ಕನ್ನಡದ ಕೆಜಿಎಫ್ 2 ಸಿನಿಮಾ ನೋಡಿ...ವಾವ್ ಯಶ್..! ಎಂದ ಬಾಲಿವುಡ್ ನಟ ರಣವೀರ್ ಸಿಂಗ್..!

ಏಪ್ರಿಲ್ 14 ರಂದು ಕೆಜಿಎಫ್ 2 ಚಿತ್ರದ ಜಗತ್ತಿನಾದ್ಯಂತ ಬಿಡುಗಡೆಯಾದಾಗಿನಿಂದ ಸಿನಿ ಪ್ರಿಯರನ್ನು ಹಾಗೂ ಭಾರತೀಯ ಸಿನಿಮಾ ರಂಗದ ನಟರನ್ನು ಹುಬ್ಬೇರಿಸುವಂತೆ ಮಾಡಿದೆ.ಈ ಚಿತ್ರದ ಮೇಕಿಂಗ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಗೆ ಅವರು ಮಾರು ಹೋಗಿದ್ದಾರೆ.ಇತ್ತೀಚಿಗೆ ಅಂತವರ ಸಾಲಿಗೆ ಸೇರಿದ ಮತ್ತೊಬ್ಬ ವ್ಯಕ್ತಿ ಎಂದರೆ ಬಾಲಿವುಡ್ ನಟ ರಣವೀರ್ ಸಿಂಗ್..!

Written by - Zee Kannada News Desk | Last Updated : May 10, 2022, 02:36 PM IST
  • ಏಪ್ರಿಲ್ 14 ರಂದು ಕೆಜಿಎಫ್ 2 ಚಿತ್ರದ ಜಗತ್ತಿನಾದ್ಯಂತ ಬಿಡುಗಡೆಯಾದಾಗಿನಿಂದ ಸಿನಿ ಪ್ರಿಯರನ್ನು ಹಾಗೂ ಭಾರತೀಯ ಸಿನಿಮಾ ರಂಗದ ನಟರನ್ನು ಹುಬ್ಬೇರಿಸುವಂತೆ ಮಾಡಿದೆ.
ಕನ್ನಡದ ಕೆಜಿಎಫ್ 2 ಸಿನಿಮಾ ನೋಡಿ...ವಾವ್ ಯಶ್..! ಎಂದ ಬಾಲಿವುಡ್ ನಟ ರಣವೀರ್ ಸಿಂಗ್..!  title=

ಬೆಂಗಳೂರು: ಏಪ್ರಿಲ್ 14 ರಂದು ಕೆಜಿಎಫ್ 2 ಚಿತ್ರದ ಜಗತ್ತಿನಾದ್ಯಂತ ಬಿಡುಗಡೆಯಾದಾಗಿನಿಂದ ಸಿನಿ ಪ್ರಿಯರನ್ನು ಹಾಗೂ ಭಾರತೀಯ ಸಿನಿಮಾ ರಂಗದ ನಟರನ್ನು ಹುಬ್ಬೇರಿಸುವಂತೆ ಮಾಡಿದೆ.ಈ ಚಿತ್ರದ ಮೇಕಿಂಗ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಗೆ ಅವರು ಮಾರು ಹೋಗಿದ್ದಾರೆ.ಇತ್ತೀಚಿಗೆ ಅಂತವರ ಸಾಲಿಗೆ ಸೇರಿದ ಮತ್ತೊಬ್ಬ ವ್ಯಕ್ತಿ ಎಂದರೆ ಬಾಲಿವುಡ್ ನಟ ರಣವೀರ್ ಸಿಂಗ್..!

ಹೌದು..! ಅವರು ಕನ್ನಡ ಕೆಜಿಎಫ್ ಸಿನಿಮಾದ ಬಗ್ಗೆ ಹಾಗೂ ಯಶ್ ಅವರ ಅಭಿನಯದ ಬಗ್ಗೆ ಕೊಂಡಾಡಿದ್ದಾರೆ.ಇತ್ತೀಚಿಗೆ ಫಿಲಂ ಕಂಪಾನಿಯನ್ ಗೆ ನೀಡಿದ ಸಂದರ್ಶನದಲ್ಲಿ ಚಿತ್ರದ ಕುರಿತಾಗಿ ಮಾತನಾಡಿರುವ  ರಣವೀರ್ ಸಿಂಗ್ "ಕೆಜಿಎಫ್:ಚಾಪ್ಟರ್  2 ನೋಡಿದಾಗ ನನಗೆ ನಿಜಕ್ಕೂ ವಾವ್ ಎನಿಸಿತ್ತು..ರಾಕಿಂಗ್ ಸ್ಟಾರ್ ಯಶ್..ವಾವೋ. ಸಿನಿಮಾದುದ್ದಕ್ಕೂ ' ಯಶ್ ಅವನನ್ನು ಕೊಲ್ಲು, ಎನ್ನುವಂತೆ ಅನಿಸುತ್ತಿತ್ತು...ಆ ತರಹದ ಸಿನಿಮಾ ಇಷ್ಟವಾಯಿತು...ಇದೊಂದು ನನ್ನ ಮೊದಲ ಪ್ರೀತಿ ಎಂದೇ ಹೇಳಬಹುದು, ಅದು ಮಗಧೀರವಾಗಿರಲಿ ಅಥವಾ ಕೆಜಿಎಫ್ ಆಗಿರಲಿ ರಾತ್ರಿ ಒಂಟಿಯಾಗಿ ಹಾಸಿಗೆಯ ಮೇಲೆ ಅಂತಹ ಚಿತ್ರಗಳನ್ನು ನೋಡಿ ಚಪ್ಪಾಳೆ ತಟ್ಟುತ್ತೇನೆ.ಪ್ರೇಕ್ಷಕರೊಂದಿಗೆ ನೋಡದಿದ್ದರೂ, ನಾನು ಇನ್ನೂ ಕೂಗಿ, ಹುರಿದುಂಬಿಸುತ್ತೇನೆ.ಅಂತಹ ಸಿನಿಮಾಗಳೆಂದರೆ ನನಗೆ ಇಷ್ಟ" ಎಂದು ಅವರು ಕೊಂಡಾಡಿದ್ದಾರೆ.

ಇತ್ತೀಚಿಗೆ ದಂಗಲ್ ನಂತಹ ಚಿತ್ರದ ದಾಖಲೆಯನ್ನು ಹಿಂದಿಕ್ಕುವ ಮೂಲಕ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೆಜಿಎಫ್ ೨ ಚಿತ್ರ ಪಾತ್ರವಾಗಿದೆ.ಮೊದಲ ಸ್ಥಾನದಲ್ಲಿರುವ ಬಾಹುಬಲಿ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ 510 ಕೋಟಿ ರೂ.ಗಳಿಸಿದ್ದರೆ, ಕೆಜಿಎಫ್ ಚಿತ್ರವು ಇದುವರೆಗೆ 412 ಕೋಟಿ ರೂ.ಸಂಪಾದಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News