ಬೆಂಗಳೂರು: 15ನೇ ಆವೃತ್ತಿಯ ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು(IPL 2022 Mega Auction) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಕೆಲವು ಸ್ಟಾರ್ ಆಟಗಾರರು ಕೋಟಿ ಕೋಟಿ ರೂ.ಗೆ ವಿವಿಧ ತಂಡಗಳ ಪಾಲಾಗಿದ್ದಾರೆ. ಮುಖ್ಯವಾಗಿ ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಫಾಫ್ ಡುಪ್ಲೆಸಿಸ್ 7 ಕೋಟಿ ರೂ.ಗೆ ಆರ್ಸಿಬಿ(RCB) ತಂಡದ ಪಾಲಾಗಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ 6.25 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಗೆ ಸೇಲ್ ಆಗಿದ್ದಾರೆ.
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಮೊದಲು ಸೇಲ್ ಆದವರು ಶಿಖರ್ ಧವನ್(Shikhar Dhawan). 2 ಕೋಟಿ ಮೂಲಬೆಲೆ ಹೊಂದಿದ್ದ ಧವನ್ ಅವರನ್ನು ಪಂಜಾಬ್ ಕಿಂಗ್ಸ್ 8.25 ಕೋಟಿ ರೂ.ಗೆ ಖರೀದಿಸಿದೆ. 2 ಕೋಟಿ ಮೂಲಬೆಲೆಯ ಆ.ಅಶ್ವಿನ್ ಕೂಡ 5 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ 7.25 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders)ತಂಡಕ್ಕೆ ಸೇಲ್ ಆಗಿದ್ದಾರೆ.
Faf is now a Royal Challenger 😎😎#TATAIPLAuction @TataCompanies pic.twitter.com/E24r50BYPT
— IndianPremierLeague (@IPL) February 12, 2022
ಇದನ್ನೂ ಓದಿ: IPL 2022: ಅಹಮದಾಬಾದ್ ಫ್ರಾಂಚೈಸಿಗೆ ಗುಜರಾತ್ ಟೈಟಾನ್ಸ್ ಎಂದು ನಾಮಕರಣ ..!
ದಕ್ಷಿಣ ಆಫ್ರಿಕಾದ ಮಾರಕ ವೇಗಿ ಕಗಿಸೋ ರಬಾಡ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದು, ಬರೋಬ್ಬರಿ 9.25 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಖರೀದಿಸಿದೆ. ನ್ಯೂಜಿಲೆಂಡ್ ಮಾರಕ ವೇಗಿ ಟ್ರೆಂಟ್ ಬೌಲ್ಟ್ 8 ಕೋಟಿಗೆ ರಾಜಸ್ಥಾನ್ ರಾಯಲ್ಸ್(Rajasthan Royals)ಗೆ ಸೇಲ್ ಆಗಿದ್ದಾರೆ. ಇವರನ್ನು ಖರೀದಲು RCB ಪೈಪೋಟಿ ನಡೆಸಿತ್ತು. ಭರ್ಜರಿ ಬೇಡಿಕೆ ಸೃಷ್ಟಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು, ಬರೋಬ್ಬರಿ 12.25 ಕೋಟಿಗೆ ಕೆಕೆಆರ್ ತಂಡದ ಪಾಲಾಗಿದ್ದಾರೆ. ಮೊಹಮ್ಮದ್ ಶಮಿ ಕೂಡ 6.25 ಕೋಟಿಗೆ ಗುಜರಾತ್ ತಂಡದ ಪಾಲಾಗಿದ್ದಾರೆ.
Sample that for a bid 💰💰 - @ShreyasIyer15 is a Knight @KKRiders #TATAIPLAuction @TataCompanies pic.twitter.com/19nIII9ihD
— IndianPremierLeague (@IPL) February 12, 2022
2 ಕೋಟಿ ಮೂಲಬೆಲೆ ಹೊಂದಿದ್ದ ಕ್ವಿಂಟನ್ ಡಿಕಾಕ್ 6.75 ಕೋಟಿಗೆ ಲಕ್ನೋ ತಂಡಕ್ಕೆ ಸೇಲ್ ಆಗಿದ್ದಾರೆ. ಕನ್ನಡಿಗ ಮನೀಶ್ ಪಾಂಡೆಯನ್ನು 4.6 ಕೋಟಿಗೆ ಲಕ್ನೋ ಖರೀದಿಸಿದೆ. ಕಳೆದ ಋತುವಿನಲ್ಲಿ ಮಿಂಚಿದ್ದ ರಾಬಿನ್ ಉತ್ತಪ್ಪರನ್ನು 2 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದೆ. 1 ಕೋಟಿ ಮೂಲಬೆಲೆ ಹೊಂದಿರುವ ಡೇವಿಡ್ ಮಿಲ್ಲರ್(David Miller) ಅನ್ಸೋಲ್ಡ್ ಆಗಿದ್ದಾರೆ.
ಇದನ್ನೂ ಓದಿ: IPL Mega Auction 2022 : ಈ 5 ಆಟಗಾರರ ಮೇಲೆ ಭಾರಿ ಬಿಡ್ : ಹಿಂದಿನ ಎಲ್ಲಾ ದಾಖಲೆಗಳು ಉಡೀಸ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.