ್‌ ಎಂಬುವವರಿಗೆ ಸೇರಿದ್ದಾಗಿದೆ.

Written by - Krishna N K | Last Updated : Nov 8, 2023, 06:35 PM IST
  • ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್‌
  • ವೈರಲ್‌ ವಿಡಿಯೋದಲ್ಲಿದ್ದ ಯುವತಿ ಜರಾ
  • ಜರಾ ಬ್ರಿಟಿಷ್-ಭಾರತೀಯ ಯುವತಿ.
ರಶ್ಮಿಕಾ ಡೀಪ್‌ಫೇಕ್‌ ವಿಡಿಯೋದಲ್ಲಿರುವ ನಿಜವಾದ ಯುವತಿ ʼಜರಾʼ..! ಯಾರು ಈಕೆ..? title=

Zara patel : ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದು ದಿನದ ನಂತರ ಮೂಲ ವೀಡಿಯೊದಲ್ಲಿ ಕಾಣಿಸಿಕೊಂಡ ಮಹಿಳೆ ಬಗ್ಗೆ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಆ ಯುವತಿ ಯಾರು..? ಯಾವ ಊರು ಅಂತ ಸೋಷಿಯಲ್‌ ಮೀಡಿಯಾದಲ್ಲಿ ಸರ್ಚ್‌ ಮಾಡುತ್ತಿದ್ದಾರೆ. ಈ ಕುರಿತು ಕಂಪ್ಲೀಟ್‌ ವರದಿ ಇಲ್ಲಿದೆ..

ಹೌದು... ರಶ್ಮಿಕಾ ಮಾರ್ಫ್ ಕ್ಲಿಪ್‌ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ಬಗ್ಗೆ ಭಾರತೀಯ ಸಿನಿ ತಾರೆಯರು ಪ್ರತಿಕ್ರಿಯೆ ನೀಡಿ, ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಟಿ ರಶ್ಮಿಕಾ ಕೂಡ ಬೇಸರ ವ್ಯಕ್ತಪಡಿಸಿದ್ದರು. ʼʼಸೋಷಿಯಲ್ ಮೀಡಿಯಾದಲ್ಲಿ ನೀವು ನೋಡುವ ಸಂಗತಿಗಳನ್ನು ಒಮ್ಮೆ ಪರಿಶೀಲಿಸಿ, ಇಂಟರ್ನೆಟ್‌ನಲ್ಲಿರುವ ಎಲ್ಲವೂ ನಿಜವಲ್ಲ" ಎಂದು ಹೇಳಿದ್ದರು.

ಇದನ್ನೂ ಓದಿ: ರಶ್ಮಿಕಾ ವೈರಲ್‌ ವಿಡಿಯೋಗೆ ಪ್ರತಿಕ್ರಿಯಿಸಿದ ನಟ ವಿಜಯ್ ದೇವರಕೊಂಡ..! ಸರ್ಕಾರಕ್ಕೆ ಒತ್ತಾಯ

ಇತ್ತೀಚಿಗೆ ರಶ್ಮಿಕಾ ಮಂದಣ್ಣ ಲಿಫ್ಟ್‌ ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದ್ರೆ ಅದು ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಲಾದ ವೀಡಿಯೊ ಎಂದು ತಿಳಿದು ಬಂದಿತ್ತು. ಆ ವಿಡಿಯೋದಲ್ಲಿರುವ ನಿಜವಾದ ಯುವತಿ ರಶ್ಮಿಕಾ ಅಲ್ಲ, ಜಾರಾ ಪಟೇಲ್ ಎಂದು ತಿಳಿದು ಬಂದಿದೆ.

 
 
 
 

 
 
 
 
 
 
 
 
 
 
 

A post shared by Zara Patel (@zaarapatellll)

ಹೌದು.. ಜಾರಾ ಪಟೇಲ್ ಬ್ರಿಟಿಷ್-ಭಾರತೀಯ ಯುವತಿ. ಈಕೆಗೆ ಇನ್‌ಸ್ಟಾಗ್ರಾಮ್‌ ನಲ್ಲಿ 4.5 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಬೋಲ್ಡ್ ವಿಷಯವನ್ನು ಹಂಚಿಕೊಳ್ಳುವ ಜರಾ, ಇಂಜಿನಿಯರ್ ಮತ್ತು ಮಾನಸಿಕ ಆರೋಗ್ಯ ವಕೀಲೆಯಾಗಿ (Mental health advocate) ಕೆಲಸ ಮಾಡುತ್ತಿದ್ದಾರೆ. 

ಇದನ್ನೂ ಓದಿ:ನಟನೆಗೆ ಕಾಲಿಟ್ರಾ ಕಾಂಗ್ರೆಸ್‌ ನಾಯಕಿ ʼಸೋನಿಯಾ ಗಾಂಧಿ.ʼ.? ಪೋಸ್ಟರ್‌ ವೈರಲ್‌

ಅದರ ಹೊರತಾಗಿ, ವಯಸ್ಕ ವಿಷಯಗಳನ್ನು ತಮ್ಮ ಅನುಯಾಯಿಗಳಿಗೆ ವಿಡಿಯೋಗಳ ಮೂಲಕ ತಿಳಿಸಿಕೊಡುತ್ತಾರೆ. ಅಲ್ಲದೆ, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ರಹಸ್ಯ ಲಿಂಕ್ ಅನ್ನು ಒದಗಿಸಿದ್ದು, ಅದನ್ನು ಬಳಸಿ ಆಕೆಯೊಂದಿಗೆ ಜೊತೆ ಚಾಟ್ ಸಹ ಮಾಡಬಹುದು.

ಅಕ್ಟೋಬರ್ 9 ರಂದು, ಜಾರಾ ಪಟೇಲ್ ಅವರು ಕಪ್ಪು ಉಡುಪಿನಲ್ಲಿ ಲಿಫ್ಟ್‌ಗೆ ಪ್ರವೇಶಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದರು. ಇದೇ ವಿಡಿಯೋವನ್ನು ಮಾರ್ಫ್ ಮಾಡಲಾಗಿತ್ತು. ಸಧ್ಯ ಕೇಂದ್ರ ಸರ್ಕಾರ ರಶ್ಮಿಕಾ ಮಂದಣ್ಣ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಂಪೂರ್ಣವಾಗಿ ತೆಗೆದು ಹಾಕುವಂತೆ ಆದೇಶಿಸಿದೆ. ಅಲ್ಲದೆ, ಸೂಕ್ತ ಕ್ರಮಕ್ಕೆ ಮುಂದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News