`ನಿನ್ನ ಬಗ್ಗೆ ಇರುವುದು ಬರಿ ಪ್ರೀತಿಯಲ್ಲ, ಅದೊಂದು ಹುಚ್ಚುತನ`
ಶನಿವಾರದಂದು ನಟ ರಿತೇಶ್ ದೇಶಮುಖ್ ಅವರು ತಮ್ಮ ಪತ್ನಿ ಮತ್ತು ನಟಿ ಜೆನಿಲಿಯಾ ಅವರೊಂದಿಗೆ ಆತ್ಮೀಯವಾದ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ.
ನವದೆಹಲಿ: ಶನಿವಾರದಂದು ನಟ ರಿತೇಶ್ ದೇಶಮುಖ್ ಅವರು ತಮ್ಮ ಪತ್ನಿ ಮತ್ತು ನಟಿ ಜೆನಿಲಿಯಾ ಅವರೊಂದಿಗೆ ಆತ್ಮೀಯವಾದ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ-IPL 2022 Auction: 7 ಕೋಟಿಗೆ ಆರ್ಸಿಬಿ ಪಾಲಾದ ಡುಪ್ಲೆಸಿಸ್, 6.25 ಕೋಟಿಗೆ ವಾರ್ನರ್ ಸೇಲ್!
ಈ ಪೋಸ್ಟ್ ನಲ್ಲಿ ಅವರು ರಿತೇಶ್ ಜೆನಿಲಿಯಾ ಜೊತೆಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.ಎರಡನೇ ಚಿತ್ರದಲ್ಲಿ ತುಜೆ ಮೇರಿ ಕಸಮ್ ಚಿತ್ರದ ರಿತೇಶ್ ಮತ್ತು ಜೆನಿಲಿಯಾ ಕಾಣಿಸಿಕೊಂಡಿದ್ದಾರೆ.'20 ವರ್ಷಗಳ ಹಿಂದೆ, ಇಂದು...ಎಲ್ಲ ಆರಂಭವಾದಾಗ...ಅದು ಪ್ರೀತಿ ಅಷ್ಟೇ ಆಗಿರಲಿಲ್ಲ, ಅದೊಂದು ಹುಚ್ಚುತನವಾಗಿತ್ತು ಎಂದು ನಟ ರಿತೇಶ್ ದೇಶಮುಖ್ ಬರೆದುಕೊಂಡಿದ್ದಾರೆ.ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಜೆನಿಲಿಯಾ "ಪ್ರತಿ ವರ್ಷವೂ ನಾನು ನೋಡಿದ ಹುಚ್ಚುತನಕ್ಕೆ ಪ್ರೀತಿ ಎನ್ನುತ್ತಾರೆ' ಎಂದು ಅವರು ಬರೆದುಕೊಂಡಿದ್ದಾರೆ.ಇತ್ತೀಚೆಗೆ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ತಮ್ಮ 10ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.
ಇದನ್ನೂ ಓದಿ-#JamesTeaser: ದೊಡ್ಮನೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್; ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್
ಪತ್ನಿ ಜೆನಿಲಿಯಾಗೆ ಶುಭಕೋರಲು ರಿತೇಶ್ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಬೀಚ್‌ನಲ್ಲಿ ಪೋಸ್ ನೀಡುವುದನ್ನು ಕಾಣಬಹುದು.ಫೋಟೋಗಳನ್ನು ಹಂಚಿಕೊಂಡ ರಿತೇಶ್ ದೇಶ್‌ಮುಖ್ 'ನಿಮ್ಮೊಂದಿಗೆ ಇರುವುದು ನನ್ನ ಜೀವನದ ದೊಡ್ಡ ಆಶೀರ್ವಾದ, ನಗು, ಕಣ್ಣೀರು, ಸಂತೋಷ, ಹೋರಾಟ, ಭಯ, ಸಂತೋಷವನ್ನು ಹಂಚಿಕೊಳ್ಳುತ್ತಾ, ನಾವು ಪರಸ್ಪರರ ಕೈಗಳನ್ನು ಹಿಡಿದುಕೊಂಡು ಈ ಮೈಲುಗಳಷ್ಟು ಹೆಜ್ಜೆ ಹಾಕಿದ್ದೇವೆ.ನೀವು ನನ್ನ ಪಕ್ಕದಲ್ಲಿದ್ದರೆ ನಾನು ಏನು ಬೇಕಾದರೂ ಮಾಡಬಹುದೆಂದು ನಾನು ಭಾವಿಸುತ್ತೇನೆ.ನೀವಾಗಿದ್ದಕ್ಕಾಗಿ ಧನ್ಯವಾದಗಳು, ಬೈಕೊ 10 ನೇ ವಾರ್ಷಿಕೋತ್ಸವದ ಶುಭಾಶಯಗಳು.ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಪೋಸ್ಟ್ ವೊಂದರಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ-10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ
ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಫೆಬ್ರವರಿ 3, 2012 ರಂದು ಮುಂಬೈನಲ್ಲಿ ವಿವಾಹವಾದರು ಮತ್ತು ರಿಯಾನ್, ರಹಿಲ್ ದೇಶಮುಖ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.