ಬೆಂಗಳೂರು: ಕೆಜಿಎಫ್  2 ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾದಾಗಿನಿಂದಲೂ ಹಲವಾರು ದಾಖಲೆಗಳನ್ನು ಮುರಿದಿದೆ.ಅದರಲ್ಲೂ ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಹೊಸ ಬಿಡುಗಡೆಯ ಸವಾಲುಗಳ ಹೊರತಾಗಿಯೂ ದೇಶಾದ್ಯಂತ ಥಿಯೇಟರ್‌ಗಳಿಗೆ ಭಾರಿ ಜನರನ್ನು ಸೆಳೆಯುತ್ತಲೇ ಇದೆ.ಮತ್ತು ಈಗ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಕೆಜಿಎಫ್ 3 ಭಾಗವೂ ಸಹಿತ ಬರಲಿದೆ ಎನ್ನುವುದನ್ನು ಅವರು ಖಚಿತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ದೈನಿಕ್ ಭಾಸ್ಕರ್ ಗೆ ನೀಡಿದ ಸಂದರ್ಶನವೊಂದರಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಕೆಜಿಎಫ್ 3 ಚಿತ್ರವು ಮಾರ್ವೆಲ್ ಶೈಲಿಯ ಫ್ರಾಂಚೈಸ್ ನಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.ಈಗ ಅವರು ಹೊಸ ಭಾಗದ ಶೂಟಿಂಗ್ ಯಾವಾಗ ಪ್ರಾರಂಭವಾಗುತ್ತದೆ ಎಂಬ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಜೂನ್ 24 ರಂದು ಬೆಳ್ಳಿತೆರೆಗೆ ಬರಲಿದ್ದಾನೆ 'ತ್ರಿವಿಕ್ರಮ


ಯಾವುದೇ ಹೊಸ ನಟರು ಸೇರುತ್ತಾರೆಯೇ ಅಥವಾ ಯಶ್ ಅವರು ರಾಕಿ ಪಾತ್ರವನ್ನು ಪುನರಾವರ್ತಿಸುತ್ತಾರೆಯೇ? ಎಂದು ಕೇಳಿದಾಗ ಇದಕ್ಕೆ ಉತ್ತರಿಸಿದ ಅವರು "ಮುಂದಕ್ಕೆ, ನಾವು ಮಾರ್ವೆಲ್ ರೀತಿಯ ಬ್ರಹ್ಮಾಂಡವನ್ನು ರಚಿಸಲಿದ್ದೇವೆ. ನಾವು ಬೇರೆ ಬೇರೆ ಸಿನಿಮಾಗಳಿಂದ ವಿಭಿನ್ನ ಪಾತ್ರಗಳನ್ನು ಡಾಕ್ಟರ್ ಸ್ಟ್ರೇಂಜ್, ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್ ನಲ್ಲಿ ನಡೆದ ರೀತಿ ರಚಿಸಲು ಬಯಸುತ್ತೇವೆ.ಇದರಿಂದ ನಾವು ಹೆಚ್ಚು ಪ್ರೇಕ್ಷಕರನ್ನು ಸುಲಭವಾಗಿ ತಲುಪಬಹುದು "ಎಂದು ಅವರು ಹೇಳಿದರು.


ಕನ್ನಡದ ಕೆಜಿಎಫ್ 2 ಸಿನಿಮಾ ನೋಡಿ...ವಾವ್ ಯಶ್..! ಎಂದ ಬಾಲಿವುಡ್ ನಟ ರಣವೀರ್ ಸಿಂಗ್..!


ಇನ್ನೂ ಕೆಜಿಎಫ್ 3 ಚಿತ್ರೀಕರಣದ ಬಗ್ಗೆ ಕೇಳಿದಾಗ,"ನಿರ್ದೇಶಕ ಪ್ರಶಾಂತ್ ನೀಲ್ ಪ್ರಸ್ತುತ ಸಲಾರ್‌ನಲ್ಲಿ ಬ್ಯುಸಿಯಾಗಿದ್ದಾರೆ. 30-35ರಷ್ಟು ಚಿತ್ರೀಕರಣ ಮುಗಿದಿದೆ.ಮುಂದಿನ ವೇಳಾಪಟ್ಟಿ ಮುಂದಿನ ವಾರ ಆರಂಭವಾಗಲಿದೆ.ಈ ವರ್ಷ ಅಕ್ಟೋಬರ್-ನವೆಂಬರ್ ವೇಳೆಗೆ ಪೂರ್ಣಗೊಳಿಸಲು ನಾವು ಭಾವಿಸುತ್ತೇವೆ. ಹಾಗಾಗಿ, ಈ ವರ್ಷದ ಅಕ್ಟೋಬರ್ ನಂತರ ಕೆಜಿಎಫ್ ಚಿತ್ರೀಕರಣವನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ. 2024 ರ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಭರವಸೆ ಇದೆ' ಎಂದು ಅವರು ಹೇಳಿದರು.


ಈಗ ಕೆಜಿಎಫ್ ಚಿತ್ರವು ಬಾಲಿವುಡ್ ಹಾಗೂ ಹಾಲಿವುಡ್ ಚಿತ್ರಗಳ ಬಿಡುಗಡೆ ಹೊರತಾಗಿಯೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನು ಕಾಣುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದು 1200 ಕೋಟಿ ಕ್ಲಬ್ ಸೇರಲಿದೆ.


ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.