Bollywood News : ಬಾಲಿವುಡ್‌ ನಟ ವಿಜಯ್‌ ವರ್ಮಾ ಅವರು ಮಿಲ್ಕಿ ಬ್ಯೂಟಿ ತಮನ್ನಾ ಜೊತೆಗೆ ಪ್ರೇಮ ಸಂಬಂಧವನ್ನು ಹೊಂದಿದ್ದಾರೆ ಎಂದು ಕೆಲ ದಿನಗಳಿಂದ ಬಾಲಿವುಡ್‌ ಅಂಗಳದಲ್ಲಿ ಸುದ್ದಿಯೊಂದು ಹರಿದಾಡುತ್ತಿತ್ತು. ಇದರ ನಡುವೆಯೇ ಅವರಿಬ್ಬರು ಒಟ್ಟಿಗೆ ವೆಬ್‌ ಸಿರೀಸ್‌ಗಳಲ್ಲಿ ನಟಿಸಿ ಎಲ್ಲರು ಹುಬ್ಬೆರಿಸುವಂತೆ ಮಾಡಿದ್ದರು. 


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಎಲ್ಲ ನಟ ನಟಿಯರು ತಮ್ಮ ಪ್ರೇಮ ಸಂಬಂಧಗಳ ಬಗ್ಗೆ ಏನು ಹೇಳಿಕೊಳ್ಳುದಿಲ್ಲ. ಡೇಟಿಂಗ್‌ ಮಾಡುತ್ತಿದ್ದರು ಸಹ ಸಿಕ್ರೇಟ್‌ ಮೆಂಟೇನ್‌ ಮಾಡಿರುತ್ತಾರೆ. ಸಂಬಂಧ ವಿವಾಹದ ಹಂತಕ್ಕೆ ಬಂದಾಗ ಮಾತ್ರ ಆ ರಹಸ್ಯ ಹೊರಬರುತ್ತದೆ. ಆದರೆ ವಿಜಯ್‌ ವರ್ಮಾ ತಮ್ಮ ಸಂಬಂಧದ ಬಗ್ಗೆ ಏಕೆ ಮುಚ್ಚುಮರೆ ಮಾಡುವುದಿಲ್ಲ ಎಂಬ ಪ್ರಶ್ನೆಗೆ ನೇರವಾಗಿ ಉತ್ತರ ನೀಡಿದ್ದಾರೆ. 


ಇದನ್ನೂ ಓದಿ-Bollywood : 5 ಅಫೇರ್, 2 ಮದುವೆ.. ಆದರೂ‌ ಒಂಟಿ ಜೀವನ ಕಳೆಯುತ್ತಿರುವ ಖ್ಯಾತ ನಟಿ


ಒಂದು ಖಾಸಗಿ ಚಾನೆಲ್‌ನೊಂದಿಗಿನ ಸಂದರ್ಶನದಲ್ಲಿ ಭಾಗಿಯಾಗಿದ್ದ ವಿಜಯ್‌ ವರ್ಮಾ ತಮ್ಮ ಪ್ರೀತಿ, ಕರಿಯರ್‌, ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅವರಿಗೆ ಸಂದರ್ಶನಕಾರರು ನೀವು ಇತರ ಬಾಲಿವುಡ್‌ ನಟ ನಟಿಯರಂತೆ ನಿಮ್ಮ ಮತ್ತು ತಮನ್ನಾ ನಡುವಿನ ಸಂಬಂಧವನ್ನು ಏಕೆ ಮುಚ್ಚಿಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ. 


ಇದಕ್ಕೆ ಒಂದು ಸಾಂಗ್‌ ಮೂಲಕ ವಿಜಯ್‌ ವರ್ಮಾ ಉತ್ತರ ನೀಡಿದ್ದಾರೆ. "ನಾನು ಮುಘಲ್-ಎ-ಆಜಮ್‌ನ 'ಜಬ್ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಈ ಹಾಡು ನನಗೆ ತುಂಬಾ ಇಷ್ಟ...!!" ಪ್ರೀತಿ ಮಾಡುತ್ತಿರುವುದು ನಿಜ ಅಂದಮೇಲೆ ಭಯ ಪಡೋದೇಕೆ ಎಂಬ ಅರ್ಥದಲ್ಲಿ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ. 


ಇನ್ನು ಈ ಹಿಂದೆಯೂ ಒಂದು ಸಂದರ್ಶನದಲ್ಲಿ ಮಾತನಾಡಿದ್ದ ಅವರು ತಮಗೆ ಯಾವ ನಟಿಯೊಂದಿಗೂ ಡೇಟಿಂಗ್‌ ಮಾಡುಲು ಇಷ್ಟವಿರಲಿಲ್ಲ ಎಂದಿದ್ದರು. ಜೊತೆಗೆ ತಮನ್ನಾ ಭೇಟಿ ಅವರ ನಿರ್ಧಾರವನ್ನು ಹೇಗೆ ಬದಲಾಯಿಸಿತು ಎನ್ನುವುದನ್ನು ಸಹ ಹೇಳಿಕೊಂಡಿದ್ದರು. 


ಇದನ್ನೂ ಓದಿ-ಸೋನು ಶ್ರೀನಿವಾಸ್ ಗೌಡ ಹಾಟ್‌ ಅವತಾರ.. ಕೈಯಲ್ಲಿ ಗ್ಲಾಸ್‌, ಸಿಗರೇಟು.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.